/newsfirstlive-kannada/media/post_attachments/wp-content/uploads/2025/07/Ben-stokes-1.jpg)
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇವತ್ತಿನಿಂದ ಇಂಡೋ, ಇಂಗ್ಲೆಂಡ್ ಬ್ಯಾಟಲ್ ಶುರುವಾಗಲಿದೆ. ನಾನಾ, ನೀನಾ ಅಂತಾ ಹೋರಾಟಕ್ಕಿಳಿಯುತ್ತಿರುವ ಉಭಯ ತಂಡಗಳು, ತೆರೆ ಹಿಂದೆ ಪ್ರತ್ಯೇಕ ಗೇಮ್ ಪ್ಲಾನ್ ಮಾಡಿವೆ. ಎರಡು ತಂಡಗಳ ಬಿಗ್ ಬ್ಯಾಟಲ್ ಭಾರೀ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. ಇದರ ಮಧ್ಯೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಬೆನ್ ಸ್ಟೋಕ್ಸ್ ಹೇಳಿದ್ದೇನು..?
ಎರಡೂ ತಂಡಗಳ ಪರಿಸ್ಥಿತಿ ನೋಡಿದ್ರೆ ಈ ಸರಣಿಯಲ್ಲಿ ಸಮಲಬಲದ ಹೋರಾಟ ಕಾಣ್ತಿದೆ. ತಂಡಗಳು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಇದು ಸೋಲು, ಗೆಲುವು ಹೊಂದಿರುವ ಸರಣಿಯಾಗಿದ್ದು, ಫಲಿತಾಂಶಗಳು ಕೂಡ ಆಶ್ಚರ್ಯಕರವಾಗಿವೆ. ಹೆಡಿಂಗ್ಲಿಯಲ್ಲಿ ನಾವು ಜಯಗಳಿಸಿದ್ದೆವು. ಅವರು ಎರಡನೇ ಟೆಸ್ಟ್ ಗೆದ್ದರು. ಎರಡು ಉತ್ತಮ ತಂಡಗಳು ಆಡಿದಾಗ ಇಂಥ ಫಲಿತಾಂಶ ನೋಡಬಹುದು. ನಾವು ಯಾರ ಮೇಲೂ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಎದುರಾಳಿ ಯಾರೇ ಆಗಿರಲಿ ಗೌರವಿಸುತ್ತೇವೆ. ಈ ವಾರ ಮೈದಾನಕ್ಕಿಳಿದು ಕಠಿಣ ಹೋರಾಟ ನೀಡುತ್ತೇವೆ. ಖಂಡಿತವಾಗಿಯೂ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಕಾಶಿಯಲ್ಲಿ ಇವತ್ತಿನಿಂದ ಬಿಗ್ ಫೈಟ್! ಲಾರ್ಡ್ಸ್ ಪಿಚ್ ತುಂಬಾನೇ ಡಿಫರೆಂಟ್, ಯಾರಿಗೆ ಫೇವರ್..
ಅರ್ಚರ್ ಎಂಟ್ರಿ..
ಇನ್ನು, ಲಾರ್ಡ್ಸ್ ಟೆಸ್ಟ್‌ಗಾಗಿ ಇಂಗ್ಲೆಂಡ್ ಬಲಿಷ್ಠ ತಂಡ ಪ್ರಕಟಿಸಿದೆ. ವೇಗದ ಬೌಲರ್ ಜೋಫ್ರಾ ಆರ್ಚರ್ 4 ವರ್ಷಗಳ ನಂತರ ಟೆಸ್ಟ್ಗೆ ಕಂಬ್ಯಾಕ್ ಮಾಡಿದ್ದಾರೆ. ಆರ್ಚರ್ ಇಂಗ್ಲೆಂಡ್ ಪರ 13 ಟೆಸ್ಟ್‌ಗಳಲ್ಲಿ 42 ವಿಕೆಟ್ ಕಬಳಿಸಿದ್ದಾರೆ. ಜೋಫ್ರಾ ಆರ್ಚರ್ ಮರಳಿರುವ ಬಗ್ಗೆ ಮಾತನಾಡಿರುವ ಸ್ಟೋಕ್ಸ್, ‘ಇದು ನಿಜಕ್ಕೂ ರೋಮಾಂಚಕಾರಿ. ಇಂಗ್ಲಿಷ್ ಅಭಿಮಾನಿಗಳಿಗೆ ಮತ್ತು ಆರ್ಚರ್‌ಗೆ ಅದ್ಭುತವಾಗಿದೆ ಎಂದು ಭಾವಿಸುತ್ತೇನೆ. ಅವರು ತಂಡಕ್ಕೆ ಮರಳಲು ಬಹಳ ಸಮಯ ತೆಗೆದುಕೊಂಡರು. ಗಾಯಗಳನ್ನು ನಿಭಾಯಿಸಿದ ರೀತಿ ಶ್ಲಾಘನೀಯ. ಅವರು ಟೆಸ್ಟ್ ಕ್ರಿಕೆಟ್‌ಗೆ ಮರಳುವುದನ್ನು ನೋಡಲು ಸಂತೋಷವಾಗಿದೆ ಎಂದಿದ್ದಾರೆ.
ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಗೆದ್ದು, 371 ರನ್‌ಗಳ ಗುರಿ ಮುಟ್ಟಿತ್ತು. ತವರು ನೆಲದಲ್ಲಿ ಇಂಗ್ಲೆಂಡ್‌ನ ಎರಡನೇ ಅತ್ಯಧಿಕ ಚೇಸಿಂಗ್ ಇದಾಗಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಭಾರತ 336 ರನ್‌ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಸಮಗೊಳಿಸಿಕೊಂಡಿದೆ.
ಇದನ್ನೂ ಓದಿ: ಕುತೂಹಲ ಘಟ್ಟ ತಲುಪಿದ ಅಧಿಕಾರದ ಆಟ.. ರಾಹುಲ್ ಮುಂದೆ ಸಿದ್ದು, ಡಿಕೆಶಿ ಪ್ರತ್ಯೇಕ ವಾದ, ಏನು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ