/newsfirstlive-kannada/media/post_attachments/wp-content/uploads/2024/10/Bangalore-Building-Collapse-3.jpg)
ಬೆಂಗಳೂರು: ಬಾಬುಸಾಪಾಳ್ಯದಲ್ಲಿ ಕುಸಿದು ಬಿದ್ದ 6 ಅಂತಸ್ಥಿನ ಕಟ್ಟಡದಲ್ಲಿ ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ. ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಈವರೆಗೂ ಒಟ್ಟು 8 ಜನರನ್ನ ರಕ್ಷಣೆ ಮಾಡಲಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ 6 ಅಂತಸ್ಥಿನ ಕಟ್ಟಡ ನಿನ್ನೆಯೇ ಕುಸಿದು ಬಿದ್ದಿತ್ತು. ಕಟ್ಟಡ ದುರಂತದ ಬಳಿಕ ಅಗ್ನಿ ಶಾಮಕ, SDRF, NDRF ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಟ್ಟಡ ಕಾರ್ಮಿಕರನ್ನು ರಕ್ಷಿಸಲು ಮುಂದಾಗಿದ್ದಾರೆ. ನಿನ್ನೆ ಸಂಜೆಯಿಂದಲೂ ನಿರಂತರವಾದ ಕಾರ್ಯಾಚರಣೆ ನಡೆಯುತ್ತಿದೆ.
ಶ್ವಾನದಳದ ಸಹಾಯ!
ಕುಸಿದು ಬಿದ್ದ ಕಟ್ಟಡದ ಅವಶೇಷಗಳಲ್ಲಿ 10-15 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಇದುವರೆಗೂ 8 ಜನರನ್ನು ರಕ್ಷಿಸುವಲ್ಲಿ ಮಾತ್ರ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ದುರಂತದಲ್ಲಿ ಕೆಲವರು ಸಾವನ್ನಪ್ಪಿದ್ದು 6 ಮಂದಿಯ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ಹುಡುಕಾಟ ದೊಡ್ಡ ಸವಾಲಾಗಿದ್ದು, ಶ್ವಾನದಳದ ಸಹಾಯದಿಂದ ಮಿಕ್ಕುಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವು.. 5 ಬಾರಿ ಪಕ್ಷದಿಂದ ಪಕ್ಷಕ್ಕೆ ಜಂಪ್; ಸಿ.ಪಿ ಯೋಗೇಶ್ವರ್ ರಾಜಕೀಯದ ಇತಿಹಾಸ ಇಲ್ಲಿದೆ
ಕಟ್ಟಡ ದುರಂತಕ್ಕೆ ಬಲಿಯಾದವರು!
ಬಾಬುಸಾಪಾಳ್ಯ ದುರಂತದಲ್ಲಿ ಸಾವನ್ನಪ್ಪಿದವರನ್ನು ಗುರುತಿಸಲಾಗಿದೆ. 26 ವರ್ಷದ ಬಾಬು ಹರ್ಮನ್, 35 ವರ್ಷದ ತ್ರಿಪಾಲ್, 19 ವರ್ಷದ ಮೊಹಮ್ಮದ್ ಸಾಹಿಲ್, 25 ವರ್ಷದ ಸತ್ಯರಾಜು, ಶಂಕರ್ ಹಾಗೂ ಸೊಲೋ ಪಾಶ್ವಾನ್ ಮೃತಪಟ್ಟವರು ಎನ್ನಲಾಗಿದೆ. ಈ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಬಿಹಾರ ರಾಜ್ಯದ ಮೂಲದವರಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಘೋರ ದುರಂತ.. ನಿರ್ಮಾಣ ಹಂತದ ಕಟ್ಟಡ ಕುಸಿತ; ಸಾವಿನ ಸಂಖ್ಯೆ ಏರಿಕೆ!
ಕಟ್ಟಡ ಮಾಲೀಕನ ವಿರುದ್ಧ FIR
ರಕ್ಷಣಾ ಕಾರ್ಯಾಚರಣೆಯ ಮಧ್ಯೆ ದುರಂತಕ್ಕೆ ಕಾರಣವಾದ ಬಾಬುಸಾಪಾಳ್ಯ ಕಟ್ಟಡ ಮಾಲೀಕನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕಾರ್ಮಿಕ ಹರ್ಷದ್ ಎಂಬುವವರು ನೀಡಿದ ದೂರಿನ ಮೇಲೆ ಕೇಸ್ ಹಾಕಲಾಗಿದೆ.
ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡ ಆಂಧ್ರ ಮೂಲದ ಮುನಿರಾಜು ರೆಡ್ಡಿ ಪುತ್ರ ಭುವನ್ ರೆಡ್ಡಿ ಅವರ ಹೆಸರಲ್ಲಿದೆ. ಹೀಗಾಗಿ ಭುವನ್ ರೆಡ್ಡಿ ಅವರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭುವನ್ ರೆಡ್ಡಿ ಅವರು ಆರೋಪಿ ನಂಬರ್ 1 ಆಗಿದ್ದಾರೆ. ಕಟ್ಟಡದ ಮಾಲೀಕ, ಬಿಲ್ಡಿಂಗ್ ಕಾಂಟ್ರ್ಯಾಂಕ್ಟರ್ ಸೇರೆ ಒಟ್ಟು 3 ಜನರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿ ದುರಂತಕ್ಕೆ ಕಾರಣವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ