/newsfirstlive-kannada/media/post_attachments/wp-content/uploads/2024/10/Avinash-cab-Driver.jpg)
ಬೆಂಗಳೂರು: ಕ್ಯಾಬ್ ಚಾಲಕನೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಯಿಸಿ ಬಳಿಕ ಆ*ತ್ಮಹತ್ಯೆ ಮಾಡಿಕೊಂಡ ಶಂಕೆಯೊಂದು ವ್ಯಕ್ತವಾಗಿತ್ತು. ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸಂಗತಿ ಬೆಳಕಿಗೆ ಬಂದಿತ್ತು. ಆದರೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಪಡೆದುಕೊಂಡಿದೆ.
ಕ್ಯಾಬ್ ಚಾಲಕ ಅವಿನಾಶ್ (38), ಪತ್ನಿ ಮಮತಾ (30), ಮಗಳಾದ ಅಧೀರಾ (5), ಎರಡೂವರೆ ವರ್ಷದ ಮಗ ಅಣ್ಣಯ್ಯ ಸಾವನ್ನಪ್ಪಿದವರು. ಮೊದಲಿಗೆ ಪತ್ನಿ ತನ್ನ ಮಕ್ಕಳಿಗೆ ವಿಷ ಉಣಿಸಿ, ತಾನು ಸೇವಿಸಿ ಸಾವನ್ನಪ್ಪಿದ್ದಾಳೆ. ಮನೆಗೆ ಬಂದು ಮೂವರ ಸಾವನ್ನು ಕಣ್ಣಾರೆ ಕಂಡ ಅವಿನಾಶ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಾನ್ಸ್ಟೇಬಲ್ ಮಗ, LLB ವಿದ್ಯಾರ್ಥಿ! ಬಾಬಾ ಸಿದ್ದಿಕಿ ಸಾಯಿಸಿದ ಲಾರೆನ್ಸ್ ಬಳಿ 700 ಶೂಟರ್ಗಳು!
ಅವಿನಾಶ್ ಗುಲ್ಬರ್ಗ ಮೂಲದವನಾಗಿದ್ದು, ನರಸಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದನು. ಅವಿನಾಶ್ ಸಹೋದರ ಉದಯ್ ಎಂಬಾತ ದೂರು ನೀಡಿದ ಹಿನ್ನೆಲೆ ಪರಿಶೀಲಿಸಿದಾಗ ನಾಲ್ವರು ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಸೋರಿಕೆಯಾಯ್ತು BIGG BOSS ಮಾಜಿ ಸ್ಪರ್ಧಿಯ ಖಾಸಗಿ ವಿಡಿಯೋ.. ನಟಿ ಹೇಳಿದ್ದೇನು?
ಘಟನಾ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us