/newsfirstlive-kannada/media/post_attachments/wp-content/uploads/2025/01/Tea.jpg)
ಟೀ ಎಂದರೆ ನಮ್ಮ ಜೀವನದ ಒಂದು ಭಾಗ. ಜನ ದಿನಕ್ಕೆ ಲೆಕ್ಕವಿಲ್ಲದಷ್ಟು ಟೀ ಕುಡಿಯುತ್ತಾರೆ. ಚಹಾ ಕುಡಿಯಲಿಲ್ಲ ಎಂದರೆ ತಲೆ ಓಡುತ್ತಿಲ್ಲ ಅನ್ನೋರೆ ಹೆಚ್ಚು. ತಲೆ ನೋವು ಬಂದ್ರೂ, ಚಿಂತೆ ಹೆಚ್ಚಾದ್ರೂ ಎಲ್ಲದಕ್ಕೂ ಮದ್ದು ಒಂದು ಟೀ. ನಾವು ನಿತ್ಯ ಸೇವಿಸೋ ಟೀನಲ್ಲಿ ಸಕ್ಕರೆ ಇದ್ದೇ ಇರುತ್ತದೆ. ಇದರಿಂದ ಆಗೋ ಸಮಸ್ಯೆಗಳೇನು? ಇದಕ್ಕೆ ಪರಿಹಾರ ಏನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಆರೋಗಕ್ಕಾಗಿ ಒಂದು ತಿಂಗಳು ಟೀ ಬಿಡಿ!
ಯಾರಿಗೆ ಆಗಲಿ ಇಂದಿನಿಂದ ಒಂದು ತಿಂಗಳು ಟೀ ಕುಡಿಯಬೇಡಿ ಎಂದರೆ ಅದು ದೊಡ್ಡ ಸವಾಲು. ಆರೋಗ್ಯ ದೃಷ್ಟಿಯಿಂದ ಒಂದು ತಿಂಗಳು ಟೀ ಬಿಟ್ಟರೆ ತುಂಬಾ ಒಳ್ಳೆಯದು. ಕಾರಣ ನೀವು ಕುಡಿಯೋ ಟೀನಲ್ಲಿ ಹೆಚ್ಚು ಸಕ್ಕರೆ ಇದ್ದು, ಇದು ಜೀರ್ಣಾಂಗ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
ತಿಂಗಳು ಟೀ ನಿಲ್ಲಿಸಿದ್ರೆ ಏನು ಪ್ರಯೋಜನ?
ಒಂದು ತಿಂಗಳ ಮಟ್ಟಿಗೆ ನೀವು ಟೀ ಕುಡಿಯೋದು ನಿಲ್ಲಿಸಬೇಕು. ಆಗ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ತೂಕ ಕಡಿಮೆ ಆಗುವುದರಿಂದ ಇದರಿಂದ ಅನೇಕ ಆರೋಗ್ಯದ ಲಾಭಗಳಿವೆ. ಒಂದು ಟೀ ಬಿಟ್ಟರೆ ನಿಮ್ಮ ಹತ್ತಿರ ಯಾವ ರೋಗವು ಸುಳಿಯುವುದಿಲ್ಲ.
ಟೀ ಬಿಡೋದರಿಂದ ಆಗೋ ಲಾಭಗಳೇನು?
- ತಿಂಗಳು ಟೀ ಬಿಟ್ಟರೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ
- ಚರ್ಮದ ಮೇಲಿನ ಮೊಡವೆ ಮತ್ತು ಗುಳ್ಳೆಗಳು ಹೋಗುತ್ತವೆ
- ಚರ್ಮವನ್ನು ಆರೋಗ್ಯಕರವಾಗಿಡಲು ಟೀ ಬಿಡಲೇಬೇಕು
- ದೇಹದ ಕೆಫೀನ್ ಕಡಿಮೆ ಆಗಿ ನಿದ್ದೆ ಚೆನ್ನಾಗಿ ಮಾಡಬಹುದು
- ನಮ್ಮ ಮಾನಸಿಕ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ
- ಎದೆಯುರಿ, ತಲೆತಿರುಗುವಿಕೆಯಿಂದ ಮುಕ್ತಿ ಸಿಗಲಿದೆ
- ಅಧಿಕ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ
ಇದನ್ನೂ ಓದಿ:ಗೋಲ್ಡ್ ಪಡೆಯೋ ಮುನ್ನ ಎಚ್ಚರ! ಯಾವುದೇ ಕಾರಣಕ್ಕೂ ಈ ತಪ್ಪು ಮಾಡಲೇಬೇಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ