/newsfirstlive-kannada/media/post_attachments/wp-content/uploads/2025/07/BYRATHI-BASVARAJ.jpg)
ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೇಸ್ನಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ಗೆ ಸಂಕಷ್ಟ ಎದುರಾಗಿದೆ. ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವರಿಗೆ 2 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದರ ಮಧ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿ ಬಂದ ಬೆನ್ನಲ್ಲೇ ಅವರ ವಿರುದ್ಧ ಎಫ್ಐಆರ್ ಕೂಡ ಆಗಿದೆ. ಸದ್ಯ ಈ ಕೇಸ್ ಗಂಭೀರ ಸ್ವರೂಪ ಪಡೀತಿದ್ದು, ಪೊಲೀಸರು ಬಿಜೆಪಿ ಶಾಸಕನ ವಿಚಾರಣೆಗೆ ಮುಂದಾಗಿದ್ದಾರೆ. ಬೈರತಿ ಗ್ರಾಮದಲ್ಲಿರುವ ಶಾಸಕ ಬೈರತಿ ಬಸವರಾಜು ಮನೆಗೆ ರಾತ್ರಿ ತೆರಳಿದ ಪೊಲೀಸರು ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಬೈರತಿ ಬಸವರಾಜು ಅವರ ಪುತ್ರ ನೀರಜ್, ತಂದೆಯ ಪರವಾಗಿ ನೋಟಿಸ್ ಸ್ವೀಕರಿಸಿದ್ದಾರೆ.
ಕೇಸ್ಗೆ ಟ್ವಿಸ್ಟ್ ನೀಡಿದ ಬಿಕ್ಲು ಶಿವನ ತಾಯಿ
ಇತ್ತ ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಕೊಲೆಯಾದ ಬಿಕ್ಲು ಶಿವನ ತಾಯಿ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಬೈರತಿ ಬಸವರಾಜ್ ಕುಮ್ಮಕ್ಕಿನಿಂದಲೇ ಮಗನ ಮೇಲೆ ಅಟ್ಯಾಕ್ ಆಗಿದೆ ಎಂದಿದ್ದ ವಿಜಯಲಕ್ಷ್ಮಿ, ಈಗ ಉಲ್ಟಾ ಹೊಡೆದಿದ್ದಾರೆ. ನಾನು ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ. ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ ಎಂದು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೇಸ್ಗೂ ತಿರುವು ನೀಡಿದೆ.
ಒಂದು ಸಾರಿ ಅಟ್ಯಾಕ್ ಮಾಡಲು ನಡೆದಿರುವ ಬಗ್ಗೆ ಹೇಳಿದ್ದ. ನನ್ನನ್ನು ಹೊಡೆಯಲು ಆಳು ಕಳುಹಿಸಿದ್ದರು. ಆದರೆ ಅವರಿಗೆ ಆಗಲಿಲ್ಲ. ಯಾರೋ ಹೇಳಿದರು, ನನಗೆ ಹೊಡೆಯಲು ಮದ್ರಾಸ್ನಿಂದ ಆಳುಗಳನ್ನು ಕರೆಸಿದ್ದಾರೆ ಎಂದು. ಆಗ ನಾನು ಹೇಳಿದೆ. ನೀನು ದೇವರ ನಂಬು ಅಂತಾ. ಯಾವಾಗಲೂ ಒಂದು ಸಲ ಸೈಟ್ ವಿಚಾರಕ್ಕೆ ಗಲಾಟೆ ಆಗಿದೆ. ಅದು ಪೊಲೀಸ್ ಠಾಣೆಯಲ್ಲಿದೆ. ಎಲ್ಲಾ ದಾಖಲೆಗಳು ಮಗನ ಮೊಬೈಲ್ನಲ್ಲೇ ಇದ್ದವು. ಆ ಫೋನ್ ಅವರು ತೆಗೆದುಕೊಂಡು ಹೋಗಿದ್ದಾರೆ. ಫೋನ್ ಇಲ್ಲ, ಮಗನೂ ಇಲ್ಲ. ಇನ್ನೂ ಯಾರ ಹೆಸರೂ ಕೂಡ ಕೊಟ್ಟಿಲ್ಲ. ದೂರಿನಲ್ಲಿ ಯಾರ ಹೆಸರನ್ನೂ ಹೇಳಿಲ್ಲ ಎಂದಿದ್ದಾರೆ
ಇದನ್ನೂ ಓದಿ: ರಾಮಾಚಾರಿ ಬೆನ್ನಲ್ಲೇ ವೀಕ್ಷಕರ ನೆಚ್ಚಿನ ಮತ್ತೊಂದು ಸೀರಿಯಲ್ ಅಂತ್ಯ.. ಯಾವುದು..?
ನಡುರಸ್ತೆಯಲ್ಲೇ ಬಿಕ್ಲು ಶಿವನ ಕೊಚ್ಚಿ ಹಾಕಿದವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ಧಾರೆ. ಮತ್ತೊಂದೆಡೆ ಬಂಧನ ಭೀತಿಯಿಂದ ಜಗದೀಶ್ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿರುವುದು ತಿಳಿದುಬಂದಿದೆ. ಸದ್ಯ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್ಗಾಗಿ ಪೊಲೀಸರು ಪತ್ತೆ ಕಾರ್ಯ ತೀವ್ರಗೊಳಿಸಿದ್ದಾರೆ.
ಒಟ್ಟಾರೆ, ಬಿಕ್ಲು ಶಿವ ಕೊಲೆ ಕೇಸ್‌ನ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಎ5 ಆಗಿರೋ ಬೈರತಿ ಬಸವರಾಜ್ ಕೈವಾಡವಿದ್ಯಾ ಅನ್ನೋ ಬಗ್ಗೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.. ಇದೀಗ ನೋಟಿಸ್ ನೀಡಿರುವ ಹಿನ್ನೆಲೆ ಭೈರತಿ ಬಸವರಾಜ್ ವಿಚಾರಣೆಗೆ ಹಾಜರಾಗ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ವಿಜಯ್ ದೇವರಕೊಂಡ ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ