newsfirstkannada.com

ಮಟ ಮಟ ಮಧ್ಯರಾತ್ರಿ ಸೃಷ್ಟಿಯಾಯ್ತು ಬೆಳ್ಳುಳ್ಳಿ ಕಬಾಬ್; ಅಂದು ಅಪ್ಪು ಕೂಡ ಒನ್​​ ಮೋರ್.. ಒನ್​ ಮೋರ್ ಅಂದಿದ್ರು

Share :

Published February 13, 2024 at 6:25am

Update February 13, 2024 at 9:08am

    ಅಪ್ಪುಗೂ ಬೆಳ್ಳುಳ್ಳಿ ಕಬಾಬ್​​ ಚಂದ್ರು ಕೈ ರುಚಿ ಇಷ್ಟವಂತೆ!​​

    ಬೆಳ್ಳುಳ್ಳಿ ಕಬಾಬ್​​ ಮೂಲಕ ಸಖತ್​ ಫೇಮಸ್ ಆದ ಚಂದ್ರು

    ಎಲ್ಲಿ ನೋಡಿದರೂ ಬೆಳ್ಳುಳ್ಳಿ ಕಬಾಬ್​ ಚಂದ್ರುದೇ ಮಾತು ಕಥೆ

ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು. ಇವತ್ತು ಎರಡೇ ಟ್ರೇಂಡು. ಒಂದು ಕರಿಮಣಿ ಮಾಲೀಕ. ಮತ್ತೊಂದು ಬೆಳ್ಳುಳ್ಳಿ ಕಬಾಬ್. ಅಲ್ಲಾಡಸು.. ಚಟ್​ಪಟ್​.. ಒನ್​​ ಮೋರ್.. ಒನ್​ ಮೋರ್.. ಆಹಾ ಈ ಮೂರು ಡೈಲಾಗ್​ ಬೆಳ್ಳುಳ್ಳಿ ಕಬಾಬ್​ನಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದ್ವು. ಅಷ್ಟಕ್ಕೂ ಈ ಬೆಳ್ಳುಳ್ಳಿ ಕಬಾಬ್​ ಸೂತ್ರದಾರ ನಿಮ್ಮ ಮನೆ ಹೋಟೆಲ್​​ನ ಚಂದ್ರು. ಅಸಲಿಗೆ ಈ ಬೆಳ್ಳುಳ್ಳಿ ಕಬಾಬ್​ನ್ನ ಚಂದ್ರು ತಮಾಷೆಗೆ ಅಂತ ಮಾಡಿದ್ದು. ಚಂದ್ರು ಅವರ ಗೆಳೆಯರೊಬ್ಬರು ಮಟ ಮಟ ಮಧ್ಯರಾತ್ರಿಗೆ ಸ್ಪೆಷಲ್​ ಏನಾದ್ರು ಮಾಡಿ ಅಂದಾಗ ಸೃಷ್ಟಿಯಾಗಿದ್ದೇ ಈ ಬೆಳ್ಳುಳ್ಳಿ ಕಬಾಬ್.

ಹೌದು, ಚಂದ್ರು ಫ್ರೆಂಡ್ ಸ್ಪೆಷಲ್ ಮಾಡು ಅಂದಿದ್ದೆ ತಡ ಮಧ್ಯರಾತ್ರಿ 12 ಗಂಟೆಗೆ 4 ಬೆಳ್ಳುಳ್ಳಿ, ಚಿಕನ್​, ಹಾಕಿ ಟ್ರೆಂಡ್ ಸೃಷ್ಟಿಸಿರುವ ಬೆಳ್ಳುಳ್ಳಿ ಕಬಾಬ್​​ನ್ನ ಚಂದ್ರು ರೆಡಿ ಮಾಡಿಬಿಟ್ಟಿದ್ರು. ಈ ಬೆಳ್ಳುಳ್ಳಿ ಕಬಾಬ್ ವೈರಲ್ ಆಗಿದ್ದೇ ಆಗಿದ್ದು ಈಗ ಚಂದ್ರ ಅವರು ಮನೆ ಮನೆ ಮಾತಾಗಿದ್ದಾರೆ. ಇನ್​ಸ್ಟಾ ಓಪನ್ ಮಾಡಿದ್ರೂ, ಯಾರ್ ಮೊಬೈಲ್ ನೋಡಿದ್ರು ಅಲ್ಲಿ ಚಂದ್ರು ಸೃಷ್ಟಿಸಿದ ಬೆಳ್ಳುಳ್ಳಿ ಕಬಾಬ್​ನದ್ದೆ ಸೌಂಡು. ಈಗಂತೂ ಚಂದ್ರು ಒಂಥರಾ ಸೆಲೆಬ್ರಿಟಿ ಆಗ್ಬಿಟ್ಟಿದ್ದಾರೆ. ಈ ಟ್ರೆಂಡ್​​ನಿಂದ ಇವರ ಹೋಟೆಲ್​ಗೆ ಬರುವ ಕಸ್ಟಮರ್​​ಗೆ ಸಪ್ಲೇ ಮಾಡೋದ್ರಲ್ಲಿ ಚಂದ್ರು ಅವರೇ ಸುಸ್ತಾಗಿ ಬಿಟ್ಟಿದ್ದಾರೆ. ಬಂದವರೆಲ್ಲ ಬರೀ ಬೆಳ್ಳುಳ್ಳಿ ಕಬಾಬ್​​ನ್ನೆ ಆರ್ಡರ್ ಮಾಡ್ತಿದ್ದಾರೆ. ಹೀಗಾಗಿ ಚಂದ್ರು ಫುಲ್ ಫೇಮಸ್ ಆಗಿದ್ದಾರೆ.

ಅಣ್ಣಾವ್ರ ಮನೆಯಲ್ಲಿ ಕೆಲಸ ಮಾಡ್ತಿದ್ರು ಚಂದ್ರು

ಬೆಳ್ಳುಳ್ಳಿ ಕಬಾಬ್​​ ಮೂಲಕ ಫೇಮಸ್ ಆಗಿರುವ ಚಂದ್ರು ಕರ್ನಾಟಕ ರತ್ನ ಡಾ. ರಾಜ್​ಕುಮಾರ್ ಮನೆಯಲ್ಲೂ ಕೆಲಸ ಮಾಡಿದ್ದಾರೆ. ಒಂದರ್ಥದಲ್ಲಿ ಚಂದ್ರು ಹೋಟೆಲ್ ಶುರು ಮಾಡೋಕೆ ಅಣ್ಣಾವ್ರೆ ಸ್ಫೂರ್ತಿ ಅಂದ್ರು ತಪ್ಪಾಗಲ್ಲ. ಇದಷ್ಟೆ ಅಲ್ಲ ಡೈನಾಮಿಕ್ ಕ್ವೀನ್, ಕನಸಿನ ರಾಣಿ ಮಾಲಾಶ್ರೀಗೂ ಮೇಕಪ್​ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 79 ಸಿನಿಮಾಗಳಿಗೆ ಚಂದ್ರು ಮೇಕಪ್ ಮ್ಯಾನ್ ಆಗಿ ವರ್ಕ್ ಮಾಡಿದ್ದಾರೆ. ಆ ಕೆಲಸದಿಂದ ಬೇಸತ್ತು ಕೊನೆಗೆ ಪುಟ್​ಪಾತ್​ನಲ್ಲಿ ಚಂದ್ರು ಹೋಟೆಲ್ ಶುರು ಮಾಡಿದ್ರು. ಅವತ್ತು ಶುರು ಮಾಡಿದ ಹೋಟೆಲ್​ ಇವತ್ತಿಗೂ ಚಂದ್ರು ಕೈ ಬಿಟ್ಟಿಲ್ಲ.

ಚಂದ್ರು ಮಾಡುವ ನಾನ್​ವೆಜ್ ತಿಂದು ಅಪ್ಪು ಕೂಡ ಒನ್​ ಮೋರ್ ಅಂದಿದ್ರು

ಹೌದು, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಕೂಡ ಚಂದ್ರು ಕೈ ರುಚಿಗೆ ಫ್ಯಾನ್​​. ಚಂದ್ರು ಮಾಡುವ ನಾಟಿ ಕೋಳಿ ಸಾರು. ಮಟನ್ ಸಾರು, ಕೈಮಾ ಸಾರು, ಮಟನ್ ಬಿರಿಯಾನಿ ಅಂದ್ರೆ ಪುನೀತ್ ಸಿಕ್ಕಾಪಟ್ಟೆ ಇಷ್ಟ ಪಡ್ತಿದ್ರಂತೆ. ಅಪ್ಪು ಕೊನೆ ಸಿನಿಮಾದ ಶೂಟಿಂಗ್ ವೇಳೆ ಕೂಡ ಚಂದ್ರು ಅಪ್ಪುಗೆ ಮಟನ್ ಸಾರು ಮಾಡುವ ವಿಡಿಯೋ ಮಾಡಿ ಕಳಿಸಿದ್ರಂತೆ. ಚಂದ್ರು ಮಾಡಿದ ಅಡುಗೆ ತಿಂದು ಅಪ್ಪು ಕೂಡ ಒನ್ ಮೋರ್ ಒನ್​ ಮೋರ್ ಅಂದಿದ್ರಂತೆ. ಹೀಗಾಗಿ ಇವತ್ತಿಗೂ ಚಂದ್ರುಗೆ ಅಣ್ಣಾವ್ರ ಮನೆ ಅಂದ್ರೆ ಒಂದು ಗೌರವ ಮತ್ತು ಪ್ರೀತಿ. ಅದೇನೆ ಇರಲಿ ಒಂದೇ ಒಂದು ವಿಡಿಯೋ ಸದ್ಯ ಚಂದ್ರುರನ್ನ ಸೆಲೆಬ್ರಿಟಿ ಮಾಡಿದ್ದು, ಸದ್ಯ ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತಲೇ ಟ್ರೆಂಡ್ ಸೆಟ್​ ಮಾಡಿದಂತು ಸುಳ್ಳಲ್ಲ.

ವಿಶೇಷ ವರದಿ: ಮರಲಿಂಗ್ ಹಳಿಗೇರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಟ ಮಟ ಮಧ್ಯರಾತ್ರಿ ಸೃಷ್ಟಿಯಾಯ್ತು ಬೆಳ್ಳುಳ್ಳಿ ಕಬಾಬ್; ಅಂದು ಅಪ್ಪು ಕೂಡ ಒನ್​​ ಮೋರ್.. ಒನ್​ ಮೋರ್ ಅಂದಿದ್ರು

https://newsfirstlive.com/wp-content/uploads/2024/02/belili-kabab.webp

Load More