newsfirstkannada.com

ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಗೊತ್ತಾ..?

Share :

11-06-2023

    ನೀರನ್ನು ದಿನನಿತ್ಯ ಕುಡಿಯುತ್ತಿದ್ದರೆ ಏನೆಲ್ಲಾ ಪ್ರಯೋಜನ?

    ಪ್ರತಿದಿನ ಎದ್ದ ಕೂಡಲೇ ಎಷ್ಟು ನೀರನ್ನು ಕುಡಿಯಬೇಕು?

    ನೀರು ಕುಡಿಯದಿದ್ದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ?

ನೀರು ಆರೋಗ್ಯಕ್ಕೆ ಬಹಳ ಮುಖ್ಯ. ಪ್ರತಿದಿನ ಎದ್ದ ಕೂಡಲೇ ನೀರನ್ನು ಕುಡಿಯಬೇಕು ಅಂತಾರೆ. ಪ್ರತಿದಿನ ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ? ದಿನನಿತ್ಯ ಎಷ್ಟು ನೀರನ್ನು ಕುಡಿಯಬೇಕು? ನೀರನ್ನು ಕುಡಿಯದಿದ್ದರೆ ಏನಾಗಬಹುದು? ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು? ಎಂಬೆಲ್ಲಾ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡುವುದು ಸರ್ವೇ ಸಾಮಾನ್ಯ. ಪ್ರತಿದಿನ ಸಾಕಷ್ಟು ಶುದ್ಧ ನೀರನ್ನು ಸೇವಿಸುವುದು ಎಲ್ಲಾ ಮಾನವರಿಗೆ ಅತ್ಯಗತ್ಯವಾಗಿರುತ್ತದೆ. ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ ಏನೆಲ್ಲಾ ಪ್ರಯೋಜನಕಾರಿ ಆಗುತ್ತೆ ಎಂಬುವುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?

  • ಪ್ರತಿದಿನ ಎದ್ದ ಕೂಡಲೇ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದ ಭಾಗಗಳನ್ನು ಚುರುಕು ಮಾಡುವಲ್ಲಿ ಸಹಕಾರಿಯಾಗುತ್ತದೆ.
  • ಶುದ್ಧವಾದ ನೀರನ್ನು ಕುಡಿಯುದರಿಂದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಪಳ ಪಳ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
  • ಬೊಜ್ಜು, ಮಲಬದ್ಧತೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳಿಗೆ ನೀರು ಇದಕ್ಕೆಲ್ಲ ತಕ್ಕ ರಾಮಬಾಣ
  • ಸ್ನಾನಕ್ಕೆ ಹೋಗುವ ಮುನ್ನ ಒಂದು ಲೋಟ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ರಕ್ತದೊತ್ತಡ ಕಡಿಮೆ ಆಗುತ್ತದೆ.
  • ಮಲಗುವ ಮುನ್ನ ಒಂದು ಲೋಟ ನೀರನ್ನು ಕುಡಿಯುವುದು ಒಳ್ಳೆಯ ಅಭ್ಯಾಸ. ಇದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯಾಗದಂತೆ ತಡೆಗಟ್ಟಬಹುದು.
  • ದಿನನಿತ್ಯ ನೀರನ್ನು ಚೆನ್ನಾಗಿ ಕುಡಿದರೆ ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ದಿನಕ್ಕೆ 2-3 ಲೀಟರ್​​ ನೀರನ್ನು ಕುಡಿಯಬೇಕು. ಇದರಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರ ಜೊತೆಗೆ ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಕಾರಿಯಾಗುತ್ತದೆ.

ನೀರು ಸೇವನೆ ಕಮೇಣ ಕಡಿಮೆಯಾದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ?

  • ನೀರನ್ನು ಕುಡಿಯದಿದ್ದರೆ ದೇಹದಲ್ಲಿನ ಆಮ್ಲಜನಕ ಮತ್ತು ರಕ್ತ ಪರಿಚಲನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
  • ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದರೆ ನಿಮ್ಮ ದೇಹಕ್ಕೆ ಆಯಾಸವಾಗುವುದು, ಜೊತೆಗೆ ಆಲಸ್ಯಕ್ಕೆ ಕಾರಣವಾಗುತ್ತದೆ.
  • ಗಂಟಲು ಕೆರೆತ, ತಲೆ ನೋವು, ಕಣ್ಣಿನ ಸಮಸ್ಯೆ, ಚರ್ಮ ಒಣಗುವುದು, ಒಡೆದ ತುಟಿಗಳು ಮತ್ತು ಬಾಯಿ ತೀವ್ರವಾಗಿ ಒಣಗುತ್ತದೆ.
  • ನೀರನ್ನು ಸೇವಿಸುವುದು ಕಡಿಮೆಯಾದರೆ ಲಾಲಾರಸ ಗ್ರಂಥಿಗಳು ಅಗತ್ಯವಾದ ಲಾಲಾರಸವನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ.
  • ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರದ ಉತ್ಪಾದನೆಯ ಕೊರತೆ ಮತ್ತು ಮೂತ್ರದಲ್ಲಿ ಗಾಢ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ.
  • ನಿಮ್ಮ ಸ್ನಾಯುಗಳು ಗಟ್ಟಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಜೊತೆಗೆ ಕೀಲುಗಳಲ್ಲಿನ ನೋವು ಕಾಣಿಸಿಕೊಳ್ಳುತ್ತದೆ.
  • ಅತೀ ಕಡಿಮೆ ನೀರನ್ನ ಕುಡಿಯುವುದರಿಂದ ಹೊಟ್ಟೆಯಲ್ಲಿ ಮಲಬದ್ಧತೆ ಸಮಸ್ಯೆಯೂ ಶುರುವಾಗುತ್ತದೆ.

ಒಟ್ಟಾರೆಯಾಗಿ ನೀರನ್ನು ಕುಡಿಯುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಂಡಿದ್ದೀರಿ. ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಚೆನ್ನಾಗಿ ನೀರನ್ನು ಕುಡಿದು ಒಳ್ಳೆಯ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀರು ಕುಡಿಯೋದರಿಂದ ಏನೆಲ್ಲಾ ಪ್ರಯೋಜನಗಳು ಇವೆ ಗೊತ್ತಾ..?

https://newsfirstlive.com/wp-content/uploads/2023/06/driking-1.jpg

Load More