/newsfirstlive-kannada/media/post_attachments/wp-content/uploads/2024/09/Auto-Driver.jpg)
ಸ್ಟಾರ್ಟ್​ಅಪ್​ ಹಬ್​ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು ಸದಾ ಜನ ಜಂಗುಳಿಯಿಂದ ತುಂಬಿರುತ್ತದೆ. ಸದಾ ಟ್ರಾಫಿಕ್​ ಕಿರಿ ಕಿರಿಯ ನಡುವೆ ನಿತ್ಯ ದುಡಿಯುತ್ತಾ ಜೀವನ ನಡೆಸಲು ಎಲ್ಲರೂ ಹೋರಾಡುತ್ತಿರುತ್ತಾರೆ. ಅದರಲ್ಲೂ ಆಟೋ ಡ್ರೈವರ್​ಗಳು ಹಗಲು-ರಾತ್ರಿ ಎನ್ನದೇ ದುಡಿಯುತ್ತಾರೆ. ಆದರೆ ಇಂತಹ ಕಿರಿ ಕಿರಿ ಟ್ರಾಫಿಕ್​ ನಡುವೆ ದಿನದ 10-12 ಗಂಟೆ ಕುಳಿತುಕೊಂಡು ಆಟೋ ಓಡಿಸಿದರೆ ಕತೆ ಮುಗಿಯಿತು. ಆದರೆ ಇಂತಹ ಸಮಸ್ಯೆಯಿಂದ ಎದುರಾಗುವ ಆರೋಗ್ಯ ಸಮಸ್ಯೆಗೆ ಮುಕ್ತಿ ನೀಡಲು ಇಲ್ಲೊಬ್ಬ ಆಟೋ ಡ್ರೈವರ್​ ಸಖತ್ತಾಗಿರೋ ಟ್ರಿಕ್​ ಬಳಸಿದ್ದಾರೆ. ಅದೇನು ಗೊತ್ತಾ?.
ದಿನದ 9 ಗಂಟೆ ಕೆಲಸ ಮಾಡಿ ಬಳಲಿ ಬೆಂಡಾಗುವರೇ ಜಾಸ್ತಿ. ಇನ್ನು ಆಟೋದವರು ಸದಾ ಟ್ರಾಫಿಕ್​ನಲ್ಲಿ ಓಡಾಡುತ್ತಾ ಸಂಪಾದಿಸಬೇಕು. ಆದರೆ ಇಲ್ಲೊಬ್ಬ ಡ್ರೈವರ್​ ದುಡಿದು ತಿನ್ನುವ ಅನಿವಾರ್ಯದ ಬದುಕಿನಲ್ಲಿ ಬೆನ್ನು ಹುರಿ ಸಮಸ್ಯೆಗಾಗಿ ಆಟೋದಲ್ಲಿ ಆಫೀಸು ಚೇರ್ ಬಳಸಿದ್ದಾರೆ. ಅದರಲ್ಲಿ ಕುಳಿತುಕೊಂಡು ಪ್ರಯಾಣಿಕರನ್ನು ಪಿಕಪ್​-ಡ್ರಾಪ್​ ಮಾಡುತ್ತಿದ್ದಾರೆ. ಸದ್ಯ ಆಟೋ ಡ್ರೈವರ್​ನ ಸಖತ್​ ಟ್ರಿಕ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಸಾಮಾನ್ಯವಾಗಿ ಬೆನ್ನು ಹುರಿ ನೋವನ್ನು ತಪ್ಪಿಸಲು ಕಚೇರಿಗಳಲ್ಲಿ ಇಂತಹ ಚೇರ್​ ಬಳಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಆಟೋ ಡ್ರೈವರ್​ ಕೂಡ ದಿನನಿತ್ಯದ ಟ್ರಾಫಿಕ್​ ಬದುಕಿನಲ್ಲಿ ಸಮಸ್ಯೆಯಗಬಾರದೆಂದು ಆಟೋದಲ್ಲಿ ಆಫೀಸು ಚೇರ್​ ಜೋಡಿಸಿದ್ದಾರೆ.
auto driver’s seat had an office chair fixed for extra comfort, man i love bangalore @peakbengaluru ?? pic.twitter.com/D1LjGZOuZl
— Shivani Matlapudi (@shivaniiiiiii_)
auto driver’s seat had an office chair fixed for extra comfort, man i love bangalore @peakbengaluru 🤌🏼 pic.twitter.com/D1LjGZOuZl
— Shivani (@shivanimatla) September 23, 2024
">September 23, 2024
ಆಟೋ ಪ್ರಯಾಣಿಕರೊಬ್ಬರು ಡ್ರೈವರ್​ನ ಸಖತ್​ ಐಡಿಯಾಗೆ ಮಾರು ಹೋಗಿದ್ದು, ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಆಟೋ ಡ್ರೈವರ್​ನ ಹೆಚ್ಚುರಿ ಸೌಕರ್ಯಕ್ಕಾಗಿ ಆಫೀಸು ಚೇರ್​​ ಜೋಡಿಸಿದ್ದಾರೆ. ಮ್ಯಾನ್​​ ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ’ ​ಎಂದು ಬರೆದುಕೊಂಡಿದ್ದಾರೆ.
ಸೆಪ್ಟೆಂಬರ್​​ 23ರಂದು ಎಕ್ಸ್​ ಬಳಕೆದಾರರು ಪೋಸ್ಟ್​ ಹಂಚಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 27 ಸಾವಿರಕ್ಕೂ ಅನೇಕರು ವೀಕ್ಷಿಸಿದ್ದಾರೆ. ಅದರಲ್ಲಿ ಹಲವರು ಕಾಮೆಂಟ್​ ಕೂಡ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us