/newsfirstlive-kannada/media/post_attachments/wp-content/uploads/2024/09/Darshan-Bellary-Jail-2.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಬೇರೆ ಬೇರೆ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಸೆಂಟ್ರಲ್ ಜೈಲಿಗೆ ಹೋದಾಗಿನಿಂದಲೂ ದರ್ಶನ್ ಒಂದಲ್ಲಾ ಒಂದು ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದಾರೆ. ಯಾವಾಗ ಪೊಲೀಸ್ ಅಧಿಕಾರಿಗಳು ದರ್ಶನ್ ಅಂಡ್ ಗ್ಯಾಂಗ್​ ಕೃತ್ಯದ ರೆಕಾರ್ಡ್​ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೋ ಅವಾಗಿನಿಂದ ದರ್ಶನ್​​ಗೆ ಭಯ ಶುರುವಾಗಿಬಿಟ್ಟಿದೆ.
/newsfirstlive-kannada/media/post_attachments/wp-content/uploads/2024/09/darshan9.jpg)
ಪೊಲೀಸರು ನೀಡಿದ ಚಾರ್ಜ್​ಶೀಟ್​ನಲ್ಲಿ ಏನೆಲ್ಲಾ ಇದೆ ಅನ್ನೋದನ್ನ ತಿಳಿಯಲು ದರ್ಶನ್​ ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಅಧಿಕಾರಿಗಳು ನಾನು ಕೇಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂದುಕೊಂಡಿದ್ದ ದರ್ಶನ್​ಗೆ ನಿರಾಸೆಯಾಗಿದೆ. ಹೌದು,​ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್​ಗೆ ಬಾಡಿ ಮೆಂಟೇನ್ ಬಗ್ಗೆ ಚಿಂತೆ ಶುರುವಾಗಿತ್ತು. ಹೀಗಾಗಿ ಪ್ರೋಟೀನ್, ವಿಟಮಿನ್ಸ್ ಬಾಟಲ್‌ಗಳು ಬೇಕು. ನಮ್ಮ ಕುಟುಂಬಸ್ಥರ ಮೂಲಕ ತರಿಸಿ ಕೊಡಿ. ದೇಹ ಗಾತ್ರವನ್ನು ಸರಿಯಾಗಿ ಉಳಿಸಿಕೊಳ್ಳಲಿಲ್ಲ ಅಂದ್ರೆ ನನಗೆ ಕಷ್ಟ ಆಗುತ್ತೆ ಅಂತ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ:ದರ್ಶನ್​ ಮತ್ತೊಂದು ಬೇಡಿಕೆ ಈಡೇರಿಸಿದ ಬಳ್ಳಾರಿ ಜೈಲು ಅಧಿಕಾರಿಗಳು; ಏನದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us