/newsfirstlive-kannada/media/post_attachments/wp-content/uploads/2024/06/car-1.jpg)
ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಭಾರೀ ಮಳೆಯಾಗಿದೆ. ನೈಋತ್ಯ ಮಾನ್ಸೂನ್ ಎಫೆಕ್ಟ್​ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದಿದೆ. ಕಳೆದ 1 ಗಂಟೆಗೂ ಅಧಿಕ ಕಾಲ ವರುಣ ಆರ್ಭಟಿಸಿದ್ದಾನೆ.
ಬೆಂಗಳೂರು ನಗರದಲ್ಲಿ 69 ಮೀ ಮೀ ಮಳೆಯಾಗಿದ್ದು, ಮಳೆಯಿಂದಾಗಿ ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. ಇನ್ನು ರಾಜ್ಯ ಹವಾಮಾನ ಇಲಾಖೆ ಮಾಹಿತಿಯಂತೆ ಬೆಂಗಳೂರಿನ ವಿವಿಧೆಡೆ ಎಷ್ಟೆಷ್ಟು ಮಳೆಯಾಗಿದೆ ಎಂದು ಗಮನಿಸುವುದಾದರೆ..
- ಹೆಚ್‌ಎಎಲ್ ಏರ್ಪೋರ್ಟ್ ನಲ್ಲಿ 9.2 ಮೀ ಮೀ ಮಳೆ ದಾಖಲು
- ಎಲೆಕ್ಟ್ರಾನಿಕ್ ಸಿಟಿ - 29 ಮೀ ಮೀ ಮಳೆ
- ಮಾದಾವರ - 4.5 ಮೀ ಮೀ ಮಳೆ
- ಸೋಂಪುರ (ಬೆಂ. ನಗರ) - 5.5 ಮೀ ಮೀ
ಮಳೆಯಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ರಸ್ತೆಯೆಲ್ಲಾ ನದಿಯಂತಾಗಿದ್ದು, ಮರಗಳು ಧರೆಗುರುಳಿವೆ. ಸಿಲಿಕಾನ್​ ಸಿಟಿಯಲ್ಲಿ ಸುಮಾರು 118 ಮರಗಳು ನೆಲಕ್ಕಪ್ಪಳಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us