/newsfirstlive-kannada/media/post_attachments/wp-content/uploads/2024/12/FISH-FOOD-BENEFITS.jpg)
ಮೀನು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಅನೇಕ ರೀತಿಯ ಉಪಯೋಗಳು ಇವೆ. ಮೀನು ಹಾಗೂ ಮೀನಿನ ಎಣ್ಣೆ ಆರೋಗ್ಯದ ಮೇಲೆ ತುಂಬಾ ಧನಾತ್ಮಕ ಪರಿಣಾಮವನ್ನು ಬೀರುವಂತಹವು. ಪ್ರೊಟೀನ್ ಮತ್ತು ಪೋಷಕಾಂಶಗಳು ಈ ಆಹಾರದಲ್ಲಿ ಹೆಚ್ಚು ನಾವು ಪಡೆಯಬಹುದು. ಮೀನುಗಳಲ್ಲಿ ಹಲವಾರು ಪ್ರಕಾರಗಳಿವೆ. ಎಲ್ಲಾ ಮೀನುಗಳಲ್ಲಿಯೂ ಪೋಷಕಾಂಶ ಜೀವಸತ್ವ ಖನಿಜಾಂಶಗಳು ನಮಗೆ ಹೇರಳವಾಗಿ ಸಿಗುತ್ತವೆ. ಮೀನು ತಿನ್ನುವುದರಿಂದ ನಮಗೆ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡುವುದಾದ್ರೆ.
ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ಮೀನುಗಳ ಸೇವನೆಯಿಂದ ನಮ್ಮ ಬುದ್ಧಿ ಚುರುಕಾಗುತ್ತದೆ ಮತ್ತು ಅನೇಕ ರೋಗ ಹಾಗೂ ಆರೋಗ್ಯ ಸಂಬಂಧಿತ ತೊಂದರೆಗಳನ್ನು ದೂರ ಇಡಬಹುದು. ಮೀನಿನಲ್ಲಿ ಅತ್ಯುತ್ತಮ ಗುಣಮಟ್ಟದ ಓಮೇಗಾ-3 ಕೊಬ್ಬಿನ ಆಮ್ಲವು ಹೇರಳವಾಗಿರುವುದರಿಂದ ಇದು ಮಕ್ಕಳ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಕಣ್ಣಿನ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.
ಪ್ರತಿದಿನ ಮೀನು ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವ, ರಕ್ತನಾಳಗಳು ಕುಗ್ಗುವ, ರಕ್ತನಾಳಗಳು ಗಡಸುಗೊಳ್ಳುವ ತೊಂದರೆಗಳು ಕಾಣುವುದಿಲ್ಲ. ಮೀನು ಸೇವನೆಯಿಂದ ದೇಹದಲ್ಲಿ ಕೊಬ್ಬಿನಾಂಶವು ಕೂಡ ಕಡಿಮೆಯಾಗುತ್ತದೆ. ಅದರ ಜೊತೆಗೆ ರಕ್ತನಾಳಗಳು ಮೃದುತ್ವಗೊಂಡು ಹೃದಯ ಸಂಬಂಧಿ ಕಾಯಿಲೆಯಿಂದ ನಾವು ದೂರ ಇರಬಹುದು.
ಇದನ್ನೂ ಓದಿ:ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ
ಈಗಾಗಲೇ ಹೇಳಿದಂತೆ ಮೀನಿನಲ್ಲಿ ಓಮೆಗಾ -3 ಅಂಶ ಹೇರಳವಾಗಿದೆ ಕೊಬ್ಬಿನ ಆಮ್ಲಗಳು ಇರುವುದರಿಂದ ಕ್ಯಾನ್ಸರ್ನಂತಹ ರೋಗಗಳನ್ನು ತಡೆಯಬಲ್ಲವು. ಪ್ರಮುಖವಾಗಿ ಬಾಯಿ, ಅನ್ನನಾಳ, ಸಣ್ಣ ಕರುಳು, ಸ್ತನ ಹಾಗೂ ಗರ್ಭಾಶಯಗಳ ಕ್ಯಾನ್ಸರ್ನ್ನು ಶೇಕಡಾ 30 ರಿಂದ 50 ರಷ್ಟು ಕಡಿಮೆ ಮಾಡಬಲ್ಲವು.
ಗರ್ಭಿಣಿಯರು ಪ್ರತಿ ದಿನ ಮೀನು ತಿನ್ನುವುದರಿಂದ ಅವಧಿಗೆ ಮೊದಲು ಮಗುವಿಗೆ ಜನ್ಮ ನೀಡುವುದನ್ನು ತಡೆಯಬಹುದು ಹಾಗೂ ಎದೆಯ ಹಾಲು ಹೆಚ್ಚುವುದರ ಜೊತೆಗೆ ಮೂಳೆಗಳು ಸದೃಢವಾಗುತ್ತವೆ. ಇನ್ನು ಆಸ್ಟ್ರೇಲಿಯಾ ಪೋಷಣೆ ವಿಭಾಗ 2004ರಲ್ಲಿ ಹೇಳುವ ಪ್ರಕಾರ ಮಕ್ಕಳು ಹೆಚ್ಚು ಹೆಚ್ಚು ಮೀನನು ತಿನ್ನುವುದರಿಂದ ಅವರಲ್ಲಿ ಅಸ್ತಮಾ ಮಾದರಿಯ ರೋಗಗಳು ಕಂಡುಬರುವುದು ತುಂಬಾ ವಿರಳ ಎನ್ನಲಾಗುತ್ತದೆ.
ಇದನ್ನೂ ಓದಿ:ಸಕ್ಕರೆ ಕಾಯಿಲೆ, ರಕ್ತದೊತ್ತಡ ನಿಯಂತ್ರಣಕ್ಕಾಗಿ ಪರದಾಡುತ್ತಿದ್ದೀರಾ? ಈ ಐದು ತರಕಾರಿ ತಪ್ಪದೇ ಸೇವಿಸಿ
ವೃದ್ಧರು ಮೀನು ಹೆಚ್ಚು ತಿನ್ನುವುದರಿಂದ ಅವರ ಅರಿವು ಮರುವು, ಖಿನ್ನತೆ ಕಡಿಮೆ ಆಗುವುದರ ಜೊತೆಗೆ ಜ್ಞಾಪಕ ಶಕ್ತಿಯ ಕೊರತೆಯನ್ನು ಇದು ನೀಗಿಸುತ್ತದೆ. ಪ್ರತಿ ದಿನ ಮೀನು ತಿನ್ನುವುದರಿಂದ ಸಂಧಿವಾತ, ಕೀಲು ನೋವು, ರಕ್ತಸೋರುವಿಕೆ ಕಡಿಮೆಯಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚಿಸುತ್ತದೆ ಎಂದು ಕಾರ್ಡಿಪ್ ವಿಶ್ವವಿದ್ಯಾಲಯ 1998ರಲ್ಲಿ ತನ್ನ ಅಧ್ಯಯನದಲ್ಲಿ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ