/newsfirstlive-kannada/media/post_attachments/wp-content/uploads/2024/04/WEST_BENGAL_RAIN.jpg)
ಬೆಂಗಳೂರು: ಕಳೆದೊಂದು ತಿಂಗಳಿನಿಂದ ಬಿಸಿಲಿನ ತಾಪಮಾನಕ್ಕೆ ಕಂಗೆಟ್ಟಿದ್ದ ಬೆಂಗಳೂರಿಗೆ ಗುಡ್ನ್ಯೂಸ್ ಇದೆ. ಇಂದು ರಾತ್ರಿಯೇ ಬೆಂಗಳೂರಲ್ಲಿ ಭಾರೀ ಮಳೆ ಆಗೋ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಈಗ ಮಳೆಯದ್ದೇ ಸುದ್ದಿ. ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆಯಂತೆ ಇಂದು ರಾತ್ರಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ. ಇದು ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರಲಿದೆ. ಇದಕ್ಕೆ ಕಾರಣ ಮಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುವುದು. ಇದರಿಂದ ಬೈಕ್ನಲ್ಲಿ ಓಡಾಡೋರು ನೆನೆಯುವುದು.
ಸಾರ್ವಜನಿಕರು ಗಮನಿಸಬೇಕಾದ ಅಂಶಗಳು
ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ರಸ್ತೆಗಳಲ್ಲಿ ಭಾರೀ ಗುಂಡಿಗಳು ಬಿದ್ದಿರೋ ಕಾರಣ ಬೈಕ್ನಲ್ಲಿ ಓಡಾಡೋರು ನೋಡಿಕೊಂಡು ಓಡಿಸಬೇಕು. ಸಾಧ್ಯವಾದ್ರೆ ಆಟೋ ಅಥವಾ ಕಾರ್, ಬಸ್ನಲ್ಲಿ ಹೋಗುವುದು ಒಳಿತು. ಬೈಕ್ನಲ್ಲಿ ಹೋಗುವಾಗ ಮಳೆಗೆ ಸಿಕ್ಕಿಬಿದ್ದು, ಆರೋಗ್ಯ ಹಾಳು ಮಾಡಿಕೊಳ್ಳಬಾರದು. ಜತೆಗೆ ಯಾರೇ ಆಗಲಿ ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯ ಛತ್ರಿ ಕ್ಯಾರಿ ಮಾಡಲೇಬೇಕು, ಮಳೆ ಇರೋ ಕಾರಣ ರೈನ್ ಕೋಟ್ ಧರಿಸಬೇಕು. ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳನ್ನು ಆಚೆ ಬಿಡಬಾರದು.
ಇದನ್ನೂ ಓದಿ: ಇಂದು ರಾತ್ರಿ ಬೆಂಗಳೂರಲ್ಲಿ ಭರ್ಜರಿ ಮಳೆ; ಈ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ