/newsfirstlive-kannada/media/post_attachments/wp-content/uploads/2025/05/coronavirus-vaccine.jpg)
ಬೆಳಗಾವಿ: ಇದು ಹೆಮ್ಮಾರಿ.. ಬೆಂಬಿಡದ ಹೆಮ್ಮಾರಿ.. ಹೊಸ ಇನ್ನಿಂಗ್ಸ್ ಶುರು ಮಾಡ್ಕೊಂಡು ಸಿಂಗಾಪುರ, ಹಾಂಕಾಂಗ್‌ನಲ್ಲಿ ಆರ್ಭಟಿಸಿದ ಬಳಿಕ ಭಾರತಕ್ಕೂ ಎಂಟ್ರಿಯಾಗಿ ಪಕ್ಕದ ಕೇರಳದಲ್ಲಿ ತಾಂಡವ ಆಡ್ತಿತ್ತು. ಈಗ ಬೆಂಗಳೂರಿಗೂ ಮತ್ತೊಮ್ಮೆ ಎಂಟ್ರಿ ಕೊಟ್ಟಿದೆ.
ಈಗ ಬದಲಾಗುತ್ತಿರೋ ಸಿಟಿ ವೆದರ್ ಜನರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದಲ್ಲಿ ಗಾಳಿ ಮಳೆ ಹೆಚ್ಚಾಗ್ತಿದೆ. ಮನೆಗಳಿಗೆ ನೀರು ನುಗ್ಗಿ ಅವಾಂತರಗಳ ಪಟ್ಟಿ ಬೆಳೀತಿದೆ. ಅತ್ತ ಉಸಿರು ಗಟ್ಟಿಸೋ ವಾತಾವರಣ ಉದ್ಭವಿಸ್ತಾ ಹೋದ್ರೆ, ಇತ್ತ ಇಡೀ ದೇಶವನ್ನೇ ತಲೆಕೆಳಗೆ ಮಾಡ್ಬಿಟ್ಟಿದ್ದ ಕೊರೊನಾ ಗಾಳಿ ಮತ್ತೆ ಬೆಂಗಳೂರಿಗೆ ಬೀಸಿದೆ.
ಇದನ್ನೂ ಓದಿ:ನಟ ಮಡೆನೂರು ಮನುಗೆ ಬಿಗ್ ಶಾಕ್.. ಪೊಲೀಸ್ ವಿಚಾರಣೆಯಲ್ಲಿ ಸಂತ್ರಸ್ತೆ ಸಾಕ್ಷ್ಯ ದಾಖಲು; ಹೇಳಿದ್ದೇನು?
ಇದೀಗ ಬೆಳಗಾವಿ ನಗರದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. 25 ವರ್ಷದ ಗರ್ಭಿಣಿ ಮಹಿಳೆಗೆ ಕೋವಿಡ್ ಪಾಸಿಟಿವ್ ಬಂದಿದೆ. ಗರ್ಭಿಣಿ ಮಹಿಳೆಯೂ ಬೇರೆ ಬೇರೆ ಕಾರಣದಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಗರ್ಭಿಣಿ ಮಹಿಳೆಗೆ ಚಿಕಿತ್ಸೆ.
ಈ ಬಗ್ಗೆ ಬೆಳಗಾವಿ ಡಿಎಚ್ಓ ಡಾ.ಈಶ್ವರ ಗಡಾದಿ ಮಾಹಿತಿ ನೀಡಿದ್ದಾರೆ. ಜೊತೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸರ್ಕಾರದಿಂದ ಗೈಡ್ ಲೈನ್ಸ್ ಬಂದಿದೆ. ಸರ್ಕಾರದ ಸೂಚನೆ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ 05 ಬೆಡ್ ಮೀಸಲು ಇಡಲಾಗಿದೆ. ಕೊರೊನಾ ವೈರಸ್ ಸಂಬಂಧ ಮುಂಜಾಗ್ರತಾ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ವೃದ್ಧರು, ಒಂದು ವರ್ಷದ ಮಕ್ಕಳು ಹಾಗೂ ಕ್ಯಾನ್ಸರ್ ಪೀಡಿತರು ಗುಂಪಿನಲ್ಲಿ ಸೇರಿದಂತೆ ಡಿಎಚ್ಓ ಮನವಿ ಮಾಡಿಕೊಳ್ಳಲಾಗಿದೆ. ಇನ್ನೂ, ನೆರೆಯ ಮಹಾರಾಷ್ಟ್ರದಲ್ಲಿ 56ಕ್ಕೂ ಅಧಿಕ ಹೆಚ್ಚು ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಹೀಗಾಗಿ ಗಡಿ ಜಿಲ್ಲೆ ಬೆಳಗಾವಿ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಜನರಲ್ಲಿ ಆತಂಕ ಮನೆಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ