Advertisment

ರೇಣುಕಾಸ್ವಾಮಿ ನಿವಾಸಕ್ಕೆ ಬೆಂಗಳೂರು ಪೊಲೀಸರು ದಿಢೀರ್ ಭೇಟಿ.. ಅದೊಂದು ವಸ್ತುವಿಗಾಗಿ ತೀವ್ರ ಹುಡುಕಾಟ..!

author-image
Ganesh
Updated On
180 ಸಾಕ್ಷ್ಯಗಳ ಸಂಗ್ರಹಿಸಿದ ಪೊಲೀಸರಿಗೆ ಆ ಎರಡು ವಸ್ತುಗಳದ್ದೇ ಟೆನ್ಷನ್..!
Advertisment
  • ಕೋಟೆನಾಡಿನಲ್ಲಿ ಬೆಂಗಳೂರು ಪೊಲೀಸರಿಂದ ತಲಾಶ್​
  • ಮೃತನ ತಂದೆ, ತಾಯಿ ಮತ್ತು ಪತ್ನಿಯ 161 ಹೇಳಿಕೆ ದಾಖಲು
  • ಸಿಪಿಐ ಸಂಜೀವ್ ಗೌಡ ನೇತೃತ್ವದ ತನಿಖಾ ತಂಡದ ಭೇಟಿ

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸ್ತಿರುವ ಬೆಂಗಳೂರು ಪೊಲೀಸರು ನಿನ್ನೆ ಚಿತ್ರದುರ್ಗಕ್ಕೆ ಸದ್ದಿಲ್ಲದೇ ಭೇಟಿ ನೀಡಿದ್ದರು. ರೇಣುಕಾಸ್ವಾಮಿ ಬಳಸುತ್ತಿದ್ದ ಮೊಬೈಲ್ ಪತ್ತೆಗೆ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಿದ್ದಾರೆ. ಹತ್ಯೆ ಬಳಿಕ ಆತ ಬಳಸುತ್ತಿದ್ದ ಫೋನ್ ಮತ್ತೆ ಚಿತ್ರದುರ್ಗಕ್ಕೆ ಆರೋಪಿಗಳು ತಂದು ಬಿಸಾಡಿದ್ದಾರಾ ಅಂತಲೂ ತನಿಖೆ ನಡೆಸಲಾಗುತ್ತಿದೆ.

Advertisment

publive-image

ಕೋಟೆನಾಡು ಚಿತ್ರದುರ್ಗದಲ್ಲಿ ಬೆಂಗಳೂರು ಪೊಲೀಸರು ತೀವ್ರ ತನಿಖೆ ಮಾಡಿದ್ದಾರೆ. ಹಲವು ಆಯಾಮಗಳಲ್ಲೂ ಕೊಲೆ ತನಿಖೆ ನಡೆಸ್ತಿರುವ ಪೊಲೀಸರು, ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಸಿಪಿಐ ಸಂಜೀವ್ ಗೌಡ ನೇತೃತ್ವದ ತನಿಖಾ ತಂಡ ಭೇಟಿ ನೀಡಿತ್ತು.
ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಯಿಂದ 161 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಸಾಕ್ಷಿ ಸಂಗ್ರಹಕ್ಕೆ ವಿವಿಧಡೆ ತಲಾಶ್ ನಡೆಸಿದ್ದಾರೆ. ಮನೆಯಲ್ಲಿದ್ದ ಹಲವು ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಜೂ8 ರಂದು ಏನೆಲ್ಲ ನಡೆದಿತ್ತು ಎಂದು ವಿಚಾರಣೆ ಮಾಡಿ 161 ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಕೊನೆಯದಾಗಿ ಫೋನ್ ಮಾಡಿದ್ದು ಯಾವಾಗ? ಆವಾಗ ಏನು ಹೇಳಿದರು ಅನ್ನೋದ್ರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ರೇಣುಕಾಸ್ವಾಮಿ ಕಡೇ ದಿನ ಬಳಸಿದ್ದ ಬೈಕ್ ಪರಿಶೀಲನೆ ನಡೆಸಿ ಸ್ಪಾಟ್ ಮಹಜರ್ ನಡೆಸಿದ್ದಾರೆ.

publive-image

ಮಹತ್ವದ ದಾಖಲೆ ಪರಿಶೀಲಿಸಿ ಸಾಕ್ಷಿ ಸಂಗ್ರಹಿಸಿರುವ ತನಿಖಾ ತಂಡವು, ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಅಫೋಲೋ ಫಾರ್ಮಾಸಿಗೂ ಭೇಟಿ ನೀಡಿದ್ದಾರೆ. ಅಲ್ಲಿ ಅವರ ಚಲನ ವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಐವರು ಸಿಬ್ಬಂದಿಯ ಫೋನ್ ನಂಬರ್ ಸಂಗ್ರಹಿಸಿ ತೆರಳಿದ್ದಾರೆ. ಚಿತ್ರದುರ್ಗದಲ್ಲಿ ಸಾಕ್ಷ್ಯ ಸಂಗ್ರಹ ಮಾಡಿದ್ದ ಪೊಲೀಸರು ಬೆಂಗಳೂರಿಗೆ ಮತ್ತೆ ವಾಪಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment