/newsfirstlive-kannada/media/post_attachments/wp-content/uploads/2024/04/KARAGA.jpg)
ಸಿಲಿಕಾನ್ ಸಿಟಿಯಲ್ಲಿ ಐತಿಹಾಸಿಕ ಕರಗ ಮಹೋತ್ಸವ ಶುರುವಾಗಿದೆ. ದ್ರೌಪದಿ ದೇವಿ ಆರಾಧನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಶುಭ ಸೋಮವಾರದಂದು ವಿಶ್ವವಿಖ್ಯಾತ ಬೆಂಗಳೂರು ಕರಗ ಮೇಳೈಸಿದೆ. ಸತತವಾಗಿ ಇನ್ನೂ 10 ದಿನಗಳ ಕಾಲ ಈ ಉತ್ಸವ ನಡೆಯಲಿದೆ.
ಬೆಂಗಳೂರು ಕರಗ.. ಸಿಲಿಕಾನ್ ಸಿಟಿಯ ಇತಿಹಾಸದಲ್ಲಿ ಪ್ರಸಿದ್ಧಿ ಹೊಂದಿರುವ ಉತ್ಸವ. ದ್ರೌಪದೀದೇವಿ ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾ ರಥೋತ್ಸವವಾಗಿದ್ದು, ವಹ್ನಿಕುಲ ಕ್ಷತ್ರಿಯ ಜನಾಂಗದವರ ವಿಶೇಷ ವಾರ್ಷಿಕ ಉತ್ಸವ. ಸದ್ಯ ಇದರ ಸಂಭ್ರಮ ಶುರುವಾಗಿದೆ.
/newsfirstlive-kannada/media/post_attachments/wp-content/uploads/2024/04/KARAGA_1.jpg)
ಏಪ್ರಿಲ್ 23ಕ್ಕೆ ದ್ರೌಪದಿ ದೇವಿಯ ಹೂವಿನ ಕರಗ ಶಕ್ತ್ಯೋತ್ಸವ
ನಿನ್ನೆ ರಾತ್ರಿ ಬೆಂಗಳೂರು ನಗರದ ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಕರಗ ಉತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಮೊದಲ ದಿನ ನಿನ್ನೆ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಸತತವಾಗಿ 11 ದಿನಗಳ ಕಾಲ ಈ ಸಂಭ್ರಮದ ಕರಗ ಉತ್ಸವ ನಡೆಯಲಿದೆ. ಏಪ್ರಿಲ್23ರ ಚೈತ್ರ ಮಾಸದ ಪೂರ್ಣಿಮೆ ದಿನದಂದು ಮಹತ್ವದ ದ್ರೌಪದಿ ದೇವಿಯ ಹೂವಿನ ಕರಗ ಶಕ್ತ್ಯೋತ್ಸವ ಜರುಗಲಿದೆ. 9 ದಿನಗಳವರೆಗೆ ನಿತ್ಯ ಅಮ್ಮನಿಗೆ ವಿವಿಧ ಬಗೆಯ ಪೂಜೆ ನೇರವೇರಲಿದೆ. ಏಪ್ರೀಲ್ 23ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ. ಈ ವರ್ಷ ವೀರಕುಮಾರರಿಗೆ ಕೆಂಪು ವಸ್ತ್ರ, ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ತೀರ್ಮಾನಿಸಲಾಗಿದೆ.
ಐತಿಹಾಸಿಕ ಕರಗೋತ್ಸವ!
ಏ.15ರಿಂದ 25ರ ತನಕ ವಿಶ್ವ ವಿಖ್ಯಾತ ಕರಗ ಶಕ್ತ್ಯೋತ್ಸವ ನಡೆಯಲಿದೆ. ನಿನ್ನೆ ರಾತ್ರಿಯಿಂದ ಶುರುವಾದ ಕರಗ ಮಹೋತ್ಸವ 10 ದಿನಗಳ ಕಾಲ ನಡೆಯಲಿದೆ. ಇಂದಿನಿಂದ ಏ.19ರ ತನಕ ಪ್ರತಿ ದಿನ ರಾತ್ರಿ 7.30ಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಏ.20ರ ದ್ವಾದಶಿಯಂದು ರಾತ್ರಿ 3 ಗಂಟೆಗೆ ಆರತಿ ದೀಪಗಳು ನೆರವೇರಲಿವೆ. ಏ.21ರಂದು ರಾತ್ರಿ 3ಕ್ಕೆ ಸಂಪಂಗಿಕೆರೆ ಅಂಗಳದ ಶಕ್ತಿಪೀಠದಲ್ಲಿ ಹಸೀ ಕರಗ ನಡೆಯಲಿದೆ. ಏ.22 ರಂದು ಪೊಂಗಲು ಸೇವೆ ನಡೆಯಲಿದೆ. ಏ.23 ರಂದು ರಾತ್ರಿ 12.30ಕ್ಕೆ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಏ.24 ರಂದು ರಾತ್ರಿ 2 ಗಂಟೆಗೆ ಪುರಾಣ ಪ್ರವಚನ, ಮುಂಜಾನೆ 4 ಗಂಟೆಗೆ ದೇವಸ್ಥಾನದಲ್ಲಿ ಗಾವು ಶಾಂತಿ ನಡೆಯಲಿದೆ. ಏ.25ರಂದು ಸಂಜೆ 4ಕ್ಕೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜಾವರೋಹಣ ನೆರವೇರಲಿದೆ.
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
/newsfirstlive-kannada/media/post_attachments/wp-content/uploads/2024/04/KARAGA_2.jpg)
ಇದನ್ನೂ ಓದಿ:ಬಿಸಿಲಿನಲ್ಲಿ ಕಾಡುತ್ತಿವೆ ಸಾಲು ಸಾಲು ರೋಗಗಳು; ಬಿಬಿಎಂಪಿ ಆರೋಗ್ಯ ಇಲಾಖೆಯಿಂದ ಹೊಸ ಪ್ಲಾನ್​
ಇನ್ನು ಕರಗ ಉತ್ಸವ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಡೆದುಕೊಂಡು ಬರ್ತಿದೆ. ಈ ಬಾರಿ ಜ್ಞಾನೇಂದ್ರ ಅವರು 13ನೇ ಬಾರಿ ಕರಗ ಹೊರುತ್ತಿದ್ದಾರೆ. ದ್ರೌಪದಿಯಮ್ಮನ್ನ ಕರಗ ಉತ್ಸವ ಕಣ್ತುಂಬಿಕೊಳ್ಳಲು ಗಣ್ಯರು ಸೇರಿದಂತೆ ಮಠಾಧೀಶರು ಆಗಮಿಸುವ ಸಾಧ್ಯತೆ ಇದೆ. ಜೊತೆಗೆ ರಾಜ್ಯ ಸೇರಿ ವಿದೇಶದಿಂದಲೂ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ.
ಬೆಂಗಳೂರು ಕರಗಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮುಂದಿನ ಹಂತಗಳಲ್ಲಿ ನಡೆಯುವ ಆಚರಣೆಗಳಿಗಾಗಿಯೂ ಸಕಲ ತಯಾರಿ ನಡೆಸಲಾಗಿದೆ. ಇನ್ನು ಕರಗ ಮಹೋತ್ಸವ ಹಿನ್ನಲೆ 250 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ. ಈ ಕರಗೋತ್ಸವ ಇನ್ನೂ 10 ದಿನಗಳ ಕಾಲ ಅದ್ಧೂರಿಯಾಗಿ ಸಂಭ್ರಮದಿಂದ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us