3 ತಿಂಗಳ ಗ್ಯಾಪಲ್ಲಿ 3 ಪಟ್ಟು ಹೆಚ್ಚಾಯ್ತು ವಾಟರ್​ ಬಿಲ್.. ಬೆಂಗಳೂರಿನ ಈ ಏರಿಯಾದ ಜನ ಕಂಗಾಲು..!

author-image
Ganesh
Updated On
3 ತಿಂಗಳ ಗ್ಯಾಪಲ್ಲಿ 3 ಪಟ್ಟು ಹೆಚ್ಚಾಯ್ತು ವಾಟರ್​ ಬಿಲ್.. ಬೆಂಗಳೂರಿನ ಈ ಏರಿಯಾದ ಜನ ಕಂಗಾಲು..!
Advertisment
  • ಯಾರೂ ಕೇಳ್ತಿಲ್ಲ ನಮ್ ಪ್ರಾಬ್ಲಂನಾ ಅಂತಿದ್ದಾರೆ ಜನ
  • ಈ ವರ್ಷದ ಜನವರಿಯಲ್ಲಿ ಒಂದು ಮನೆಗೆ ₹845 ರೂ ಬಿಲ್
  • ಏಪ್ರಿಲ್​ನಲ್ಲಿ ₹1,795 ರೂ., ಮೇ ತಿಂಗಳಲ್ಲಿ ₹2,295 ರೂ ಬಿಲ್

ಬೆಂಗಳೂರಲ್ಲಿ ಬದುಕು ಕ್ಲಾಸ್ಟ್​ಲೀ ಆಗ್ತಿದೆ. ಊಟ, ತಿಂಡಿ, ಮನೆ ಬಾಡಿಗೆಗೆ ದುಡಿಯೋ ದುಡ್ಡೆಲ್ಲೇ ಖಾಲಿ ಆಗ್ಬಿಡುತ್ತೆ. ಮಾಗಡಿ ಪೊಲೀಸ್ ಕ್ವಾಟ್ರಸ್ ನಿವಾಸಿಗಳ ಕಥೆ ಕೇಳ್ಬಿಟ್ರೆ, ನಿಮ್ ತಲೆ ಗಿರ್ ಅಂದ್ಬಿಡುತ್ತೆ. ಯಾಕಂದ್ರೆ, ಅವ್ರ ದುಡಿಯೋ ದುಡ್ಡೆಲ್ಲಾ ಕುಡಿಯೋ ನೀರಿಗೆ ಖರ್ಚಾಗ್ತಿದ್ಯಂತೆ..

3 ತಿಂಗಳ ಗ್ಯಾಪಲ್ಲಿ 3 ಪಟ್ಟು ಹೆಚ್ಚಾಯ್ತು ವಾಟರ್​ ಬಿಲ್..!

ಕುಡಿಯೋ ನೀರನ್ನೂ ಹನಿಗಳ ಲೆಕ್ಕದಲ್ಲಿ ಖರ್ಚ್​ ಮಾಡೋ ಸ್ಥಿತಿ ಬಂದಿದೆ ಇವ್ರಿಗೆ. ಈ ಕ್ವಾಟ್ರಸ್​ನಲ್ಲಿ ಏನಿಲ್ಲ ಅಂದ್ರೂ 398 ಮನೆಗಳಿವೆ. ಇಷ್ಟೂ ಮನೆಗಳಿಗೆ ಇರೋ ವಾಟರ್​ ಮೀಟರ್​ಗಳು ಎಷ್ಟ್​ ಗೊತ್ತಾ? ಎರಡು.. ಕೇವಲ ಎರಡೇ ಎರಡು ಮಾತ್ರ. ಬರೋ ವಾಟರ್​ ಬಿಲ್​ನಲ್ಲೇ ಅಷ್ಟು ಮನೆಗಳು ಡಿವೈಡ್ ಮಾಡ್ಕೊಂಡು ಬಿಲ್ ಕಟ್ಬೇಕು.

ಇದನ್ನೂ ಓದಿ: ಅಂದು 600 ರೂ ಸಂಬಳ, ಇಂದು ದಿನಕ್ಕೆ 25 ಸಾವಿರ.. ಸಿನಿಮಾ ಟು ಕ್ರಿಕೆಟ್​ ‘ಚಕ್ರವರ್ತಿ’ ಕಹಾನಿ..!

publive-image

‘ಜಲ’ ಗಂಡಾಂತರದ ಕಥೆ!

  • ಈ ವರ್ಷದ ಜನವರಿಯಲ್ಲಿ ಒಂದು ಮನೆಗೆ ₹845 ರೂಪಾಯಿ
  • ಫೆಬ್ರವರಿಯಲ್ಲಿ ₹850 ಇದ್ರೆ, ಮಾರ್ಚ್ ತಿಂಗಳಲ್ಲಿ ₹1060 ರೂ.
  • ಇನ್ನ, ಏಪ್ರಿಲ್​ನಲ್ಲಿ ₹1,795 ರೂ., ಮೇ ತಿಂಗಳಲ್ಲಿ ₹2,295 ರೂ
  • 3 ತಿಂಗಳ ಅಂತರದಲ್ಲೇ ಮೂರು ಪಟ್ಟು ನೀರಿನ ದರ ಹೆಚ್ಚಳ
  • publive-image

ಎರಡೂ ಸಾವಿರಕ್ಕೆ ಒಂದ್ ಮನೆಗೆ ದಿನಸಿ ಐಟಂಗಳೇ ಬರುತ್ವೆ.. ವಾಟರ್​ ಬಿಲ್ ಕಟ್ಟಿ ಅಂದ್ರೆ, ಜೀವನ ಬಾರೀ ಕಷ್ಟ ಅಂತ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಸಮಸ್ಯೆಗಳು ಸರಿ ಆಗ್ಬೇಕಂದ್ರೆ ಕ್ರಾಟ್ರಸ್​​ಗೆ ಹೆಚ್ಚು ಮೀಟರ್​ಗಳನ್ನ ಅಳವಡಿಕೆ ಮಾಡ್ಬೇಕಿದೆ. ಏನೇ ಹೇಳಿ, ಜನರ ಕಷ್ಟಗಳನ್ನ ಆಲಿಸೋ ಪೊಲೀಸರಿರೋ ಜಾಗದಲ್ಲೇ ಇಂತಹ ಸಮಸ್ಯೆ ಆಗ್ಬಿಟ್ರೆ ಹೇಗೆ? ಆದಷ್ಟು ಬೇಗ ಇದಕ್ಕೊಂದು ಪರಿಹಾರ ಸಿಕ್ಕಿದ್ರೆ, ನೀರಿಗಾಗಿ ಜನ್ರ ಕಣ್ಣಲ್ಲಿ ನೀರು ಬರೋದು ತಪ್ಪುತ್ತೆ.

ಇದನ್ನೂ ಓದಿ: 2ನೇ ಟೆಸ್ಟ್​ನಲ್ಲಿ 4 ಬದಲಾವಣೆ ಫಿಕ್ಸ್..! ಯಾರಿಕೆ ಕೊಕ್? ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment