/newsfirstlive-kannada/media/post_attachments/wp-content/uploads/2025/04/Bangalore-Avadhuta-Gurumurthy-Swamiji-4.jpg)
ಬೆಂಗಳೂರು: ರಾಜಕೀಯ ಗಣ್ಯಾತಿಗಣ್ಯರ ಅಚ್ಚುಮೆಚ್ಚಿನ ಸ್ವಾಮೀಜಿ ಅವಧೂತ ಗುರುಮೂರ್ತಿ ವಿರುದ್ಧ FIR ದಾಖಲಾಗಿದೆ. ಬಿಡಿಎ ಇಂಜಿನಿಯರ್ಗಳಿಗೆ ಲಕ್ಷ, ಲಕ್ಷ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡಿದ ಆರೋಪದಲ್ಲಿ ದೂರು ದಾಖಲಾಗುತ್ತಿದ್ದಂತೆ ಗುರುಮೂರ್ತಿ ಪರಾರಿಯಾಗಿದ್ದಾರೆ.
ಸ್ವಾಮೀಜಿ ವಿರುದ್ಧ FIR!
ಅವಧೂತ ಗುರುಮೂರ್ತಿ ಶ್ರೀ ಹಾಗೂ ಶರತ್ ಬಾಬು ಅವರು ಬಿಡಿಎ AE, AEE, EEಗಳ ಬಳಿ ಲಕ್ಷ ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ ಆರೋಪ ಕೇಳಿ ಬಂದಿದೆ. ಕೆಂಪೇಗೌಡ ಲೇಔಟ್ ಇಂಜಿನಿಯರ್ಗಳ ಬಳಿ ಧಮ್ಕಿ ಹಾಕಿ ಹಣ ವಸೂಲಿ ಮಾಡಿದ ಆರೋಪದಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: City Of Knives: ಇದು ದೇಶದ ಚಾಕು ನಗರಿ! ಯಾವ ರಾಜ್ಯದಲ್ಲಿದೆ? ಈ ಸಿಟಿಗೆ ಈ ಹೆಸರು ಬರಲು ಕಾರಣವೇನು?
ಆರೋಪಿಗಳು ಎಂಜಿನಿಯರ್ಗಳಿಗೆ ಗುತ್ತಿಗೆದಾರರಿಂದ ಹಣ ಪಡೆದು ಕಳಪೆ ಕಾಮಗಾರಿ ಮಾಡಿದ್ದೀರಾ. ನಾವು ಕೇಳಿದಷ್ಟು ಹಣ ಕೊಡಲಿಲ್ಲ ಅಂದ್ರೆ ಲೋಕಾಯುಕ್ತಕ್ಕೆ ದೂರು ನೀಡುವ ಬೆದರಿಕೆ ಹಾಕುತ್ತಿದ್ದರಂತೆ.
ಇತ್ತೀಚೆಗೆ ಆರೋಪಿಗಳಾದ ಗುರುಮೂರ್ತಿ ಹಾಗೂ ಶರತ್ ಬಾಬು ಎಂಬುವವರು 27 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ. ಹಣದ ಜೊತೆಗೆ ರಾಮನಗರದಲ್ಲಿ ಒಂದು ಮನೆ ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗೆ ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿಗಳ ಮೇಲೆ ಇಂಜಿನಿಯರ್ಗಳು ದೂರು ನೀಡಿದ್ದಾರೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಗುರುಮೂರ್ತಿ ಹಾಗೂ ಶರತ್ ಬಾಬು ಮೇಲೆ ಬಿಡಿಎ ಎಂಜಿನಿಯರ್ ಅಶೋಕ್ ಎಂಬುವವರು FIR ದಾಖಲಿಸಿದ್ದಾರೆ. ಎಫ್ಐಆರ್ ಬಳಿಕ ಅವಧೂತ ಗುರುಮೂರ್ತಿ ಶ್ರೀ ಪರಾರಿ ಆಗಿದ್ದಾರೆ. ಕೆಂಗೇರಿ ಠಾಣೆ ಪೊಲೀಸರು ನಾಪತ್ತೆಯಾಗಿರುವ ಅವಧೂತ ಗುರುಮೂರ್ತಿ ಶ್ರೀಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ