/newsfirstlive-kannada/media/post_attachments/wp-content/uploads/2023/06/Coriander-Water.jpg)
ಬಾಯಾರಿಕೆ ಆದ್ರೆ ತಂಪು ಪಾನೀಯದತ್ತ ಮುಖ ಮಾಡುವ ಬದಲು ಕೊತ್ತಂಬರಿ ನೀರು ಸೇವಿಸಿ ನೋಡಿ. ಇದರಿಂದ ಹತ್ತಾರು ಲಾಭವಿದೆ. ಅದರಲ್ಲೂ ಉತ್ತಮ ಆರೋಗ್ಯ ಬಯಸುವವರು ಕೊತ್ತಂಬರಿ ನೀರು ಸೇವಿಸಿದರೆ ಕೊಂಚ ದಿನಗಳಲ್ಲೇ ನಿಮ್ಮಲ್ಲಿ ಬದಲಾವಣೆ ಕಾಣೋದು ಪಕ್ಕಾ.
ನಿಮಗೆ ಗೊತ್ತಾ? ಕೊತ್ತಂಬರಿಯಲ್ಲಿ ಅನೇಕ ಪೋಷಕಾಂಶಗಳು ಇವೆ. ಇದರಿಂದ ಕಷಾಯ ಮಾಡುತ್ತಾರೆ. ಅಡುಗೆಗೂ ಬಳಸುತ್ತಾರೆ. ಆದರೆ ಬಹುತೇಕರಿಗೆ ಕೊತ್ತಂಬರಿಯನ್ನು ಅಡುಗೆ ರುಚಿಯಾಗಿಸಲು ಬಳಸುತ್ತಾರೆ ಎಂದು ನಂಬಿದ್ದಾರೆ. ಇದು ಅಡುಗೆ ರುಚಿಗೆ ಮಾತ್ರವಲ್ಲ, ಇದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಬಹುತೇಕರಿಗೆ ತಿಳಿದಿಲ್ಲ.
ಕೊತ್ತಂಬರಿ ನೀರು ಸೇವಿಸಿದರೆ ದೇಹಕ್ಕೆ ತಂಪು. ಮಾತ್ರವಲ್ಲ ಕೊಲೆಸ್ಟ್ರಾಲ್​ ಕಡಿಮೆ ಮಾಡುವ ಗುಣವಿದೆ. ಅಷ್ಟೇ ಏಕೆ ಹೃದಯವನ್ನ ಆರೋಗ್ಕರವಾಗಿಡುವ ಗುಣವನ್ನ ಕೊತ್ತಂಬರಿ ಹೊಂದಿದೆ. ಹಾಗಾಗಿ ತಿಳಿದವರು ಇದರ ನೀರನ್ನು ಸೇವಿಸುತ್ತಾರೆ. ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ.
/newsfirstlive-kannada/media/post_attachments/wp-content/uploads/2025/02/Corriander-Water.jpg)
ಅರ್ಜೀರ್ಣ, ಗ್ಯಾಸ್​​ ಮುಂತಾದ ಸಮಸ್ಯೆ ಇರುವವರಿಗೂ ಇದು ಮನೆ ಮದ್ದು ಎಂದರೆ ತಪ್ಪಾಗಲಾರದು. ನಿಯಮಿತವಾಗಿ ಬಳಸಿಕೊಂಡು ಇದರ ನೀರು ಸೇವಿಸಿದರೆ ಸಾಕು. ಇಂತಹ ಸಮಸ್ಯೆ ಮಂಗಮಾಯವಾಗೋದು ಗ್ಯಾರಂಟಿ.
ಚರ್ಮದ ಆರೈಕೆಗೂ ಕೊತ್ತಂಬರಿ ಸಹಕಾರಿ. ಇದರ ಸೇವನೆಯಿಂದ ಆರೋಗ್ಯಕರ ಚರ್ಮ ನಮ್ಮದಾಗುತ್ತೆ. ಅಷ್ಟೇ ಏಕೆ ಸಂಧಿವಾತ, ಕೀಲು ನೋವಿಗೆ ಪರಿಹಾರ ಇದರಲ್ಲಿದೆ. ತೂಕ ಕಡಿಮೆ ಮಾಡಲು ಪರದಾಡುವವರು ಕೊತ್ತಂಬರಿ ನೀರು ಸೇವಿಸಿ ಪ್ರತಿಫಲ ಪಡೆಯಬಹುದು.
ಕೊತ್ತಂಬರಿಯಿಂದ ಸಿಗುವ ಆರೋಗ್ಯ ಪ್ರಯೋಜನ ತಿಳಿದುಕೊಳ್ಳಲು ಅರ್ಧ ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ನೆನೆಸಿಡಿ. 2 ಗಂಟೆ ಬಳಿಕ ಸೇವಿಸಿ. ಹೀಗೆ ದಿನನಿತ್ಯ ಮಾಡುವುದರಿಂದ ಆರೋಗ್ಯ ಸೂಪರ್​.. ಸಖತ್ತಾಗಿರುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us