/newsfirstlive-kannada/media/post_attachments/wp-content/uploads/2025/01/BLY_KIDNAP_1.jpg)
ಸಿನಿಮೀಯ ರೀತಿಯಲ್ಲಿ ಕಿಡ್ನಾಪ್​​​ ಆಗಿದ್ದ ಬಳ್ಳಾರಿ ಡಾಕ್ಟರ್​​ ಕೇಸ್​​ ಸುಖ್ಯಾಂತವಾಗಿದೆ. ನಿನ್ನೆ ಬೆಳಗ್ಗೆ ಕಿಡ್ನಾಪ್ ಆಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್​ರನ್ನ ಅಪಹರಣಕಾರರು ಊರು ಸುತ್ತಾಡಿಸಿ ಕೈಗೆ 300 ರೂಪಾಯಿ ಕೊಟ್ಟು ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ..
ಜಿಲ್ಲಾಸ್ಪತ್ರೆ ವೈದ್ಯ ಸುನೀಲ್ ಕಿಡ್ನಾಪ್ ಪ್ರಕರಣ ಸುಖಾಂತ್ಯ
ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಸುನೀಲ್​​ ಕಿಡ್ನಾಪ್​ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ನಿನ್ನೆ ಬೆಳಗ್ಗೆ ಡಾಕ್ಟರ್​ ಸುನೀಲ್​ ವಾಕಿಂಗ್​ ಮಾಡುವಾಗ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ವೈದ್ಯ ಸುನೀಲ್​ರನ್ನು ಕಿಡ್ನ್ಯಾಪ್​ ಮಾಡಿದ್ದರು. ಬೆಳಗ್ಗೆ ಅಪಹರಣ ಮಾಡಿದವರು. ಊರೂರು ಸುತ್ತಾಡಿಸಿದ ಬಿಟ್ಟು ಕಳಿಸಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
6 ಕೋಟಿ ಹಣ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು
ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯರಾಗಿರುವ ಡಾ.ಸುನೀಲ್ ಅವರನ್ನ ದುಷ್ಕರ್ಮಿಗಳು ಕಿಡ್ನ್ಯಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸುನೀಲ್​ ಅವರ ಮೊಬೈಲ್​ನಿಂದ ಸುನೀಲ್​ ಸಹೋದರ ವೇಣು ಅವರಿಗೆ ಕರೆ ಮಾಡಿ 3 ಕೋಟಿ ನಗದು ಹಾಗೂ 3 ಕೋಟಿ ಮೌಲ್ಯದ ಬಂಗಾರಕ್ಕೆ ಡಿಮ್ಯಾಂಡ್​ ಮಾಡಿದ್ದರು. ವೈದ್ಯನ ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆ ಬಳ್ಳಾರಿ ಪೊಲೀಸರು ಫುಲ್​ ಅಲರ್ಟ್​ ಆಗಿ, ಶೋಧ ಕಾರ್ಯಕ್ಕೆ ಮುಂದಾಗಿದ್ದರು.
ಕೈಗೆ ₹300 ಕೊಟ್ಟು ಬಿಟ್ಟು ಹೋದ ಕಿಡ್ನಾಪರ್ಸ್​
ಆರು ಕೋಟಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರಿಗೆ ಅದೇನ್​ ಬುದ್ಧಿ ಬಂತೋ ಗೊತ್ತಿಲ್ಲ. ರಾತ್ರಿ 8 ಸುಮಾರಿಗೆ ಸೋಮಸಮುದ್ರ ಗ್ರಾಮದ ಬಳಿ ಡಾಕ್ಟರ್​ ಸುನೀಲ್​ ಅವರನ್ನ ಬಿಟ್ಟು ಕಳಿಸಿದ್ದಾರೆ. ಈ ವೇಳೆ ವೈದ್ಯ ಸುನೀಲ್​ ಕೈಗೆ 300 ರೂಪಾಯಿ ಕೊಟ್ಟು ಬಸ್​​ ಹತ್ಕೊಂಡು ಹೋಗಿ ಅಂತಾ ಬಿಟ್ಟು ಕಳಿಸಿದ್ದಾರೆ. ಕಿಡ್ನಾಪರ್ಸ್​ ಬಿಡುತ್ತಿದ್ದಂತೆ ಬದುಕಿತಲೇ ಬಡ ಜೀವ ಅಂತಾ ಓಡೋಡಿ ಬಂದ ಡಾಕ್ಟರ್​ ಸುನೀಲ್​​, ಮನೆಯವ್ರನ್ನ ಸಂಪರ್ಕಿಸಿ ಬಳಿಕ ಮನೆಗೆ ಬಂದಿದ್ದಾರೆ.
ಇದನ್ನೂ ಓದಿ: ಗೊಂಬೆಯಾಟದ ಭೀಮವ್ವಗೆ ಪದ್ಮಶ್ರೀ.. ಗ್ರಾಮೀಣ ಭಾರತದ ರಿಯಲ್ ಸೂಪರ್​ ಸ್ಟಾರ್ಸ್ ಇವ್ರು! ಹೇಗೆ ಗೊತ್ತಾ?
ಇನ್ನು, ವೈದ್ಯರ ಕಿಡ್ನಾಪ್​ಗೆ ಅವರ ಸಹೋದರರನ ವ್ಯವಹಾರ ಲಿಂಕ್ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದ್ರೀಗ ಪ್ರಕರಣ ಸುಖಾಂತ್ಯ ಕಂಡಿದೆ. ವೈದ್ಯ ಸುನೀಲ್​ನಲ್ಲಿ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಸದ್ಯ ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಆದ್ರೆ, ಡಾಕ್ಟರ್​ರನ್ನ ಕಿಡ್ನಾಪ್​ ಮಾಡಿದ್ದು ಯಾರು? ಯಾಕಾಗಿ ಕಿಡ್ನಾಪ್​​ ಮಾಡಿದರು ಅನ್ನೋದು ಪೊಲೀಸರ ತನಿಖೆಯಿಂದಲೇ ತಿಳಿದು ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ