ಬೆಂಗಳೂರಿನ BEMLನಲ್ಲಿ ಭರ್ಜರಿ ಉದ್ಯೋಗಗಳು.. ಪರೀಕ್ಷೆ ಇಲ್ಲ, ಇಂಟರ್​ವ್ಯೂವ್ ಮಾತ್ರ

author-image
Bheemappa
Updated On
ತಿಂಗಳಿಗೆ ಬರೋಬ್ಬರಿ 50 ಸಾವಿರ ಸಂಬಳ; ಬೆಂಗಳೂರಿಗರು ಈಗಲೇ ಕೆಲಸಕ್ಕೆ ಅಪ್ಲೈ ಮಾಡಬಹುದು!
Advertisment
  • ಹುದ್ದೆಗಳಿಗೆ ಯಾವ್ಯಾವ ಕೋರ್ಸ್ ಆದವ್ರು ಅಪ್ಲೇ ಮಾಡಬಹುದು?
  • ಉದ್ಯಾನನಗರಿಯಲ್ಲೇ ಕೆಲಸ ಬೇಕು ಎನ್ನುವರಿಗೆ ಸುವರ್ಣಾವಕಾಶ
  • ಒಟ್ಟು ಎಷ್ಟು ಉದ್ಯೋಗಗಳಿಗೆ ಇಲಾಖೆ ಕಾಲ್​ಫಾರ್ಮ್​ ಮಾಡಿದೆ?

ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ಅದು ಏನೆಂದರೆ ಹೊಸ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.

ಇದನ್ನೂ ಓದಿ: ISRO ಸಂಸ್ಥೆಯಲ್ಲಿ ಹಲವು ಹುದ್ದೆಗಳ ನೇಮಕಾತಿ; ಸ್ಯಾಲರಿ ₹67,700.. ಇಂದೇ ಅಪ್ಲೇ ಮಾಡಿ!

ಬೆಂಗಳೂರಿನಲ್ಲಿರುವ ಭಾರತ್ ಅರ್ಥ್‌ ಮೂವರ್ಸ್‌ ಲಿಮಿಟೆಡ್ ಸಂಸ್ಥೆಯು ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಸಂಬಂಧ ಅಭ್ಯರ್ಥಿಗಳಿಂದ ಹೊಸ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇನ್ನು ಈ ಎಲ್ಲ ಉದ್ಯೋಗಗಳು ಉದ್ಯಾನನಗರಿಯಲ್ಲೇ ಇವೆ. ಹೀಗಾಗಿ ಇಲ್ಲೇ ಕೆಲಸ ಮಾಡಲು ಇಚ್ಛಿಸುವವರಿಗೆ ಇದು ಗೋಲ್ಡನ್​ ಆಫರ್ ಎಂದು ಹೇಳಬಹುದು. ಇನ್ನು ಈ ಹುದ್ದೆಗಳಿಗೆ ಏನೇನು ಅರ್ಹತೆ ಬೇಕು ಎನ್ನುವುದನ್ನು ಈ ಮುಂದೆ ಕೊಡಲಾಗಿದೆ. ಅಭ್ಯರ್ಥಿಗಳು ಆಸಕ್ತಿಯಿಂದ ಗಮನವಹಿಸಬೇಕು.

ಎಷ್ಟು ಉದ್ಯೋಗಗಳು, ಆ ಹುದ್ದೆಗಳ ಹೆಸರು?

  • ಮ್ಯಾನೇಜರ್- 10
  • ಅಸಿಸ್ಟೆಂಟ್ ಮ್ಯಾನೇಜರ್- 10
  • ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 02
  • ಡೆಪ್ಯೂಟಿ ಜನರಲ್ ಮ್ಯಾನೇಜರ್- 12
  • ಜನರಲ್ ಮ್ಯಾನೇಜರ್- 02
  • ಮುಖ್ಯ ಜನರಲ್ ಮ್ಯಾನೇಜರ್- 03
  • ಎಕ್ಸಿಕ್ಯೂಟಿವ್ ಡೈರೆಕ್ಟರ್- 01

ಒಟ್ಟು ಹುದ್ದೆಗಳು- 40

ಇದನ್ನೂ ಓದಿ:ಹೈಕೋರ್ಟ್​​ನಲ್ಲಿ ಭಾರೀ ಹುದ್ದೆಗಳ ನೇಮಕಾತಿ.. 100 ಅಲ್ಲ, 200 ಅಲ್ಲ 3 ಸಾವಿರಕ್ಕೂ ಹೆಚ್ಚು ಉದ್ಯೋಗಗಳು

publive-image

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ..?

ಅಪ್ಲೇ ಮಾಡಿದ ಅಭ್ಯರ್ಥಿಗಳ ಹೆಸರುಗಳನ್ನು ಶಾರ್ಟ್​ ಲಿಸ್ಟ್ ಮಾಡಿ ರೆಡಿ ಮಾಡಲಾಗುತ್ತದೆ. ನಂತರ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ. ಈ ವೇಳೆ ದಾಖಲೆಗಳನ್ನು ಅಭ್ಯರ್ಥಿಗಳು ತೆಗೆದುಕೊಂಡು ಬರಬೇಕು.

ಶೈಕ್ಷಣಿಕ ಅರ್ಹತೆಗಳೇನು..?

  • ಮ್ಯಾನೇಜರ್- ಡಿಗ್ರಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ
  • ಅಸಿಸ್ಟೆಂಟ್ ಮ್ಯಾನೇಜರ್- ಸಿಎ, ಎಂಬಿಎ (ಫೈನಾನ್ಸ್​)
  • ಡೆಪ್ಯೂಟಿ ಜನರಲ್ ಮ್ಯಾನೇಜರ್- ಡಿಗ್ರಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ
  • ಜನರಲ್ ಮ್ಯಾನೇಜರ್- ಸಿಎ, ಎಂಬಿಎ (ಫೈನಾನ್ಸ್​)
  • ಮುಖ್ಯ ಜನರಲ್ ಮ್ಯಾನೇಜರ್- ಸಿಎ, ಎಂಬಿಎ, ಡಿಗ್ರಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ
  • ಎಕ್ಸಿಕ್ಯೂಟಿವ್ ಡೈರೆಕ್ಟರ್- ಡಿಗ್ರಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಬಿಇ

ಅರ್ಜಿ ಶುಲ್ಕ ಎಷ್ಟು..?

  • ಜನರಲ್, ಒಬಿಸಿ ಅಭ್ಯರ್ಥಿಗಳು- 500 ರೂ.ಗಳು
  • ಎಸ್​​ಸಿ, ಎಸ್​ಟಿ ಅಭ್ಯರ್ಥಿಗಳು- 500 ರೂ.ಗಳು

ಮಾಸಿಕ ವೇತನ ಶ್ರೇಣಿ ಹೇಗಿದೆ..?

50,000 ದಿಂದ 3,00,000 ರೂಪಾಯಿಗಳು

ಹುದ್ದೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ಅಕ್ಟೋಬರ್- 25, 2024

ಪ್ರಮುಖವಾದ ಲಿಂಕ್-https://kps17.exmegov.com/#/index

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment