/newsfirstlive-kannada/media/post_attachments/wp-content/uploads/2024/11/DARSHAN.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ದರ್ಶನ್​ಗೆ ನೀಡಿರುವ ಜಾಮೀನನ್ನು ರದ್ದು ಕೋರಿ ಅರ್ಜಿ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಪೊಲೀಸರು ರಾಜ್ಯ ಗೃಹ ಇಲಾಖೆಗೆ ಬೆಂಗಳೂರು ಪೊಲೀಸರು ಪತ್ರ ಬರೆದಿದ್ದಾರೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ನಟ ದರ್ಶನ್​ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಜಾಮೀನು ಪ್ರಶ್ನಿಸಲು ಇದೀಗ ಪೊಲೀಸರು ಹೆಜ್ಜೆಯಿಟ್ಟಿದ್ದಾರೆ. ಮೊದಲು ಕಾನೂನು ಸಲಹೆ ಪಡೆದು ಇದೀಗ ಗೃಹ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ರಾಜ್ಯ ಗೃಹ ಇಲಾಖೆ ಈ ಪತ್ರವನ್ನು ಕಾನೂನು ಇಲಾಖೆಗೆ ರವಾನಿಸಲಿದೆ. ಕಾನೂನು ಇಲಾಖೆಗೆ ಪರಾಮರ್ಶಿಸಲು ಪತ್ರವನ್ನು ರವಾನಿಸಲಿದೆ. ಆ ನಂತರ ಗೃಹ ಇಲಾಖೆಯಿಂದ ಅನುಮತಿಯ ಬಗ್ಗೆ ತೀರ್ಮಾನವಾಗಲಿದೆ.
ವಿಶೇಷ ಸೂಚನೆ: DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us