ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ: ನಿಮಗೆ ಗೊತ್ತಿರದ ವಿಷಯ ಇಲ್ಲಿವೆ!

author-image
Gopal Kulkarni
Updated On
ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಲಾಭಗಳಿವೆ: ನಿಮಗೆ ಗೊತ್ತಿರದ ವಿಷಯ ಇಲ್ಲಿವೆ!
Advertisment
  • ಗೆಣಸು ತಿನ್ನುವುದಿಂದ ನಮಗೆ ಸಿಗಲಿವೆ ಹಲವು ಪ್ರಯೋಜನಗಳು
  • ದೃಷ್ಟಿದೋಷದಿಂದ ಪಾರಾಗಬೇಕು ಎಂದರೆ ಗೆಣಸಿನ ಮೊರೆ ಹೋಗಿ
  • ಇದರಲ್ಲಿರುವ ಪೋಷಕಾಂಶಗಳು, ಜೀವಸತ್ವಗಳು ಎಷ್ಟು ಉಪಕಾರಿ?

ಸ್ವೀಟ್ ಪಟಾಟೋ ಅಂದ್ರೆ ಕನ್ನಡದಲ್ಲಿ ಸಿಹಿ ಗೆಣಸು, ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಭಾರೀ ಪ್ರಯೋಜನಗಳಿವೆ. ಇದನ್ನು ಜೀವಸತ್ವಗಳ, ಪೋಷಕಾಂಶಗಳ ಶಕ್ತಿ ಕೇಂದ್ರ ಅಂತಲೇ ಕರೆಯುತ್ತಾರೆ. ಉಪವಾಸ ಮಾಡುವವರು ವಿಶೇಷವಾಗಿ ಈ ತರಕಾರಿಯನ್ನು ಸೇವಿಸುತ್ತಾರೆ. ಮನುಷ್ಯನ ದೇಹಕ್ಕೆ ಬೇಕಾಗುವ ಪ್ರಮುಖ ವಿಟಮಿನ್ಸ್ ಮತ್ತು ಮಿನರಲ್ಸ್​​ಗಳು ನಮಗೆ ಇದರಲ್ಲಿ ಸಿಗುತ್ತವೆ

ಅತಿಹೆಚ್ಚು ಪೋಷಕಾಂಶಗಳು: ಗೆಣಸು ತಿನ್ನುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಎ, ಸಿ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ವಿಟಲ್ ಬಿ ವಿಟಮಿನ್​ ಅದರ ಜೊತೆಗೆ ಸಾಕಷ್ಟು ಖನಿಜಾಂಶಗಳಿಂದ ಈ ಆಹಾರ ತುಂಬಿದೆ. ಇದರಲ್ಲಿ ನಮಗೆ ಅತಿಹೆಚ್ಚು ಪೋಟ್ಯಾಶಿಯಂ ದೊರಕುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿಂದರೆ ಲಾಭವೇನು? ಹತ್ತಾರು ಸಮಸ್ಯೆ ನಿವಾರಿಸುತ್ತೆ!

ಆ್ಯಂಟಿಆಕ್ಸಿಡಂಟ್​​ ಅಂಶಗಳು: ಉಳಿದ ಆಹಾರಗಳಿಗಿಂತ ಹೆಚ್ಚು ಆ್ಯಂಟಿಆಕ್ಸಿಡೆಂಟ್​ಗಳು ನಮಗೆ ಗೆಣಸಿನಲ್ಲಿ ಸಿಗುತ್ತವೆ. ಬೆಟಾ ಕೊರೊಟೆನ್​ನಂತಹ ಅಂಶಗಳು ಇದರಲ್ಲಿ ಸಿಗುವುದರಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಗೆಣಸು ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಮಾರಕ ಕಾಯಿಲೆಗಳಿಂದ ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ: ಗೆಣಸಿನಲ್ಲಿ ಅತಿಹೆಚ್ಚು ಫೈಬರ್​ ಅಂಶ ಹೆಚ್ಚು ಇರುವುದರಿಂದ ಇದು ಜೀರ್ಣಕ್ರಿಯನ್ನು ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರಿಂದ ಮಲಬದ್ಧತೆಯಂತ ಸಮಸ್ಯೆಗಳಿಂದ ದೂರ ಇರಬಹುದು.

ರೋಗ ನಿರೋಧಕ ಶಕ್ತಿ: ಗೆಣಸಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಈಗಾಗಲೇ ಹೇಳಿದಂತೆ ವಿಟಮಿನ್ ಎ ಅಂಶ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೋಂಕುಗಳೊಂದಿಗೆ ಸಮರ್ಥವಾಗಿ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತೆ.

ಇದನ್ನೂ ಓದಿ:Cholesterol: ಬೊಜ್ಜಿನ ಬಗ್ಗೆ ಇವೆ 7 ಕಾಲ್ಪನಿಕ ಕಥೆಗಳು; ಇವುಗಳ ಬಗ್ಗೆ ನಿಮಗೆ ಯಾರೂ ಹೇಳಿರಲ್ಲ!

ತೂಕ ನಿರ್ವಹಣೆ: ತೂಕ ನಿರ್ವಹಣೆಗೆ ಗೆಣಸು ಹೇಳು ಮಾಡಿಸಿದ ಆಹಾರ. ತೂಕ ನಿರ್ವಹಣೆ ಮಾಡಿಕೊಳ್ಳಬೇಕು ಎನ್ನುವವರು ಗೆಣಸಿನ ಮೊರೆ ಹೋಗಬಹದು.

ದೃಷ್ಟಿ ಆರೋಗ್ಯವನ್ನು ವೃದ್ಧಿಸುತ್ತದೆ: ಗೆಣಸಿನಲ್ಲಿ ಅತಿಹೆಚ್ಚು ಬೆಟಾ ಕ್ಯಾರೊಟೆನ್​ ಇರುವುದರಿಂದ ಹಾಗೂ ವಿಟಮಿನ್ ಎ ಅಂಶ ಇರುವುದಿರರಿಂದ ಇದು ದೇಹಕ್ಕೆ ಹಾಗೂ ನಮ್ಮ ದೃಷ್ಟಿ ಸಾಮರ್ಥ್ಯಕ್ಕೆ ಶಕ್ತಿತುಂಬುತ್ತದೆ. ಹಾಗೂ ಕುರುಡುತನ ನಮ್ಮತ್ತ ಹಾಯದಂತೆ ಕಾಪಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment