/newsfirstlive-kannada/media/post_attachments/wp-content/uploads/2024/12/AJIT_POWER.jpg)
ಮುಂಬೈ: 1,000 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಮಹಾರಾಷ್ಟ್ರದ ಡಿಸಿಎಂ ಆಗಿ ನೇಮಕವಾದ ಒಂದೇ ದಿನದಲ್ಲಿ ಅಜಿತ್ ಪವಾರ್ ಅವರು ಆರೋಪದಿಂದ ಮುಕ್ತರಾಗಿದ್ದಾರೆ.
ಬಿಜೆಪಿ ಮೈತ್ರಿ ಪಕ್ಷವಾದ ಎನ್‌ಸಿಪಿಯ ನಾಯಕ ಅಜಿತ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನ್ಯಾಯಮಂಡಳಿ ಕ್ಲೀನ್ ಚಿಟ್ ನೀಡಿದೆ. ಸಾಕ್ಷ್ಯಗಳು ಯಾವುದು ಸರಿಯಾಗಿ ದೊರೆತಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್ ಪ್ರಕರಣವನ್ನು ಕೈಬಿಟ್ಟಿದೆ. ಇದರಿಂದಾಗಿ ಜಪ್ತಿ ಮಾಡಿದ್ದ ಎಲ್ಲ ಆಸ್ತಿಯನ್ನು ವಾರಸುದಾರ ರಿಗೆ ಆದಾಯ ತೆರಿಗೆ ಇಲಾಖೆ ಹಿಂದಿರುಗಿಸಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಪಕ್ಕಾ CM ಸಿದ್ದರಾಮಯ್ಯ ಅಭಿಮಾನಿ.. ಸುತ್ತ 10 ಹಳ್ಳಿಗೆ ಕಡಿಮೆ ದರದಲ್ಲಿ ಹಿಟ್ಟು ಬೀಸಿಕೊಡುವ ನಾಗಪ್ಪ
ಬೇನಾಮಿ ಆಸ್ತಿಯನ್ನು ಖರೀದಿ ಮಾಡಲು ಅಜಿತ್ ಪವಾರ್ ಹಾಗೂ ಅವರ ಕುಟುಂಬಸ್ಥರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಕುರಿತು ಯಾವುದೇ ಪುರಾವೆಗಳನ್ನು ಹಾಜರು ಪಡಿಸಲು ಆಗಿಲ್ಲ. ಆದಾಯ ತೆರಿಗೆ ಇಲಾಖೆ ಸಾಕ್ಷ್ಯಗಳನ್ನು ಹಾಜರು ಪಡಿಸಲು ವಿಫಲವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು 2021ರ ಅಕ್ಟೋಬರ್ 7 ರಂದು ನಡೆಸಿದ ಸರಣಿ ದಾಳಿ ಸಮಯದಲ್ಲಿ 1000 ಕೋಟಿ ರೂಪಾಯಿ ಆಸ್ತಿಯ ಪತ್ರದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬೇನಾಮಿ ಆಸ್ತಿ ಎಂದು ಪ್ರಕರಣ ದಾಖಲು ಮಾಡಲಾಗಿತ್ತು. ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್ ಮತ್ತು ಗೋವಾದ ರೆಸಾರ್ಟ್ ಸೇರಿದಂತೆ ಹಲವಾರು ಆಸ್ತಿಗಳು ಇದರಲ್ಲಿ ಸೇರಿದ್ದವು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ