ಮಗನ ಫೋಟೋ ಮುಂದೆ ಕಣ್ಣೀರು ಇಡುತ್ತ ಕೂತ ಅಪ್ಪ, ಅಮ್ಮ.. ಶ್ರವಣ್ ಮನೆಯಲ್ಲೀಗ ಮೌನ..

author-image
Ganesh
Updated On
ಮಗನ ಫೋಟೋ ಮುಂದೆ ಕಣ್ಣೀರು ಇಡುತ್ತ ಕೂತ ಅಪ್ಪ, ಅಮ್ಮ.. ಶ್ರವಣ್ ಮನೆಯಲ್ಲೀಗ ಮೌನ..
Advertisment
  • ಕಾಲ್ತುಳಿತದಲ್ಲಿ ಮೃತಪಟ್ಟ ಶ್ರವಣ್ ಮನೆಯಲ್ಲೀಗ ಮೌನ
  • 10 ಲಕ್ಷ ಘೋಷಿಸಿದ್ದ ಸರ್ಕಾರದಿಂದ 25 ಲಕ್ಷ ರೂಪಾಯಿಗೆ ಏರಿಕೆ
  • ಕಾಲ್ತುಳಿತ ಪ್ರಕರಣದ ತಪ್ಪಿತಸ್ಥರ ಬೇಟೆಗಿಳಿದ ಸಿಐಡಿ ತಂಡ

ರಾಜ್ಯದ ಇತಿಹಾಸದಲ್ಲೇ ಕರಾಳ ಘಟನೆಯಾಗಿರೋ ಚಿನ್ನಸ್ವಾಮಿ ಕಾಲ್ತುಳಿತ ದುರಂತದಲ್ಲಿ ನೋವಿನ್ನೂ ಕಡಿಮೆಯಾಗಿಲ್ಲ. ತಮ್ಮವರನ್ನ ಕಳೆದುಕೊಂಡವರ ಕಣ್ಣೀರಿನ್ನೂ ನಿಂತಿಲ್ಲ. ಈ ನಡುವೆ ಸರ್ಕಾರ ತಪ್ಪಿನ ಹೊಣೆ ಹೊರುವ ಬದಲಾಗಿ ಪರಿಹಾರದ ಮೊತ್ತ ಹೆಚ್ಚಿಸಿದೆ.

ಕಾಲ್ತುಳಿತದಲ್ಲಿ ಮೃತಪಟ್ಟ ಶ್ರವಣ್ ಮನೆಯಲ್ಲೀಗ ಮೌನ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ವಿದ್ಯಾರ್ಥಿ ಶ್ರವಣ್ ಕೂಡ ಮೃತಪಟ್ಟಿದ್ದ. ದೊಡ್ಡ ಡಾಕ್ಟರ್ ಆಗಬೇಕು ಅನ್ನೋ ಆತನ ಕನಸು, ಉಸಿರು ಎರಡೂ ನಡುರೋಡಲ್ಲಿ ನಿಂತೇ ಹೋಗಿತ್ತು. ಆದ್ರೆ, ಆತನ ಕುಟುಂಬಸ್ಥರ ನೆನೆಪಲ್ಲಿನ್ನೂ ಆ ಉಸಿರು ಜೀವಂತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿಯಲ್ಲಿರೋ ನಿವಾಸದಲ್ಲಿ ಮೌನವೇ ಮನೆ ಮಾಡಿದೆ .ಹಾಲು ತುಪ್ಪಕಾರ್ಯ ಮುಗಿಸಿರುವ ತಂದೆತಾಯಿ ಮಗನ ಫೋಟೋದ ಮುಂದೆ ಮೂಕರಾಗಿದ್ದಾರೆ. ಆತನ ನೆನೆಪುಗಳು ಪೋಷಕರನ್ನ ಕಾಡ್ತಿದೆ.

ಇದನ್ನೂ ಓದಿ:DK ಒಬ್ಬರೇ ಅಲ್ಲ.. ಆರ್​ಸಿಬಿಯಲ್ಲಿ ಕಪ್ ಗೆಲುವಿನ ಹಿಂದಿನ ನಿಜವಾದ ಸೂತ್ರದಾರ ಇವರೇ..!

publive-image

25 ಲಕ್ಷ ರೂಪಾಯಿಗೆ ಏರಿಕೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತರಾದ ಕುಟುಂಬಗಳಿಗೆ ಘೋಷಿಸಿದ್ದ ಪರಿಹಾರವನ್ನು ತಲಾ 25 ಲಕ್ಷ ರೂಗಳಿಗೆ ಹೆಚ್ಚಿಸುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಈ ಮೊದಲು ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಇದು ಕಡಿಮೆ ಮೊತ್ತ ಅನ್ನೋ ಆಕ್ರೋಶವೂ ಕೇಳಿಬಂದಿತ್ತು. ಈ ಬೆನ್ನಲ್ಲೇ 25 ಲಕ್ಷ ರೂಪಾಯಿಗೆ ಪರಿಹಾರ ಏರಿಕೆ ಮಾಡಿ ಘೋಷಣೆ ಮಾಡಲಾಗಿದೆ. ಸರ್ಕಾರ ಇದೀಗ ಘೋಷಿಸಿದ ಪರಿಹಾರ ಹಣವೂ ಸೇರಿದಂತೆ 40 ಲಕ್ಷ ಮೃತರ ಕುಟುಂಬಕ್ಕೆ ಸಿಗಲಿದೆ.

ಮೃತರ ಕುಟುಂಬಕ್ಕೆ ಪರಿಹಾರ

ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪರವಾಗಿ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ. ಇನ್ನು, ಕರ್ನಾಟಕ ಕ್ರಿಕೆಟ್ ಸಂಸ್ಥೆ ಕೆಸಿಎ ಕೂಡ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ಎಲ್ಲವೂ ಸೇರಿ ಮೃತರ ಕುಟುಂಬಕ್ಕೆ ಒಟ್ಟು 40 ಲಕ್ಷ ಪರಿಹಾರ ಸಿಕ್ಕಂತಾಗಲಿದೆ.

ಇದನ್ನೂ ಓದಿ: ಒಂದೇ ತಟ್ಟೇಲಿ ಅನ್ನ ತಿಂದು ಮುಹೂರ್ತ ಇಟ್ಟ ಸ್ನೇಹಿತ.. ಒಂದೇ ಹುಡುಗಿ ಹಿಂದೆ ಹೋದ ಇಬ್ಬರು ಸ್ನೇಹಿತರು..

ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ಸಜ್ಜು

ತಮ್ಮವರನ್ನ ಕಳೆದುಕೊಂಡವರ ನೋವಲ್ಲಿ ಕುಟುಂಬಸ್ಥರಿದ್ರೆ, ಅತ್ತ ಸಿಐಡಿ ತಂಡ ಅಖಾಡಕ್ಕಿಳಿದಿದೆ. ಈ ಪ್ರಕರಣದಲ್ಲಿ ಯಾರದ್ದು ತಪ್ಪು ಅನ್ನೋದನ್ನ ಪತ್ತೆಹಚ್ಚಲು ಮುಂದಾಗಿದೆ. ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ ಸ್ಟೇಡಿಯಂಗೆ ತೆರಳಿ ಕಾಲ್ತುಳಿತ ಸಂಭವಿಸಿದ ಸ್ಥಳ ಪರಿಶೀಲನೆ ನಡೆಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಇದೇ ವೇಳೆ ಮತ್ತೊಂದು ತಂಡದ ಅಧಿಕಾರಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಕಚೇರಿಗೆ ತೆರಳಿದ್ರು. ಅಲ್ಲಿ ಸಿಸಿಟಿವಿ ಪರಿಶೀಲನೆ ಹಾಗೂ ಇನ್ನಿತರ ಮಾಹಿತಿಯನ್ನು ಕಲೆ ಹಾಕಿದೆ. ಕೇಸ್ ಫೈಲ್ ಸಮೇತ ಬಂದ ಅಧಿಕಾರಿಗಳು ನೇರವಾಗಿ ಕಚೇರಿ ಒಳಗೆ ತೆರಳಿದ್ರು. ಇತ್ತ ನಾಳೆ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಲಾಗಿದೆ.

ಆರೋಪಿಗಳು ಕಸ್ಟಡಿಗೆ ಸಿಐಡಿ ಸಜ್ಜು!

ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು, ಬಂಧಿತರಾದ ಆರೋಪಿಗಳನ್ನ ನಾಳೆ ವಿಚಾರಣೆ ನಡೆಸಲು ಕಸ್ಟಡಿಗೆ ಪಡೆಯಲಿದ್ದಾರೆ. ಇಂದು ಭಾನುವಾರವಾದ ಹಿನ್ನೆಲೆ ಸೋಮವಾರ ಅಂದ್ರೆ ನಾಳೆ ವಶಕ್ಕೆ ಪಡೆಯಲಿದ್ದಾರೆ. ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ 4 ದಿನ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಕೇಸ್ ದಾಖಲೆಗಳನ್ನ ಸಿಐಡಿಗೆ ನೀಡಿದ್ದಾರೆ. ಸದ್ಯ ಆರೋಪಿಗಳ ಹೇಳಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿರುವ ಡಿಜಿಟಲ್ ಸಾಕ್ಷಿಗಳ ತನಿಖೆಗೆ ಮುಂದಾಗಿದೆ.

ಒಟ್ನಲ್ಲಿ ಒಂದಡೆ ತನಿಖೆ ಬಿರುಸಾಗಿ ನಡೀತಿದ್ರೆ, ಇನ್ನೊಂದೆಡೆ ಮೃತರ ಕುಟುಂಬಸ್ಥರಿಗೆ ಪರಿಹಾರದ ಹಣ ಏರಿಕೆ ಮಾಡಲಾಗಿದೆ. ನಮ್ಮ ದುಡ್ಡು ಬೇಡ.. ಮಕ್ಕಳು ಬೇಕು ಅಂತಿರೋ ಪೋಷಕರ ಆ ಮಾತಿಗೆ ಉತ್ತರ ಕೊಡೋದ್ಯಾರು?

ಇದನ್ನೂ ಓದಿ: ಕಡಿಮೆ ಅವಧಿಯಲ್ಲಿ 5 ಸರ್ಟಿಫೈಡ್​ ಕೋರ್ಸ್.. ಕೈ ತುಂಬಾ ಸಂಬಳ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment