/newsfirstlive-kannada/media/post_attachments/wp-content/uploads/2024/11/BALLARY_1.jpg)
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಮೂವರು ಬಾಣಂತಿಯರು ಪ್ರಾಣ ಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು 4 ದಿನಗಳು ಕಳೆದಿವೆ. ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಮೆಡಿಸಿನ್ ರಿಯಾಕ್ಷನ್​ನಿಂದ ದುರಂತ ನಡೆದಿದೆ ಎಂದು ಆರೋಪಿಸಲಾಗಿದೆ.
ನವೆಂಬರ್ 10 ರಂದು 7 ಬಾಣಂತಿಯರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಮೂವರು ಈಗಾಗಲೇ ಕಣ್ಣು ಮುಚ್ಚಿದ್ದಾರೆ. ನವೆಂಬರ್ 10 ರಂದು ಸಿಜೆರಿಯನ್ ಹೆರಿಗೆ ಬಳಿಕ ಬಾಣಂತಿ ಲಲಿತಮ್ಮ ಹಾಗೂ ನಂದಿನಿ ಪ್ರಾಣ ಬಿಟ್ಟಿದ್ದರು. ನವೆಂಬರ್ 13ರಂದು ಸರೋಜಮ್ಮ ಎಂಬ ಬಾಣಂತಿ ಜೀವ ಬಿಟ್ಟಿದ್ದಾರೆ. ಉಳಿದ ನಾಲ್ವರು ಬಾಣಂತಿಯರಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ಸಂಭವಿಸಿ ನಾಲ್ಕು ದಿನಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತ್ರ ಸುಳಿದಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
/newsfirstlive-kannada/media/post_attachments/wp-content/uploads/2024/11/BALLARY_2.jpg)
ಘಟನೆಗೆ ಕೆಎಸ್​​ಎಂಎಸ್​​ಸಿಎಲ್ ನೀಡಿದ ಔಷಧಿ ಕಾರಣನಾ? ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಗ್ಲೂಕೋಸ್​​ಗಳನ್ನ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಕಳುಹಿಸಿಕೊಡುತ್ತದೆ. ಸಿಜೆರಿಯನ್ ಬಳಿಕ ಐವಿ ಫ್ಲೂಯಿಡ್ ಹಾಗೂ NSL ಗ್ಲೂಕೋಸ್ ಅನ್ನು ವೈದ್ಯರು ಹಾಕಿದ್ದರು. ಸಿಜೇರಿಯನ್ ಮಾಡಿದ ಮಹಿಳೆಯರಿಗೆ ಮಾತ್ರ ಈ ರೀತಿ ಆಗಿದೆ.
ಪಶ್ಚಿಮ ಬಂಗಾಳ ಮೂಲದ ಖಾಸಗಿ ಮೆಡಿಕಲ್ ಸರಬರಾಜು ಕಂಪನಿಯಿಂದ ಗ್ಲೂಕೋಸ್​ ಖರೀದಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಪಶ್ಚಿಮ ಬಂಗಾಳ ಮೂಲದ ಈ ಮೆಡಿಸಿನ್ ಸಪ್ಲೇ ಕಂಪನಿಯನ್ನ ಬ್ಲಾಕ್ ಲಿಸ್ಟ್​ಗೆ ಹಾಕಲಾಗಿತ್ತಂತೆ. ಇದೇ ಕಂಪನಿ ನೀಡಿದ ಮೆಡಿಸಿನ್ ಪಡೆದು ತುಮಕೂರಿನಲ್ಲೂ ಹಲವರು ಪ್ರಾಣ ಬಿಟ್ಟಿದ್ದರು. ಇದೀಗ ಬಳ್ಳಾರಿಯಲ್ಲೂ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us