newsfirstkannada.com

×

ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌.. CCTV ಸಿಕ್ಕಿಲ್ಲ, ಡ್ಯಾಶ್‌ ಬೋರ್ಡ್‌ ಕ್ಯಾಮೆರಾನೂ ಇಲ್ವಾ? ಪತಿ ಭಾವುಕ!

Share :

Published November 5, 2024 at 2:12pm

Update November 5, 2024 at 2:13pm

    ಮುಂದಿನ ತಿಂಗಳು ಕಾಶಿಗೆ ಹೋಗಲು ಪ್ಲಾನ್ ಮಾಡಿದ್ದ ಸಂಧ್ಯಾ ದಂಪತಿ

    ಸಿಸಿಟಿವಿ ದೃಶ್ಯ ವಶಪಡಿಸಿಕೊಂಡಿದ್ದು ಅದು ಕ್ಲಿಯರ್ ಇಲ್ಲ ಎಂದ ಪೊಲೀಸರು

    ಸಾಯಿಸಿದ ಆರೋಪಿ ವಿರುದ್ಧ ಸೂಕ್ತ ಸಾಕ್ಷಿಗಳನ್ನ ಕಲೆ ಹಾಕಲು ಒತ್ತಾಯ

ಬೆಂಗಳೂರು: ಬೆಂಜ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ ಸಂಧ್ಯಾ ಸಾವಿನ ಪ್ರಕರಣದ ತನಿಖೆ ಮುಂದುವರಿದಿದೆ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಂಧ್ಯಾ ಕುಟುಂಬಸ್ಥರು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆರೋಪಿ ವಿರುದ್ಧ ಸೂಕ್ತ ಸಾಕ್ಷಿಗಳನ್ನ ಕಲೆ ಹಾಕಲು ಒತ್ತಾಯ ಮಾಡಿದ್ದಾರೆ.

ಮೃತ ಸಂಧ್ಯಾ ಪತಿ ಶಿವಕುಮಾರ್ ಅವರು ಪತ್ನಿಯನ್ನ ಕಳೆದುಕೊಂಡು ಭಾವುಕರಾಗಿದ್ದು, ಮುಂದಿನ ತಿಂಗಳು ಕಾಶಿಗೆ ಹೋಗಲು ಪ್ಲಾನ್ ಮಾಡಿದ್ದೆವು. ಕಾಶಿಗೆ ಹೋಗಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಈ ರೀತಿ ಕಾಶಿಗೆ ಹೋಗಬೇಕಾಗುತ್ತೆ ಅಂತ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಪೊಲೀಸರಿಗೆ ಸಿಗದ ಸಿಸಿಟಿವಿ ಸುಳಿವು!
ಬೆಂಜ್ ಕಾರು ಡಿಕ್ಕಿಯಾಗಿ ಸಂಧ್ಯಾ ಸಾವನ್ನಪ್ಪಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದುವರೆಗೂ ಸರಿಯಾದ ಸಿಸಿಟಿವಿ ದೃಶ್ಯ ರಿಕವರಿ ಆಗಿಲ್ಲ. ರಸ್ತೆಯುದ್ದಕ್ಕೂ ಸಿಸಿಟಿವಿ ಇದ್ರೂ ಪೊಲೀಸ್ರಿಗೆ ಮಾತ್ರ ಸ್ಪಷ್ಟವಾದ ಫೂಟೇಜ್‌ಗಳು ಸಿಕ್ಕಿಲ್ಲವಂತೆ.

ಇದನ್ನೂ ಓದಿ: ‘ಫೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ’.. ಸಾವಿಗೀಡಾದ SDA ರುದ್ರಣ್ಣನ ಬಗ್ಗೆ ತಾಯಿ ಏನಂದ್ರು? 

ಈಗಾಗಲೇ ಎರಡು ಸಿಸಿಟಿವಿ ದೃಶ್ಯ ವಶಪಡಿಸಿಕೊಂಡಿದ್ದು ಅದು ಕ್ಲಿಯರ್ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮತ್ತೊಂದು ಫೂಟೇಜ್‌ಗೆ ಸರ್ವರ್ ಕನೆಕ್ಟ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸರ ಈ ತನಿಖೆಯ ಮಧ್ಯೆ ಸಂಧ್ಯಾ ಪತಿಯೇ ಸಿಸಿಟಿವಿ ಫೂಟೇಜ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Justice For Sandhya
ಸಂಧ್ಯಾ ಸಾವಿನ ಕೇಸ್‌ನಲ್ಲಿ ಪೊಲೀಸರು FIR ದಾಖಲಿಸಿದ್ದಾರೆ. ಆದರೆ ಆರೋಪಿಯ ಹೆಸರು ಉಲ್ಲೇಖ ಮಾಡಿಲ್ಲ ಎನ್ನಲಾಗಿದೆ. ಕೇವಲ ಡ್ರೈವರ್ ಹಾಗೂ ಕಾರಿನ ನಂಬರ್ ಹಾಕಿ ಕೇಸ್ ಬುಕ್ ಮಾಡಲಾಗದೆ. ಇಂಡಿಯನ್ ಮೋಟಾರ್ ವೆಹಿಕಲ್ ಆ್ಯಕ್ಟ್ 1988 ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಡ್ರಂಕ್ & ಡ್ರೈವ್ ಕೇಸ್ ಬುಕ್ ಮಾಡಿರೋ ಪೊಲೀಸರು ಆರೋಪಿ ಧನುಷ್ ಅನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಸಂಧ್ಯಾ ಸಾವಿಗೆ ನ್ಯಾಯ ಕೇಳುತ್ತಿರುವ ಕುಟುಂಬಸ್ಥರು ಅಪಘಾತಕ್ಕೆ ಕಾರಣವಾದ ಬೆಂಜ್ ಕಾರಿನಲ್ಲಿ ಡ್ಯಾಶ್ ಕ್ಯಾಮರಾ ಇರಲಿಲ್ಲ. ಸಾಮಾನ್ಯವಾಗಿ ಐಷಾರಾಮಿ ಕಾರುಗಳಲ್ಲಿ ಡ್ಯಾಶ್ ಕ್ಯಾಮೆರಾ ಇದ್ದೇ ಇರುತ್ತೆ. ಈ ಬಗ್ಗೆಯೂ ಪರಿಶೀಲನೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇಲ್ಲಿವರೆಗೂ ಸಿಸಿಟಿವಿ ಕ್ಲಿಯರ್ ಇಲ್ಲ ಎನ್ನುತ್ತಿರುವ ಪೊಲೀಸರಿಗೆ ಡ್ಯಾಶ್ ಬೋರ್ಡ್ ಕ್ಯಾಮೆರಾ ಬಗ್ಗೆಯೂ ಪರಿಶೀಲಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್‌.. CCTV ಸಿಕ್ಕಿಲ್ಲ, ಡ್ಯಾಶ್‌ ಬೋರ್ಡ್‌ ಕ್ಯಾಮೆರಾನೂ ಇಲ್ವಾ? ಪತಿ ಭಾವುಕ!

https://newsfirstlive.com/wp-content/uploads/2024/11/Sandhya-husband.jpg

Load More