ಮೊದಲು ಜಡೇಜಾ, ಸುಂದರ್ ಶತಕಕ್ಕೆ ಅಡ್ಡಗಾಲು.. ಆಮೇಲೆ ಹ್ಯಾಂಡ್​ಶೇಕ್ ಮಾಡದೇ ಸ್ಟೋಕ್ ಕಿರಿಕ್..!

author-image
Ganesh
Updated On
ಮೊದಲು ಜಡೇಜಾ, ಸುಂದರ್ ಶತಕಕ್ಕೆ ಅಡ್ಡಗಾಲು.. ಆಮೇಲೆ ಹ್ಯಾಂಡ್​ಶೇಕ್ ಮಾಡದೇ ಸ್ಟೋಕ್ ಕಿರಿಕ್..!
Advertisment
  • ಶತಕದ ಹಾದಿಯಲ್ಲಿದ್ದಾಗ ಡ್ರಾಗೆ ಮುಂದಾದ ಸ್ಟೋಕ್ಸ್
  • ಗೆದ್ದಾಗ ಇದ್ದ ಕ್ರೀಡಾಸ್ಫೂರ್ತಿ ಸೋತಾಗ ಇಲ್ಲವಾಯ್ತು
  • ಪಂದ್ಯದ ಬಳಿಕ ಹ್ಯಾಂಡ್​​ಶೇಕ್​ ಮಾಡದ ಬೆನ್​ಸ್ಟೋಕ್ಸ್

ಇಂಡೋ-ಇಂಗ್ಲೆಂಡ್ ಮ್ಯಾಂಚೆಸ್ಟರ್​​ ಟೆಸ್ಟ್​​ ಮುಗಿದ ಅಧ್ಯಾಯ. ಟೀಮ್​ ಇಂಡಿಯಾ ಆತ್ಯದ್ಭುತ ಹೋರಾಟ ಸಂಘಟಿಸಿದ್ದೂ ಆಯ್ತು. ಆರಂಭದಲ್ಲೇ ಪಂದ್ಯ ಗೆದ್ದೇ ಬಿಟ್ವಿ ಎಂದು ಮೆರೆದಾಡ್ತಿದ್ದ ಇಂಗ್ಲೆಂಡ್ ಕೆಚ್ಚೆದೆಯ ಹೋರಾಟದ ಮುಂದೆ ಮಂಡಿಯೂರಿ ಸರೆಂಡರ್​ ಆಗಿದ್ದೂ ಆಯ್ತು. ಅಂತಿಮ ಹಂತದಲ್ಲಿ ನಡೆದ ವಿವಾದ ಮಾತ್ರ ತಣ್ಣಗಾಗಿಲ್ಲ.

ಶತಕದ ಹಾದಿಯಲ್ಲಿದ್ದಾಗ ಡ್ರಾಗೆ ಮುಂದಾದ ಸ್ಟೋಕ್ಸ್

ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯದ ಅಂತಿಮ ದಿನದಾಟದ ಅಂತ್ಯಕ್ಕೆ 15 ಓವರ್​ಗಳು ಬಾಕಿ ಉಳಿದಿದ್ವು. ಈ ವೇಳೆಗಾಗಲೇ ಟೀಮ್​ ಇಂಡಿಯಾ ಹೋರಾಟಕ್ಕೆ ಇಂಗ್ಲೆಂಡ್​ ಬಳಲಿ ಬೆಂಡಾಗಿತ್ತು. ಹೀಗಾಗಿ ಆಂಗ್ಲರ ನಾಯಕ ಬೆನ್​ ಸ್ಟೋಕ್ಸ್​​​, ಡ್ರಾಗೆ ಮುಂದಾದ್ರು. ಆ ವೇಳೆಗೆ ರವೀಂದ್ರ ಜಡೇಜಾ, ವಾಷಿಂಗ್ಟನ್​ ಸುಂದರ್ ಶತಕದ ಹೊಸ್ತಿಲಲ್ಲಿದ್ರು. ಹೀಗಾಗಿ ಸ್ಟೋಕ್ಸ್​ ಮನವಿಗೆ ಕ್ಯಾರೆ ಅನ್ನಲಿಲ್ಲ. ಇದ್ರಿಂದ ಇಂಗ್ಲೆಂಡ್​ ಪ್ಲೇಯರ್ಸ್​​ vs ಇಂಡಿಯನ್​​ ಪ್ಲೇಯರ್ಸ್​ ನಡುವೆ ಮಾತಿನ ಚಕಮಕಿ ನಡೀತು.

ಇದನ್ನೂ ಓದಿ: ಕೆಟ್ಟದಾಗಿ ಮೆಸೇಜ್ ಮಾಡೋರಿಗೆ ಇನ್ಮೇಲೆ ಇದೆ ಮಾರಿಹಬ್ಬ -ರಮ್ಯಾ ಕೇಸ್ ಬೆನ್ನಲ್ಲೇ ಮಹಿಳಾ ಆಯೋಗ ಮಾಸ್ಟರ್ ಪ್ಲಾನ್

publive-image

ಪಂದ್ಯದ ಬಳಿಕ ಹ್ಯಾಂಡ್​​ಶೇಕ್​ ಮಾಡದ ​ಸ್ಟೋಕ್ಸ್​

ಟೀಮ್​ ಇಂಡಿಯಾ ಡ್ರಾ ಒಪ್ಪದ ಮೇಲೆ ಒಲ್ಲದ ಮನಸ್ಸಿಂದಲೇ ಇಂಗ್ಲೆಂಡ್​ ಬೇಕಾಬಿಟ್ಟಿ ಬೌಲಿಂಗ್​ ಮಾಡಿತು. ಕೆಲವೇ ಓವರ್​ಗಳಲ್ಲಿ ಜಡೇಜಾ, ವಾಷಿಂಗ್ಟನ್​ ಸುಂದರ್​ ಶತಕ ಪೂರೈಸಿದ್ರು. ಆ ಬಳಿಕ ಪಂದ್ಯ ಡ್ರಾ ಮಾಡಿಕೊಂಡ್ರು. ಈ ವೇಳೆ ​​ಸ್ಟೋಕ್ಸ್​ ಅತಿರೇಕದ ವರ್ತನೆ ತೋರಿದ್ರು. ಜಡೇಜಾ-ಸುಂದರ್​ ಜೊತೆಗೆ ಹ್ಯಾಂಡ್​ಶೇಕ್​ ಕೂಡ ಮಾಡಲಿಲ್ಲ.

ಸುಂದರ್​​-ಜಡೇಜಾ ಶತಕಕ್ಕೆ ಅಡ್ಡಗಾಲು ಹಾಕಿದ್ದು ಸರೀನಾ..?

ಟೆಸ್ಟ್​​ ಕ್ರಿಕೆಟ್​​ನಲ್ಲಿ ಶತಕ ಸಿಡಿಸೋದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಮ್ಯಾಂಚೆಸ್ಟರ್​ ಟೆಸ್ಟ್​ನಲ್ಲಿ ಸುದೀರ್ಘ ಹೋರಾಟ ನಡೆಸಿದ್ದ ಜಡೇಜಾ, ಸುಂದರ್​​ ಶತಕ ಸಿಡಿಸಲು ನಿಜಕ್ಕೂ ಅರ್ಹರಿದ್ರು. ಅದ್ರಲ್ಲೂ ವಾಷಿಂಗ್ಟನ್​ ಸುಂದರ್​​ ಚೊಚ್ಚಲ ಟೆಸ್ಟ್​ ಶತಕದ ಹೊಸ್ತಿಲಲ್ಲಿದ್ರು. ಹೋರಾಟ ನಡೆಸಿ ತಂಡವನ್ನ ಸೋಲಿನಿಂದ ಪಾರು ಮಾಡಿದವರ ಶತಕಕ್ಕೆ ಅಡ್ಡಗಾಲು ಹಾಕಿದ್ದು ತಪ್ಪೇ.

ಬೆನ್​​ ಸ್ಟೋಕ್ಸ್​ ವರ್ತನೆಗೆ ಮಾಜಿ ಕ್ರಿಕೆಟಿಗರು ಕಿಡಿ..!

ಆನ್​ಫೀಲ್ಡ್​ ಆಟ ಅಂತ್ಯವಾದ ಬೆನ್ನಲ್ಲೇ ಈ ಘಟನೆ ಚರ್ಚೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರೋ ಟೀಮ್​ ಇಂಡಿಯಾ ಹೆಡ್​ ಕೋಚ್​​ ಗೌತಮ್​ ಗಂಭೀರ್​ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ.

90 ರನ್​ಗಳಿಸಿ ಒಬ್ಬ, 85 ರನ್​ಗಳಿಸಿ ಒಬ್ಬ ಬ್ಯಾಟಿಂಗ್​ ಮಾಡ್ತಿದ್ದಾಗ ಅವರು ಶತಕ ಸಿಡಿಸಲು ಅರ್ಹರಲ್ಲವೇ? ಇಂಗ್ಲೆಂಡ್​ ತಂಡದ ಅಟಗಾರರು ಹೀಗೆ ಸಾಧನೆಯ ಹೊಸ್ತಿಲಲ್ಲಿದ್ದಾಗ ಮೈದಾನದಿಂದ ಹೊರ ಬರ್ತಾರಾ? ಇಲ್ಲ, ನಮ್ಮ ಆಟಗಾರರು ಚಂಡಮಾರುತ ಎದುರಿಸಿದ್ರು. ಅವರು ಶತಕಕ್ಕೆ ಅರ್ಹರು. ನಾವಿಲ್ಲಿ ಯಾರನ್ನೂ ಮೆಚ್ಚಿಸೋಕೆ ಬಂದಿಲ್ಲ-ಗೌತಮ್ ಗಂಭಿರ್

ಅದು ಸರಿಯಾದ ನಿರ್ಧಾರ. ಫೀಲ್ಡ್​​ಗಿಳಿದ ಮೇಲೆ ಅದ್ರಲ್ಲೂ 140 ಓವರ್​ ಬೌಲಿಂಗ್​ ಮಾಡಿದ ಮೇಲೆ ನಿಮಗೆ ಹತಾಶೆಯಾಗುತ್ತೆ. ಇಂಗ್ಲೆಂಡ್​​ ತಂಡದಲ್ಲಿ ಆ ಹತಾಶೆ ಇತ್ತು. ನನಗೆ ಭಾರತ ಯಾಕೆ ಹಾಗೆ ಮಾಡಿತು ಅನ್ನೋದು ಅರ್ಥವಾಗುತ್ತೆ. 5 ವರ್ಷ ಕಳೆದ ಬಳಿಕ ಅ ಸ್ಕೋರ್​ಕಾರ್ಡ್ ನೋಡಿದ್ರೆ, ಪಂದ್ಯವನ್ನ ಉಳಿಸಿದ 2 ಅದ್ಭುತ ಶತಕಗಳು ಕಾಣುತ್ತವೆ. ಜೊತೆಗೆ ಶುಭಮನ್​​ ಶತಕ. ಅಗ ಹ್ಯಾರಿ ಬ್ರೂಕ್​ರ 37MPH ಬಾಲ್​ ಮರೆತುಹೋಗಿರುತ್ತೆ -ಇಂಗ್ಲೆಂಡ್ ಮಾಜಿ ಕ್ಯಾಪ್ಟನ್​ ಅಲಿಸ್ಟರ್​ ಕುಕ್ ​

ಅದ್ರಲ್ಲಿ ನನಗೆ ಯಾವುದೇ ಸಮಸ್ಯೆ ಇಲ್ಲ. ಇಂಗ್ಲೆಂಡ್​ ಬೌಲರ್​ಗಳಿಗೆ ಸುಸ್ತಾಗಿತ್ತು. ಕಾಲುಗಳಿಗೆ ಸುಸ್ತಾಗಿತ್ತು. ಅದಕ್ಕೆ ಮುಗಿಸಲು ನಿರ್ಧರಿಸಿದ್ರು. ಅವರಿಬ್ಬರು 80, 90 ರನ್​ಗಳಿಸಲು ತುಂಬಾ ಕಷ್ಟಪಟ್ಟಿದ್ರು. ಅವರಿಗೆ ಟೆಸ್ಟ್​​ ಶತಕ ಬೇಕಿತ್ತು. ಹ್ಯಾರಿ ಬ್ರೂಕ್​ ಬಳಿ ಬೌಲಿಂಗ್​​ ಮಾಡಿಸಬಾರದಿತ್ತು. ನನಗೆ ಸಿಲ್ಲಿ ಅನಿಸಿತು. ಇಂಡಿಯಾ ಡ್ರಾಗೆ ಅರ್ಹವಾಗಿತ್ತು. ಜಡೇಜಾ-ಸುಂದರ್​ ಕೊನೆಯವರೆಗೂ ಅಲ್ಲಿರಲು ಅರ್ಹರಾಗಿದ್ರು- ಇಂಗ್ಲೆಂಡ್​​ ಮಾಜಿ ನಾಯಕ ನಾಸೀರ್​ ಹುಸೇನ್​

ಗೆದ್ದಾಗಷ್ಟೇ ಸ್ಟೋಕ್ಸ್​ಗೆ​ ಕ್ರೀಡಾಸ್ಫೂರ್ತಿ ಮೆರೆಯೋದಾ?

ಇದಕ್ಕೂ ಹಿಂದಿನ ಲಾರ್ಡ್ಸ್​ ಟೆಸ್ಟ್​​ನಲ್ಲೂ ರವೀಂದ್ರ ಜಡೇಜಾ ಇಂತಹದ್ದೇ ಹೋರಾಟ ನಡೆಸಿದ್ರು. ದುರಾದೃಷ್ಟವಶಾತ್​​ ಫಲ ಸಿಗಲಿಲ್ಲ. ಇಂಗ್ಲೆಂಡ್​​ ಗೆದ್ದ ಬಳಿಕ ಸ್ಟೋಕ್ಸ್​, ಜಡೇಜಾನ ತಬ್ಬಿಕೊಂಡು ಸಂತೈಸಿದ್ರು. ಗೆದ್ದಾಗ ಕ್ರೀಡಾಸ್ಫೂರ್ತಿ ಮರೆದಿದ್ದ ಸ್ಟೋಕ್ಸ್​, ಡ್ರಾನಲ್ಲಿ ಪಂದ್ಯ ಅಂತ್ಯವಾದ ಮೇಲೆ ಕ್ರೀಡಾಸ್ಫೂರ್ತಿ ಮರೆತು ಬಿಟ್ರು. ಇದು ಬೆನ್​​ಸ್ಟೋಕ್ಸ್​​ ಅಂತಾ ಆಟಗಾರರಿಗೆ ಇದು ಶೋಭೆ ತರಲ್ಲ.

ಇದನ್ನೂ ಓದಿ: ಐ ಲವ್​ ಯೂ ಹೇಳೋದ್ರಲ್ಲಿ ತಪ್ಪಿಲ್ಲ -ಪೋಕ್ಸೋ ಕೇಸ್​​ಗೆ ಸಂಬಂಧಿಸಿ ಹೈಕೋರ್ಟ್​ನಿಂದ ಮಹತ್ವದ ತೀರ್ಪು

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment