Advertisment

ಇಡೀ ದಿನ ಸುರಿದ ಮಳೆಗೆ ತತ್ತರಿಸಿದ ಬೆಂಗಳೂರು; ಯಾವ ಏರಿಯಾದಲ್ಲಿ ಏನೇನಾಯ್ತು?

author-image
Ganesh Nachikethu
Updated On
ಉಯ್ಯೋ ಉಯ್ಯೋ ಮಳೆರಾಯ.. ಬೆಂಗಳೂರಲ್ಲಿ ಗುಡುಗು, ಸಿಡಿಲಿನ ಅಬ್ಬರ; ಎಲ್ಲೆಲ್ಲಿ ವರುಣನ ಆರ್ಭಟ?
Advertisment
  • ಮತ್ತೆ ವರುಣನ ಅಬ್ಬರಕ್ಕೆ ಬೆಂಗಳೂರು ತತ್ತರ..!
  • ರಸ್ತೆಗಳೆಲ್ಲಾ ಜಲಾವೃತ; ಮನೆಗಳಿಗೆ ನುಗ್ಗಿದ ನೀರು
  • ಉತ್ತರಹಳ್ಳಿ, ಕುಮಾರಸ್ವಾಮಿ ಲೇಔಟ್​​ ಜಲಮಯ

ಬೆಂಗಳೂರು: ಸಣ್ಣದೊಂದು​ ಬ್ರೇಕ್ ಹೇಳಿ ಹೋಗಿದ್ದ ವರುಣ ಇಂದು ಸಂಜೆಯಿಂದ ಮತ್ತೆ ಆರ್ಭಟಿಸಿದ್ದಾನೆ. ಸುರಿದ ಸಣ್ಣ ಮಳೆಗೆ ಬೆಂಗಳೂರಿನ ಹಲವು ಏರಿಯಾಗಳೆಲ್ಲಾ ತತ್ತರಿಸಿ ಹೋಗಿವೆ. ಕೆಲವು ಏರಿಯಾಗಳಲ್ಲಂತೂ ಜಲಾಸುರ ಹಲವು ಮನೆಗಳಿಗೆ ಜಲದಿಗ್ಭಂಧನ ಹಾಕಿದ್ದಾನೆ.

Advertisment

ಇದು ವರುಣ ಹಾಕಿರೋ ಜಲದಿಗ್ಭಂಧನ. ಎಲ್ಲೆಲ್ಲೂ ರಸ್ತೆಗಳ ಜಲಾವೃತ. ಮನೆಗಳಿಗೆ ನುಗ್ಗಿದ ಮಳೆ ನೀರು. ನಿವಾಸಿಗಳ ಆಕ್ರೋಶ. ಸವಾರರು ಕೂಡ ಹೈರಾಣು. ಇತ್ತೀಚೆಗಷ್ಟೇ ವರುಣನ ಪ್ರತಾಪಕ್ಕೆ ನಲುಗಿ ಹೋಗಿದ್ದ ಸಾಯಿ ಲೇಔಟ್​ ಜನ ಮತ್ತೆ ಮಳೆರಾಯನ ಉಗ್ರರೂಪಕ್ಕೆ ತತ್ತರಿಸಿ ಹೋಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ವರುಣನ ಆರ್ಭಟಕ್ಕೆ ಆರ್​.ಆರ್​ ನಗರ ಜಲಾವೃತ

ಅಕ್ಷರಷಃ ಕೆಸರು ಗದ್ದೆ. ಚರಂಡಿಗಳಲ್ಲಿ ಹರಿಯಬೇಕಾದ ನೀರು ರಸ್ತೆ ಮೇಲೆ, ಮನೆಗಳಿಗೆ ಬಂದು ನಿಂತಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಜಲಾಸುರ ದಿಗ್ಭಂಧನ ಹಾಕಿದ್ದು, ಏರಿಯಾ ಜನರಂತೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್​.ಆರ್​ ನಗರದ ಡಬಲ್ ರೋಡ್​ ಸ್ಥಿತಿ ಎಂದು ಅಕ್ಷರಷಃ ಕೊಳಚೆ ಮೋರಿಗೂ ಕಡೆಯಾಗಿತ್ತು.

publive-image

ಉತ್ತರಹಳ್ಳಿ, ಕುಮಾರಸ್ವಾಮಿ ಲೇಔಟ್​​ ಜಲಮಯ

ಉತ್ತರಹಳ್ಳಿಯಲ್ಲಿ ಮಳೆ ಆರ್ಭಟಕ್ಕೆ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಸವಾರರು ಫುಲ್ ಸುಸ್ತೂ. ಇತ್ತ ಕುಮಾರಸ್ವಾಮಿ ಲೇಔಟ್​ನಲ್ಲೂ ಅದೇ ಕಥೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯ್ತು.

Advertisment

ಸುರಿದಿದ್ದು ಸಣ್ಣ ಮಳೆಯಾದ್ರೂ ಬೆಂಗಳೂರಿನ ಹಲವು ಏರಿಯಾಗಳು ನೀರಲ್ಲಿ ಮುಳುಗಿ ಹೋಗಿವೆ. ಮನೆಗಳಿಗೆಲ್ಲಾ ನೀರು ನುಗ್ಗಿ, ಜನರು ಕಣ್ಣೀರು ಸುರಿಸುವಂತಾಗಿದೆ. ಆದ್ರೆ, ಇಷ್ಟಾದ್ರು ಜನರು ಕಷ್ಟ ಕೇಳದೇ ಬಿಬಿಎಂಪಿ, ಸರ್ಕಾರ ಕಿವುಡಾಗಿದ್ಯಾ? ಎಂದು ಜನ ಕೆಂಡಮಂಡಲ ಆಗಿದ್ದಾರೆ.

ಇದನ್ನೂ ಓದಿ: ಸುವರ್ಣಾವಕಾಶ ಕೈಚೆಲ್ಲಿದ ಕನ್ನಡಿಗ; 2ನೇ ಟೆಸ್ಟ್​​ಗೆ ಮುನ್ನ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment