newsfirstkannada.com

Bengaluru Cafe blast: ನಕಲಿ ಆಧಾರ್​ ಕಾರ್ಡ್​ ಬಳಕೆ, ಉಗ್ರರು ಹೋಟೆಲ್​​ ರೂಂ ಬುಕ್​ ಮಾಡೋ ದೃಶ್ಯ ಇಲ್ಲಿದೆ

Share :

Published April 13, 2024 at 12:55pm

Update April 13, 2024 at 12:56pm

    NIA ಬಲೆಗೆ ಬಿದ್ದ ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟರ್ಸ್​

    1862KM ದೂರದ ರಾಜ್ಯದಲ್ಲಿ ಅಡಿಗಿದ್ದವರನ್ನು ಸೆದೆಬಡಿದ ಎನ್​ಐಎ

    ಉಗ್ರರು ಹೋಟೆಲ್​ ರೂಂ ಬುಕ್​ ಮಾಡುತ್ತಿರುವ ದೃರ್ಶಯ ಸಿಸಿ

ಬೆಂಗಳೂರು: ಮಾರ್ಚ್​ 1 ರಂದು ಬೆಂಗಳೂರೇ ಬೆಚ್ಚಿ ಬಿದ್ದಿತ್ತು. ಕಾರಣ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡು 10 ಮಂದಿಗೆ ಗಾಯವಾಗಿತ್ತು. ಆದರೆ ಈ ಪ್ರಕರಣದ ತೀವ್ರ ತನಿಖೆಗೆ ಬಿದ್ದ NIA ಅಧಿಕಾರಿಗಳು ಉಗ್ರರರನ್ನು ಸೆದೆಬಡಿದಿದ್ದಾರೆ. 1862KM ದೂರದಲ್ಲಿ ಯಾರಿಗೂ ತಿಳಿಯದಂತೆ ತಲೆಮರೆಸಿಕೊಂಡಿದ್ದ ಉಗ್ರರನ್ನು ಕೊನೆಗೂ​ ಅರೆಸ್ಟ್​ ಮಾಡಿದ್ದಾರೆ.

ಕೆಫೆ ಬಾಂಬ್​ ಬ್ಲಾಸ್ಟ್ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಮತ್ತು ಮುಸ್ಸಾವಿರ್​​ ಹುಸೇನ್​ ಶಾಜಿಬ್​ ಪಶ್ಚಿಮ ಬಂಗಾಳದಲ್ಲಿ ಅಡಗಿ ಕುಳಿತ್ತಿದ್ದರು. ಇಬ್ಬರು ಉಗ್ರರನ್ನು ಇದೀಗ ಅರೆಸ್ಟ್​ ಮಾಡಿ ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ.

ಕೆಫೆ ಬ್ಲಾಸ್ಟ್ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಮತ್ತು ಮುಸ್ಸಾವಿರ್​​ ಹುಸೇನ್​ ಶಾಜಿಬ್​ ಅರೆಸ್ಟ್​ ಬೆನ್ನಲೇ ಉಗ್ರರ ವಿಡಿಯೋವೊಂದು ವೈರಲ್​ ಆಗಿದೆ. ಇಬ್ಬರು ಉಗ್ರರು ಕೋಲ್ಕತ್ತಾದ ಎಕ್ಬಲ್ಪುರ ಪ್ರದೇಶದ ಡ್ರೀಮ್​ ಅತಿಥಿ ಗೃಹಕ್ಕೆ ಬಂದು ರೂಮ್​ಗಾಗಿ ತಪಾಸಣೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ದೃಶ್ಯಯ ವೈರಲ್​ ಆಗಿದೆ.

ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್​ ಮಾಸ್ಟರ್​ ಮೈಂಡ್​​ ಏನೆಲ್ಲಾ ಹೆಸರುಗಳನ್ನು ಇಟ್ಟುಕೊಂಡಿದ್ದ ಗೊತ್ತಾ?

ಅಂದಹಾಗೆಯೇ ಈ ದೃಶ್ಯ ಮಾರ್ಚ್​ 25ರಂದು ನಡೆದ ದೃಶ್ಯವಾಗಿದೆ. ಮಾರ್ಚ್​ 28ರ ತನಕ ನಕಲಿ ಗುರುತಿನ ಚೀಟಿ, ಆಧಾರ್​ ಕಾರ್ಡ್​ ಬಳಸಿಕೊಂಡು ಅಲ್ಲೇ ಉಳಿದಿದ್ದರು.

ಕೆಫೆ ಬ್ಲಾಸ್ಟ್​ ನಡೆಸಿದ ಬಳಿಕ ಇಬ್ಬರು ಕರ್ನಾಟಕ ತೊರೆದಿದ್ದರು. ಆಗಾಗ ವಿಳಾಸ ಬದಲಾಯಿಸಿ ಕಣ್ಣು ತಪ್ಪಿಸಿಕೊಳ್ಳುತ್ತಿದ್ದರು. ಎನ್​ಐಎ ಅಧಿಕಾರಿಗಳು ಈ ಇಬ್ಬರಿಗೆ ಸುಮಾರು 18 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಕೋಲ್ಕತ್ತಾದಿಂದ 180 ಕಿ.ಮೀ ದೂರದಲ್ಲಿ ಇವರನ್ನ ಪತ್ತೆ ಹಚ್ಚಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Cafe blast: ನಕಲಿ ಆಧಾರ್​ ಕಾರ್ಡ್​ ಬಳಕೆ, ಉಗ್ರರು ಹೋಟೆಲ್​​ ರೂಂ ಬುಕ್​ ಮಾಡೋ ದೃಶ್ಯ ಇಲ್ಲಿದೆ

https://newsfirstlive.com/wp-content/uploads/2024/04/BNG-Biomb-Balst.jpg

Load More