ಬೆಚ್ಚಗಿರಿ ಬೆಂಗಳೂರಿಗರೇ; ಇಂದು ರಾತ್ರಿ ನಿಮ್ಮನ್ನು ಕಾಡಲಿದೆ ಮೈ ಕೊರೆಯುವ ಚಳಿ; IMD ಎಚ್ಚರಿಕೆ!

author-image
Gopal Kulkarni
Updated On
ಬೆಚ್ಚಗಿರಿ ಬೆಂಗಳೂರಿಗರೇ; ಇಂದು ರಾತ್ರಿ ನಿಮ್ಮನ್ನು ಕಾಡಲಿದೆ ಮೈ ಕೊರೆಯುವ ಚಳಿ; IMD ಎಚ್ಚರಿಕೆ!
Advertisment
  • ಬೆಂಗಳೂರಿಗರೇ ಇಂದು ರಾತ್ರಿ ನಿಮ್ಮನ್ನು ಕಾಡಲಿದೆ ರಣಭೀಕರ ಚಳಿ
  • ಸಿಲಿಕಾನ್ ಸಿಟಿಯ ತಾಪಮಾನ ಇಂದು ರಾತ್ರಿ ಎಷ್ಟಕ್ಕೆ ಕುಸಿಯಲಿದೆ ?
  • 14 ವರ್ಷಗಳ ಬಳಿಕ ಬೆಂಗಳೂರು ಅನುಭವಿಸಲಿರುವ ಭೀಕರ ಚಳಿ

ಇಂದು ರಾತ್ರಿ ಮಲಗುವಾಗ ಬೆಂಗಳೂರಿಗರು ಕೊಂಚ ಎಚ್ಚರಿಕೆಯಿಂದ ಇರಬೇಕು. 14 ವರ್ಷಗಳ ಬಳಿಕ ಬೆಂಗಳೂರು ಭೀಕರ ಚಳಿಯೊಂದನ್ನು ಹೊತ್ತುಕೊಂಡು ಇಂದಿನಿಂದ ಬೆಂಗಳೂರಿನ್ನು ಕಾಡಲಿದೆ. ಇದು ಭಾರತೀಯ ಹವಾಮಾನ ಇಲಾಖೆಯೇ ಕೊಟ್ಟ ಎಚ್ಚರಿಕೆ 2010ರ ಬಳಿಕ ಬೆಂಗಳೂರು ಮತ್ತೊಮ್ಮೆ ವಿಪರೀತ ಚಳಿಗೆ ಗಡಗಡ ಎಂದು ನಡುಗಲಿದೆ.

ಭಾರತೀಯ ಹವಾಮಾನ ಇಲಾಖೆ ಹೇಳುವ ಪ್ರಕಾರ ಮಂಗಳವಾರ ಅಂದ್ರೆ ಇಂದು ರಾತ್ರಿ ಬೆಂಗಳೂರಿನ ತಾಪಮಾನ ಸುಮಾರು 12.4 ಡಿಗ್ರಿ ಸೆಲ್ಸಿಯಸ್​ಗೆ ಇಳಿಯಲಿದೆಯಂತೆ. ಇದು 14 ವರ್ಷಗಳ ಬಳಿಕ ದಾಖಲೆಯ ಮಟ್ಟದಲ್ಲಿ ತಾಪಮಾನದ ಇಳಿಕೆ ಎಂದು ಐಎಂಡಿ ಹೇಳಿದೆ. ಈ ಹಿಂದೆ 2010ರಲ್ಲಿ 12.8 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೆಂಗಳೂರಿನಲ್ಲಿ ದಾಖಲಾಗಿತ್ತು. ಅದಾದ ಬಳಿಕ ಈ ಹಿಂದೆ ಎಂದೂ ಕೂಡ ಇಂತಹ ಚಳಿಯನ್ನು ಬೆಂಗಳೂರು ಅನುಭವಿಸಿರಲಿಲ್ಲ. ಇಂದು ರಾತ್ರಿ ಅಂತಹುದೇ ಚಳಿಗೆ ಬೆಂಗಳೂರಿಗರು ಪತರುಗುಟ್ಟಿ ಹೋಗುವವರಿದ್ದು. ಆದಷ್ಟು ಬೆಚ್ಚಗೆ ಇರುವುದು ಒಳ್ಳೆಯದು.

ಇದನ್ನೂ ಓದಿ:ಶಬರಿಮಲೆಯಲ್ಲಿ ಅನಾಹುತ.. ಪ್ರಾಣ ಬಿಟ್ಟ ಕನಕಪುರ ಮೂಲದ ಅಯ್ಯಪ್ಪ ಭಕ್ತ; ಅಸಲಿಗೆ ಆಗಿದ್ದೇನು?

ಡಿಸೆಂಬರ್​ನಲ್ಲಿ ಬೆಂಗಳೂರು ಸಾಮಾನ್ಯವಾಗಿ 15.7 ಡಿಗ್ರಿಸೆಲ್ಸಿಯಸ್ ತಾಪಮಾನವನ್ನು ಅನುಭವಿಸುತ್ತದೆ ಆದ್ರೆ ಈ ಬಾರಿ ತಾಪಮಾನದಲ್ಲಿ ಮೂರು ಡಿಗ್ರಿಸೆಲ್ಸಿಯಸ್​ನಷ್ಟು ಕುಸಿದಿದ್ದು ಇತ್ತೀಚೆಗೆ ಈ ಹಿಂದೆ ಎಂದೂ ಕಾಣದ ಚಳಿಯನ್ನು ಬೆಂಗಳೂರಿಗರು ಇಂದು ರಾತ್ರಿ ಅನುಭವಿಸಲಿದ್ದಾರೆ.

ಈ ಬಾರಿ ರಾಜ್ಯದಲ್ಲಾದ ವಿಪರೀತ ಮಳೆ ಹಾಗೂ ಬಂಗಾಳ ಕೊಲ್ಲಿಯಲ್ಲಾದ ವಾಯುಭಾರ ಕುಸಿತದಿಂದಾಗಿ ಸಿಲಿಕಾನ್ ಸಿಟಿಗೆ ಇಂತಹದೊಂದು ಭೀಕರ ಚಳಿಗಾಲವನ್ನು ಎದುರಿಸುವ ಪರಿಸ್ಥಿತಿ ಬಂದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆಯ ಇತಿಹಾಸವನ್ನು ನೋಡಿದರೆ, ಬೆಂಗಳೂರು ಇದಕ್ಕಿಂತ ದೊಡ್ಡ ಚಳಿಯನ್ನು 1884 ಜನವರಿ 13 ರಂದು ಅನುಭವಿಸಿತ್ತಂತೆ. ಅಂದು ಬೆಂಗಳೂರಿನ ತಾಪಮಾನ ಸುಮಾರು 7.8 ಡಿಗ್ರಿ ಸೆಲ್ಸಿಯಸ್ ಇತ್ತು. 1893 ಡಿಸೆಂಬರ್ 29 ರಂದು 8.9 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿತ್ತು. ಈ ಎರಡು ಕಾಲದಲ್ಲಿ ಬೆಂಗಳೂರು ವಿಪರೀತ ಚಳಿಯ ಅನುಭವನ್ನು ಪಡೆದಿತ್ತು ಎಂದು ಭಾರತೀಯ ಹವಾಮಾನ ಹೇಳುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment