ಮಿಡ್​ ನೈಟ್​ ಎಂಟ್ರಿ, ಬ್ರಾಂಡೆಡ್​ ಶೂ ಕದ್ದು ಪರಾರಿ.. ಬೆಂಗಳೂರಿಗರೇ ಎಚ್ಚರ! ಎಚ್ಚರ!

author-image
AS Harshith
Updated On
ಮಿಡ್​ ನೈಟ್​ ಎಂಟ್ರಿ, ಬ್ರಾಂಡೆಡ್​ ಶೂ ಕದ್ದು ಪರಾರಿ.. ಬೆಂಗಳೂರಿಗರೇ ಎಚ್ಚರ! ಎಚ್ಚರ!
Advertisment
  • ಬೆಂಗಳೂರಿಗರೇ ಶೂ ಕಳ್ಳರಿದ್ದಾರೆ ಎಚ್ಚರ..ಎಚ್ಚರ!
  • ಮನೆ ಮುಂದೆ ಶೂ ಇಡೋ ಮುನ್ನ ಎರಡು ಬಾರಿ ಯೋಚಿಸಿ
  • ಐದು ಜೋಡಿ ಶೂಗಳನ್ನ ಕದ್ದು ಪರಾರಿಯಾದ ಖತರ್ನಾಕ್​ ಕಳ್ಳ

ಕಳ್ಳನೋರ್ವ ಮನೆ ಮುಂದಿಟ್ಟಿದ್ದ ಐದು ಜೋಡಿ ಶೂಗಳನ್ನ ಕದ್ದು ಪರಾರಿಯಾದ ಘಟನೆ ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ನಡೆದಿದೆ. ಇದನ್ನು ಕಂಡು ಮನೆ ಮಾಲೀಕ ಶಾಕ್​ ಆಗಿದ್ದಾನೆ.

ಸಾಲ್ಯಾನ್ ಎಂಬುವವರು ಮನೆಯ ಮುಂದೆ ತಮ್ಮ ಐದು ಬ್ರ್ಯಾಂಡೆಡ್ ಶೂಗಳನ್ನ ಇಟ್ಟಿದ್ದರು. ಈ ವೇಳೆ ಬ್ರ್ಯಾಂಡೆಡ್ ಶೂಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಖದೀಮ ರಾತ್ರಿವೇಳೆ ಮನೆ ಮುಂದಿಟ್ಟಿದ್ದ ಐದು ಜೋಡಿ ಶೂ ಕದ್ದು ಪರಾರಿಯಾಗಿದ್ದಾನೆ.


">June 19, 2024

ಇದನ್ನೂ ಓದಿ: 39 ಕಡೆ ರಕ್ತ ಸಿಕ್ತ ಗಾಯಗಳು.. 8 ಎಲೆಕ್ಟ್ರಿಕ್ ಶಾಕ್.. ಇನ್ನೂ ಏನೇನು? ಕ್ರೌರ್ಯದ ಸತ್ಯ ಬಿಚ್ಚಿಟ್ಟ ಪೋಸ್ಟ್ ಮಾರ್ಟಮ್ ವರದಿ!

ಇನ್ನು ಬೆಳಗ್ಗೆ ಶೂ ಇಲ್ಲದಿರೋದನ್ನ ನೋಡಿ ಸಾಲ್ಯಾನ್ ಗಾಬರಿಯಾಗಿ ಅನುಮಾನದಿಂದ ಸಿಸಿಟಿವಿ ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸಲ್ಯಾನ್​ ಕಳ್ಳತನದ ವಿಡಿಯೋವನ್ನ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment