/newsfirstlive-kannada/media/post_attachments/wp-content/uploads/2024/04/HEALTH_EGG_4.jpg)
ಮೊಟ್ಟೆಯನ್ನು ಪೋಷಕಾಂಶಗಳ ‘ಪವರ್ ಹೌಸ್’ (Power house) ಎಂದು ಕರೆಯುತ್ತಾರೆ. ಪ್ರತಿದಿನ ಒಂದು ಮೊಟ್ಟೆ ತಿಂದರೆ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗುತ್ತವೆ. ಪ್ರೋಟೀನ್, ವಿಟಮಿನ್ ಬಿ 12, ವಿಟಮಿನ್ ಡಿ, ಐರನ್, ಜಿಂಕ್ ಮತ್ತು ಸೆಲೆನಿಯಂ (Selenium)ನಂತಹ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.
ಇದನ್ನೂ ಓದಿ: Chicken: ಸ್ಕಿನ್, ಸ್ಕಿನ್ ಲೆಸ್ ಚಿಕನ್! ಇದರಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ..?
ಕೆಲವರು ಮೊಟ್ಟೆಯ ಬಿಳಿ ಭಾಗ (Egg white) ಮಾತ್ರ ತಿಂದು ಹಳದಿ ಲೋಳೆಯನ್ನು (Yolk) ಹಾಗೆ ಬಿಡುತ್ತಾರೆ. ತಜ್ಞರ ಪ್ರಕಾರ, ಹಳದಿ ಭಾಗ ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದಕ್ಕೆ ಅದನ್ನು ಹಸಿರು ಹಳದಿ ಎಂದು ಕರೆಯುತ್ತಾರೆ. ಅದರಿಂದ ಏನೆಲ್ಲ ಲಾಭ ಆಗಲಿದೆ ಅನ್ನೋದ್ರ ವಿವರ ಇಲ್ಲಿದೆ. ಮೊಟ್ಟೆಯಲ್ಲಿರುವ ಹಳದಿ ಬಾಗ ಪೋಷಕಾಂಶಗಳ ಗಣಿ. ಆದರೆ ಕೊಲೆಸ್ಟ್ರಾಲ್ ಭಯದಿಂದ ಅನೇಕರು ಅದನ್ನು ತ್ಯಜಿಸುತ್ತಾರೆ. ವಾಸ್ತವವಾಗಿ ಇದು ಆರೋಗ್ಯ ಲಾಭವನ್ನು ಹೊಂದಿದೆ.
ಏನೆಲ್ಲ ಲಾಭ..?
- ವಿಟಮಿನ್ ಎ ಸಮೃದ್ಧವಾಗಿದ್ದು, ಇದು ಕಣ್ಣಿನ ರೆಟಿನಾಗೆ ಅತ್ಯಗತ್ಯ
- ವಯಸ್ಸಿಗೆ ಸಂಬಂಧಿಸಿದ ಕುರುಡುತನದಿಂದ ನಮ್ಮನ್ನು ರಕ್ಷಿಸುತ್ತದೆ
- ವಿಟಮಿನ್ ಕೆ ಸಮೃದ್ಧ, ಗಾಯವಾದಾಗ ರಕ್ತಸ್ರಾವ ತಡೆಯುತ್ತದೆ
- Osteoporosis ಬರದಂತೆ ನಮ್ಮನ್ನು ರಕ್ಷಿಸುತ್ತದೆ ಹಳದಿ ಭಾಗ
- ಮೊಟ್ಟೆಯು ವಿಟಮಿನ್ ಇ ನಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ
- ಚರ್ಮದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
- ಸುಕ್ಕುಗಳು, ಮೊಡವೆಗಳಂತಹ ಸಮಸ್ಯೆ ಕಡಿಮೆ ಮಾಡುತ್ತದೆ
- ಮೊಟ್ಟೆಯಲ್ಲಿ ಬಿ ಜೀವಸತ್ವಗಳು ಕೂಡ ಸಮೃದ್ಧವಾಗಿವೆ
- ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ
ಇದನ್ನೂ ಓದಿ: ತೂಕ ಜಾಸ್ತಿಯಿದ್ರೆ ಎದುರಾಗೋ ಸಮಸ್ಯೆಗಳೇನು? ಸಣ್ಣ ಆಗೋದು ಹೇಗೆ? ಡಯೆಟ್ ಪ್ಲಾನ್ ಹೇಗಿರಬೇಕು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ