/newsfirstlive-kannada/media/post_attachments/wp-content/uploads/2025/01/Dates.jpg)
ಖರ್ಜೂರವು ಸುವಾಸನೆ ಮತ್ತು ಪೋಷಕಾಂಶಗಳಿಂದ ಕೂಡಿದ ಅದ್ಭುತ ಹಣ್ಣು.. ಅದರ ಸೇವನೆಯಿಂದ ಆರೋಗ್ಯಕ್ಕೆ ನೂರೆಂಟು ಪ್ರಯೋಜನಗಳಿವೆ. ದಿನಕ್ಕೆ ಕನಿಷ್ಠ ಎರಡು ಖರ್ಜೂರ ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಭಾರೀ ಬದಲಾವಣೆಯನ್ನು ಕಾಣಬಹುದಾಗಿದೆ.
ಖರ್ಜೂರವನ್ನು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸಬೇಕು. ಖರ್ಜೂರದಲ್ಲಿ ಜೀವಸತ್ವಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಖನಿಜಗಳು, ಫೈಬರ್, ರಂಜಕ, ಕಾಪರ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳು ತುಂಬಿರುತ್ತವೆ.
ಇದನ್ನೂ ಓದಿ: ರಾತ್ರಿ ನಿದ್ರೆ ಬರ್ತಿಲ್ವಾ? ನೀವು ಚೆನ್ನಾಗಿ ನಿದ್ದೆ ಮಾಡಲು ಏನು ಮಾಡಬೇಕು..?
/newsfirstlive-kannada/media/post_attachments/wp-content/uploads/2025/01/Dates-1.jpg)
ಖರ್ಜೂರದಲ್ಲಿ ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಸಮೃದ್ಧವಾಗಿರುತ್ತದೆ. ಇವು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತವೆ. ಹೃದಯವೂ ಆರೋಗ್ಯವಾಗಿರುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ತಜ್ಞರ ಪ್ರಕಾರ ದಿನಕ್ಕೆ ಎರಡು ಖರ್ಜೂರ ತಿಂದರೆ ಮಲಬದ್ಧತೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದರಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಸಮಸ್ಯೆಯನ್ನು ಸರಿಪಡಿಸುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚುತ್ತದೆ. ವಿಟಮಿನ್ ಎ, ವಿಟಮಿನ್ ಸಿ ಹಾಗೂ ಇತರೆ ಔಷಧೀಯ ಗುಣಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಖರ್ಜೂರವು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತಹೀನತೆ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಲ್ಲ. ಜೊತೆಗೆ ಹೊಳೆಯುವ ಚರ್ಮ ಕೂಡ ನಿಮ್ಮದಾಗುತ್ತದೆ.
ಇದನ್ನೂ ಓದಿ: ‘ಮಜಾ ಟಾಕೀಸ್​​’ನಲ್ಲಿ ಯೋಗರಾಜ್ ಭಟ್, ಪ್ರಿಯಾಂಕ.. ಇನ್ನೂ ಯಾರ್ ಯಾರು ಇರ್ತಾರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us