/newsfirstlive-kannada/media/post_attachments/wp-content/uploads/2025/06/thug-life-Kamal-Hassan-Karave.jpg)
ಜೂನ್ 5 ಅಂದ್ರೆ ಮುಂದಿನ ಗುರುವಾರ ಬೆಂಗಳೂರು ಬಂದ್ ಆಗುತ್ತಾ? ಕನ್ನಡ ಪರ ಸಂಘಟನೆಗಳು ತಮಿಳು ನಟ ಕಮಲ್ ಹಾಸನ್ ವಿರುದ್ಧ ಉಗ್ರ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಜೂನ್ 5ಕ್ಕೆ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ರಾಜ್ಯದಲ್ಲಿ ರಿಲೀಸ್ ಆದ್ರೆ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ.
ಇದೇ ಜೂನ್ 5ಕ್ಕೆ ನಟ ಕಮಲ್ ಹಾಸನ್ ಅಭಿನಯದ ಸಿನಿಮಾ ಬೆಂಗಳೂರಲ್ಲಿ ಬಿಡುಗಡೆ ಆದ್ರೆ ಬಂದ್ ಫಿಕ್ಸ್ ಎಂದು ಕನ್ನಡ ಪರ ಸಂಘಟನೆಗಳು ಹೇಳುತ್ತಿವೆ. ಆದರೆ ಕನ್ನಡ ಭಾಷೆಗೆ ಅವಮಾನ ಮಾಡಿರುವ ಕಮಲ್ ಹಾಸನ್ ಅವರು ಕ್ಷಮೆ ಕೇಳಲು ಗಡುವು ನೀಡಲಾಗಿದೆ. ನಾಳೆ ಅಂದ್ರೆ ಜೂನ್ 2ರ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಹೋರಾಟ ಕೈ ಬಿಡಲಾಗುತ್ತಿದೆ.
ಇದನ್ನೂ ಓದಿ: ಕ್ಷಮೆ ಕೇಳಲ್ಲ, ಕ್ಷಮೆ ಕೇಳಲ್ಲ.. ಮತ್ತೊಮ್ಮೆ ನಿರಾಕರಿಸಿದ ನಟ ಕಮಲ್ ಹಾಸನ್; ಈಗ ಏನಂದ್ರು?
ಕರವೇ ಪ್ರವೀಣ್ ಶೆಟ್ಟಿ ಬಣದ ಕನ್ನಡ ಪರ ಸಂಘಟನೆಗಳು ಈಗಾಗಲೇ ಸಭೆ ಮೇಲೆ ಸಭೆ ನಡೆಸುತ್ತಿವೆ. ಕಮಲ್ ಹಾಸನ್ ಒಂದೊಮ್ಮೆ ಕ್ಷಮೆ ಕೇಳದೇ ಸಿನಿಮಾ ರಿಲೀಸ್ ಆದ್ರೆ ಬಂದ್ ಖಂಡಿತವಾಗಿ ಆಗುತ್ತೆ. ನಾಳೆ ಅಥವಾ ಇನ್ನು 2 ದಿನದಲ್ಲಿ ಬೆಂಗಳೂರು ಬಂದ್ ಬಗ್ಗೆ ಅಂತಿಮ ನಿರ್ಧಾರವನ್ನು ಕನ್ನಡ ಪರ ಸಂಘಟನೆಗಳು ಪ್ರಕಟಿಸುವ ಸಾಧ್ಯತೆ ಇದೆ.
ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ!
ಬೆಂಗಳೂರಿನ ವಿಕ್ಟರಿ ಸಿನಿಮಾಸ್ ಥಿಯೇಟರ್‌ನಲ್ಲಿ ಥಗ್ ಲೈಫ್ ಸಿನಿಮಾ ಪ್ರಸಾರ ಅಂತ ಟ್ವೀಟ್ ಮಾಡಿದ್ದು ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಮಾತನಾಡಿದ ಕರವೇ ನಾಯಕ ಪ್ರವೀಣ್ ಶೆಟ್ಟಿ ಅವರು ಈ ಥಿಯೇಟರ್ ಮಾಲೀಕ ಕೂಡ ವಾಣಿಜ್ಯ ಮಂಡಳಿ ಸದಸ್ಯ ಆಗಿರುತ್ತಾರೆ. ನಾವೆಲ್ಲರೂ ತಮಿಳಿನಿಂದ ಕನ್ನಡ ಹುಟ್ಟಿತು ಅನ್ನೋ ಮಾತು ಸಹಿಸಲ್ಲ. ಕನ್ನಡ ಪರ ಸಂಘಟನೆಗಳು ಒಕ್ಕೊರಲ ತೀರ್ಮಾನ ಮಾಡಿದ್ದೀವಿ. ನಾವೆಲ್ಲಾ ಸೇರಿ ಬೆಂಗಳೂರು ಬಂದ್ ಮಾಡೋ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೇವೆ. ಕಮಲ್ ಹಾಸನ್ ಅವರು ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.
ಕನ್ನಡ ಪರ ಸಂಘಟನೆಗಳು ವಿಕ್ಟರಿ ಸಿನಿಮಾಸ್ ಬಿಡುಗಡೆಯನ್ನು ವಿರೋಧಿಸಿದ ಬಳಿಕ ಮತ್ತೆ ವಿಕ್ಟರಿ ಸಿನಿಮಾಸ್‌ನಲ್ಲಿ ಥಗ್‌ಲೈಫ್ ಹಾಕಲ್ಲ ಅನ್ನೋ ಟ್ವೀಟ್ ಮಾಡಿದ್ದಾರೆ. ನಾಳೆ ಸಂಜೆಯೊಳಗೆ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳದೇ ಇದ್ದರೆ ಜೂನ್ 5ಕ್ಕೆ ಬೆಂಗಳೂರಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟದ ಬಿಸಿ ಥಿಯೇಟರ್‌ಗಳಿಗೆ ತಟ್ಟುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ