newsfirstkannada.com

ಬೆಳ್ಳನೆಯ ಮಜ್ಜಿಗೆ, ನಿಮ್ಮ ಆರೋಗ್ಯ ಫಳಫಳ; ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆ.. ಅಯ್ಯೋ ಇಷ್ಟೊಂದು ಲಾಭಾನಾ..!?

Share :

Published March 27, 2024 at 10:59am

Update March 27, 2024 at 11:51am

    ಮಜ್ಜಿಗೆಯ ರುಚಿ ಸ್ವಲ್ಪ ಹುಳಿ, ಕುಡಿಯಲು ಬಲು ರುಚಿ..!

    ಎಚ್ಚರ, ಇಂತವರು ಮಜ್ಜಿಗೆಯನ್ನು ಕುಡಿಯಲೇ ಬಾರದು..!

    ಮಜ್ಜಿಗೆಯಲ್ಲಿದೆ ಆರೋಗ್ಯದ ಮ್ಯಾಜಿಕು.. ಯಾವಾಗ ಸೇವಿಸಬೇಕು?

ಬಿರು ಬಿಸಿಲಿನ ಬೇಸಿಗೆಯ ಆರ್ಭಟ ಜೋರಾಗಿದೆ. ಬೆಳಗ್ಗೆ 10 ಗಂಟೆ ಮುಗಿದು 11 ಗಂಟೆ ದಾಟುತ್ತಿದ್ದಂತೆ ಸೆಕೆ ಧಗಧನೇ ನಮ್ಮನ್ನು ಆವರಿಸಲು ಶುರುವಾಗಿಬಿಡುತ್ತದೆ. ಸಂಜೆ ವೇಳೆಗೆ ಬಿಸಿಲು ಮಾಯವಾದರೂ ಅದರ ತಾಪ ಮಾತ್ರ ಹಾಗೆಯೇ ಉಳಿದುಕೊಳ್ಳುತ್ತಿದೆ. ಪರಿಣಾಮ ರಾತ್ರಿ ಮನೆಯಲ್ಲಿ ಫ್ಯಾನ್, ಕೂಲರ್, AC ಇಲ್ಲದೇ ನಿದ್ರೆ ಮಾಡೋದು ಕಷ್ಟ, ಕಷ್ಟ. ಮಲಗಿದ್ದಲ್ಲೇ ಸೆಕೆಯ ತೀವ್ರತೆಗೆ ಬೆವರಲು ಶುರುವಾಗುತ್ತದೆ, ಹಿಂಗಾದ್ರೆ ನಿದ್ದೆ ಎಲ್ಲಿಂದ ಬರಬೇಕು ಎಂದು ನೀವೇ ಹೇಳಿ..? ಅಷ್ಟರ ಮಟ್ಟಿಗೆ ಬೇಸಿಗೆ ಶಾಕ್ ನೀಡ್ತಿದೆ..!

ಇಂಥ ಬೇಸಿಗೆ ಕಾಲದಲ್ಲಿ ಜನ ತಣ್ಣನೆಯ ಪದಾರ್ಧಗಳನ್ನು, ದ್ರವ ರೂಪದ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಐಸ್ ಕ್ರೀಮ್, ತಂಪು ಪಾನೀಯಗಳು, ಶರಬತ್ತು, ಸಿಹಿ ತಿಂಡಿಗಳು ಇತ್ಯಾದಿ.. ಇವುಗಳಲ್ಲಿ ಒಂದು ಮಜ್ಜಿಗೆ (Butter Milk) ಕೂಡ ಒಂದು. ಇದನ್ನು ಜನರು ಬೇಸಿಗೆಯಲ್ಲಿ ಹೆಚ್ಚೆಚ್ಚು ಸೇವಿಸುತ್ತಾರೆ.

ಮಜ್ಜಿಗೆಯಲ್ಲಿದೆ ಆರೋಗ್ಯದ ಮ್ಯಾಜಿಕು..!
ನಿಮಗೆ ಬಟರ್​​ ಮಿಲ್ಕ್​​ನಲ್ಲಿ ಏನೆಲ್ಲ ಗುಣಗಳು ಇರುತ್ತವೆ ಎಂದು ಗೊತ್ತಾ? ಅದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಸೇರಿ ಹಲವು ಪೋಷಕಾಂಶಗಳು ಮಜ್ಜಿಗೆಯಲ್ಲಿರುತ್ತದೆ. ಹೀಗಾಗಿ ಮಜ್ಜಿಗೆ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನ. ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆಯ ಪಡೆದು ಆರೋಗ್ಯವನ್ನೂ ಚೆನ್ನಾಗಿ ಇಟ್ಟುಕೊಳ್ಳಬಹುದು.

ಮಜ್ಜಿಗೆ ಗಮ್ಮತ್ತಿನಲ್ಲಿದೆ ಗುಟ್ಟು..!
ಮಜ್ಜಿಗೆಯ ರುಚಿ ಸ್ವಲ್ಪ ಹುಳಿ, ಆದರೂ ಕುಡಿಯಲು ಬಲು ರುಚಿ. ನಿತ್ಯ ನೀವು ಮಜ್ಜಿಗೆ ಸೇವನೆ ಮಾಡೋದ್ರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗಳು ಸರಾಗವಾಗಿ ಇರುತ್ತದೆ. ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಬರುವುದಿಲ್ಲ. ಇನ್ನು ಮಜ್ಜಿಗೆಯಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ನೀವು ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಅಯ್ಯೋ.. ಇದೇನಿದು ಬಾಂಬೆ ಬ್ಲಡ್​ ಗ್ರೂಪ್! ಈ ಅಪರೂಪದ ರಕ್ತದ ಪ್ರಕಾರ ಯಾರಲ್ಲಿ ಕಂಡು ಬರುತ್ತೆ?

ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹೆಚ್ಚು ಇರೋದ್ರಿಂದ ನಿಮ್ಮ ಮೂಳೆಗಳು ಬಲಿಷ್ಠವಾಗುತ್ತವೆ. ಮಾತ್ರವಲ್ಲ ಬೆಳ್ಳನೆಯ ಮಜ್ಜಿಗೆ ಚರ್ಮದ ಆರೋಗ್ಯವನ್ನೂ ಪೋಷಿಸುತ್ತದೆ, ಫಳಫಳನೆ ಹೊಳೆಯುವಂತೆ ಮಾಡುವ ಶಕ್ತಿ ಕೂಡ ಇದೆ. ಮಜ್ಜಿಗೆಯಲ್ಲಿರುವ ಕ್ಯಾಲ್ಸಿಯಂ ಹೃದಯ ಸಂಬಂಧಿ ಕಾಯಿಲೆಗಳನ್ನೂ ಗುಣಪಡಿಸುತ್ತದೆ. ಬಹು ಮುಖ್ಯವಾಗಿ ದಿನಾಲೂ ಮಜ್ಜಿಗೆ ಕುಡಿಯೋದ್ರಿಂದ ದೇಹದಲ್ಲಿ ನೀರಿನ ಅಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ.

ಮಜ್ಜಿಗೆ ಹೇಗಿದ್ದರೆ ಆರೋಗ್ಯಕ್ಕೆ ಚಂದ..!
ಯಾವುದೇ ಮಸಾಲೆಗಳಿಲ್ಲದೆ ಮಜ್ಜಿಗೆಯನ್ನು ಕುಡಿಯಬಹುದು. ಅದಕ್ಕೆ ಮೆಂತೆ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು ಮುಂತಾದ ಮಸಾಲೆಗಳನ್ನು ಸೇರಿಸಿ ಮಸಾಲೆ ಮಜ್ಜಿಗೆ ಮಾಡಬಹುದು. ಮಜ್ಜಿಗೆಯಲ್ಲಿ ಕೆಲವು ಹಣ್ಣುಗಳನ್ನು ಹಾಕಿ ಕುಡಿಯಬಹುದು. ತಣ್ಣಗೆ ಅಥವಾ ಉಗುರುಬೆಚ್ಚಗೆ ಕುಡಿಯುವುದು ಉತ್ತಮ. ಊಟದ ನಂತರ ಮಜ್ಜಿಗೆ ಕುಡಿಯಲು ಸರಿಯಾದ ಸಮಯ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಮಿತಿಮೀರಿ ಮಜ್ಜಿಗೆ ಕುಡಿಯೋದ್ರಿಂದ ಹೊಟ್ಟೆಯುಬ್ಬರಿಕೆಯಂಥ ಸಮಸ್ಯೆಗಳು ಉಂಟಾಗಬಹುದು. ಮಜ್ಜಿಗೆ ಅಲರ್ಜಿ ಇರೋರು ಸೇವಿಸಲೇಬಾರದು.

ಸಿಕ್ಕಾಪಟ್ಟೆ ಸೆಕೆ ಮರ್ರೆ ಅಂತಾ ಯಾವುದೋ ಕಂಪನಿಯ ಐಸ್​ಕ್ರಿಂ, ತಂಪು ಪಾನೀಯ ಸೇವಿಸಿ ರೋಗ ರುಜಿನಿಗಳನ್ನು ತಂದುಕೊಳ್ಳೊದ್ಕಿಂತ ಮನೆಯಲ್ಲಿ ತಯಾರಿಸಿದ ಪರಿಶುದ್ಧ ಮಜ್ಜಿಗೆ ಯನ್ನು ಕುಡಿದು ಆರೋಗ್ಯದ ಜೀವಿತಾವಧಿಯನ್ನು ಹೆಚ್ಚಿಕೊಂಡರೆ ನಿಮಗೂ, ನಿಮ್ಮ ಕುಟುಂಬ ನೆಮ್ಮದಿಗೂ ಒಳ್ಳೆಯದು. ಬೇಸಿಗೆ ಬಿದ್ದಾಯ್ತು, ಮತ್ಯಾಗೆ ತಡ ಹೆಚ್ಚೆಚ್ಚು ಮಜ್ಜಿಗೆ ಕುಡಿಯಿರಿ, ಆಯಾಗಿರಿ..!!

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳನೆಯ ಮಜ್ಜಿಗೆ, ನಿಮ್ಮ ಆರೋಗ್ಯ ಫಳಫಳ; ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆ.. ಅಯ್ಯೋ ಇಷ್ಟೊಂದು ಲಾಭಾನಾ..!?

https://newsfirstlive.com/wp-content/uploads/2024/03/BUTTER-MILK-3.jpg

Load More