/newsfirstlive-kannada/media/post_attachments/wp-content/uploads/2024/10/Darshan-bellary-Jail-16.jpg)
ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಸೆರೆವಾಸ ಮುಂದುವರಿದಿದೆ. ಇಷ್ಟು ದಿನ ಜಾಮೀನಿಗಾಗಿ ಕಾಯುತ್ತಿದ್ದ ದರ್ಶನ್‌ಗೆ ಕೋರ್ಟ್ ತೀರ್ಪು ನಿರಾಸೆ ತಂದಿದೆ. ಇದರ ಜೊತೆಗೆ ಬೆನ್ನು ನೋವು ದರ್ಶನ್ ಅವರನ್ನ ಕಾಡುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಮನವಿಯನ್ನು ಮಾಡಿದ್ದರು.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದರು. ನಿನ್ನೆ ಜೈಲಾಧಿಕಾರಿಗಳಿಗೆ ಮೆಡಿಕಲ್ ವರದಿ ಸಲ್ಲಿಕೆಯಾಗಿದೆ. ಈ ಮೆಡಿಕಲ್ ರಿಪೋರ್ಟ್‌ನ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದರು.
/newsfirstlive-kannada/media/post_attachments/wp-content/uploads/2024/10/Bellary-Jail-Darshan-2.jpg)
ದರ್ಶನ್ ಅವರ ತಪಾಸಣೆ ನಡೆಸಿದ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಅವರು ಬೆಡ್ & ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಬೆಡ್ & ದಿಂಬು ರವಾನೆ ಮಾಡಲಾಗಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಬೆಡ್ & ದಿಂಬ ಅನ್ನು ತರಲಾಯಿತು. ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಇರುವ ಬ್ಯಾರೆಕ್‌ಗೆ ಶಿಫ್ಟ್ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/Darshan-Back-Pain.jpg)
ವೈದ್ಯರ ಸಲಹೆಗೆ ಮೊಂಡುತನ!
ಜೈಲಿನಲ್ಲಿರುವ ದರ್ಶನ್‌ಗೆ ದಿನ ಕಳೆದಂತೆ ಬೆನ್ನು ನೋವು ಉಲ್ಬಣವಾಗುತ್ತಿದೆ. ಈ ಬಗ್ಗೆ ತಪಾಸಣೆ ನಡೆಸಿದ ವೈದ್ಯರು, ಜೈಲಲ್ಲೇ ಬೆನ್ನು ನೋವಿಗೆ ಚಿಕಿತ್ಸೆ ನೀಡುವ ಸಲಹೆ ನೀಡಿದ್ದರು. ಆದರೆ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದ ದರ್ಶನ್ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು.
ಇದನ್ನೂ ಓದಿ: Breaking News: ಮತ್ತೆ ಹುಟ್ಟಿ ಬಂದ ರೇಣುಕಾಸ್ವಾಮಿ! ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡ ಕುಟುಂಬ
ಜೈಲಿನಲ್ಲಿರುವ ವೈದ್ಯರ ಮನವಿಗೂ ಕ್ಯಾರೆ ಎನ್ನದ ದರ್ಶನ್ ಅವರು ತಮ್ಮ ಮೊಂಡುತನ ಬಿಟ್ಟಿರಲಿಲ್ಲ. ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಅಂದ್ರೆ ಲೆಟರ್ ಬರೆದುಕೊಡಿ ಎಂದು ಜೈಲಾಧಿಕಾರಿಗಳಿಗೆ ತಿಳಿಸಿದ್ದರು. ಪದೇ ಪದೇ ದರ್ಶನ್ ಅವರು ನೀಡುತ್ತಿದ್ದ ಉತ್ತರಕ್ಕೆ ಬೇಸತ್ತ ಜೈಲು ಸಿಬ್ಬಂದಿ ಕೊನೆಗೆ ಜೈಲಲ್ಲೇ ಬೆಡ್ & ದಿಂಬಿನ ಸೌಲಭ್ಯ ನೀಡಲು ಒಪ್ಪಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us