/newsfirstlive-kannada/media/post_attachments/wp-content/uploads/2024/10/BMTC.jpg)
ಬೆಂಗಳೂರು: ವೈಟ್​ಫಿಲ್ಡ್​ನ ಐಟಿಪಿಎಲ್​ ಬಸ್​ ಸ್ಟಾಪ್ ಬಳಿ ಕರ್ತವ್ಯ ನಿರತ ಬಿಎಂಟಿಸಿ ಕಂಡಕ್ಟರ್​​ ಮೇಲೆ ಪ್ರಯಾಣಿಕನೊಬ್ಬ ಚಾಕು ಇರಿದ ಘಟನೆ ಮಂಗಳವಾರದಂದು ನಡೆದಿತ್ತು. ಆದರೀಗ ಅಂತಹದ್ದೇ ಬೆದರಿಕೆಯ ಘಟನೆಯೊಂದು ಸಿಲಿಕಾನ್​ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ವ್ಯಕ್ತಿಯೋರ್ವ ಕರ್ತವ್ಯ ನಿರತ ವೋಲ್ವೋ ಬಸ್​​ ಕಂಡಕ್ಟರ್​ಗೆ​ ಸ್ಕ್ರೂಡ್ರೈವರ್​​ನಿಂದ ಬೆದರಿಕೆ ಹಾಕಿದ್ದಾನೆ. ಅತ್ತಿಬೆಲೆಯಿಂದ ಮೆಜೆಸ್ಟಿಕ್ ಹೋಗುವ ವೇಳೆ ಸ್ಕ್ರೂಡ್ರೈವರ್ ನಿಂದ ಬೆದರಿಕೆ ಹಾಕಿದ್ದಾನೆ.
ಅಂದಹಾಗೆಯೇ ಇದು ಸೆಪ್ಟೆಂಬರ್​ 8ರಂದು ನಡೆದ ಘಟನೆಯಾಗಿದೆ. ಸಂಜೆ 4-15ಕ್ಕೆ ರೂಟ್ ನಂಬರ್ 360/5 KA-57 F 9002 ಬಸ್​ನಲ್ಲಿ ನಡೆದಿರುವ ಘಟನೆ ಇದಾಗಿದ್ದು, ​ಹೊಸ ರೋಡ್ ಬಸ್ ಸ್ಟಾಪ್ ಬಳಿ ಇಳಿದು ಬ್ಯಾಗ್​ನಿಂದ ಸ್ಕ್ರೂಡ್ರೈವರ್ ತೋರಿಸಿ ಬೆದರಿಸಿದ್ದಾನೆ.
ಯಾರೀತ?
ಸ್ಕ್ರೂ ಡ್ರೈವರ್​ ತೋರಿಸಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ಹೊಸ ರೋಡ್ ಬಸ್ ಸ್ಟ್ಯಾಂಡ್​​ನಲ್ಲಿ ಇಳಿದು ತನ್ನ ಬ್ಯಾಗ್​​ನಲ್ಲಿದ್ದ ಸ್ಕ್ರೂಡ್ರೈವರ್ ತೋರಿಸಿ ಚುಚ್ಚಿ ಬಿಡ್ತೀನಿ ಎಂದು ಬೆದರಿಸಿದ್ದಾನಂತೆ.
ಯಾವ ಕಾರಣಕ್ಕೆ ಹೀಗೆ ಮಾಡಿದ?
ಹೊಸ ರೋಡ್ ಬಸ್ ಸ್ಟ್ಯಾಂಡ್ ಗೆ ಹೋಗುವ ಮುನ್ನ ಕಂಡಕ್ಟರ್ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಹಿಂದಿನ ಸ್ಟಾಪ್​ನಲ್ಲಿ ಟಿಕೆಟ್ ನೀಡಬೇಕಿತ್ತು. ಹಾಗಾಗಿ ಬಸ್ ನಿಲ್ಲಿಸಿ ಎಲ್ಲಾ ಪ್ರಯಾಣಿಕರಿಗೆ ಟಿಕೆಟ್ ನೀಡಲು ಕಂಡಕ್ಟರ್ ಮುಂದಾಗಿದ್ದನು. ಇದರಿಂದ ಆಕ್ರೋಶಗೊಂಡಿದ್ದ ಪ್ರಯಾಣಿಕ ಹೊಸ ರೋಡ್ ಬಸ್ ಸ್ಟಾಪ್ ನಲ್ಲಿ ಇಳಿದು ಸ್ಕ್ರೂಡ್ರೈವರ್ ತೋರಿಸಿ ಚುಚ್ಚುತ್ತೀನಿ ನಿಮ್ಮಬ್ಬರಿಗೂ ಎಂದು ಅವಾಜ್ ಹಾಕಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us