ಬೆಂಗಳೂರಿನಲ್ಲಿ ಮಕ್ಕಳ ಬಿಸಿಯೂಟಕ್ಕಿಂತ ಬೀದಿನಾಯಿ ಊಟದ ಬೆಲೆ ಹೆಚ್ಚಾಯ್ತಾ..? ಏನಿದು ಚಿಕನ್ ರೈಸ್ ಕಥೆ?

author-image
Veena Gangani
Updated On
ಬೆಂಗಳೂರಿನಲ್ಲಿ ಮಕ್ಕಳ ಬಿಸಿಯೂಟಕ್ಕಿಂತ ಬೀದಿನಾಯಿ ಊಟದ ಬೆಲೆ ಹೆಚ್ಚಾಯ್ತಾ..? ಏನಿದು ಚಿಕನ್ ರೈಸ್ ಕಥೆ?
Advertisment
  • ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆ ಜಾರಿ
  • ನಾಯಿಗಳಿಗೆ ಚಿಕನ್ ರೈಸ್ ನೀಡಲು 2.80 ಕೋಟಿ ಖರ್ಚು ಮಾಡಲು BBMP ನಿರ್ಧಾರ
  • ಬಿಬಿಎಂಪಿಯ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಶುರುವಾಯ್ತು ಪರ- ವಿರೋಧ ಚರ್ಚೆ

ಬೆಂಗಳೂರು: ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರ ಬಗ್ಗೆ ಈಗ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಪ್ರಾಣಿ ಪ್ರಿಯರು ಬೀದಿನಾಯಿಗಳಿಗೆ ಚಿಕನ್ ರೈಸ್ ನೀಡುವುದಕ್ಕೆ ಬೆಂಬಲ ಸೂಚಿಸಿದರೇ, ಮತ್ತೆ ಕೆಲವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಬೆಂಗಳೂರಿನ ಬಡಜನರಿಗೆ ಸರಿಯಾಗಿ ಮೊದಲು ಪೌಷ್ಠಿಕಾಂಶದ ಊಟ ನೀಡಬೇಕು. ಬೀದಿ ನಾಯಿಗಳಿಗೆ ಬಿಬಿಎಂಪಿಯೇ ಚಿಕನ್ ರೈಸ್ ನೀಡಿದ್ರೆ, ಚಿಕನ್ ರೈಸ್ ಸಿಗದಿದ್ದಾಗ, ಬೀದಿನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಆಗ ನಮ್ಮೆಲ್ಲರ ಗತಿ ಏನು ಎಂಬ ಪ್ರಶ್ನೆಯನ್ನು ಜನರು ಎತ್ತಿದ್ದಾರೆ.

ಇದನ್ನೂ ಓದಿ: ಗಗನಾಳ ಸಾಧನೆ ಬಗ್ಗೆ ಮನಸಾರೆ ಹಾಡಿ ಹೊಗಳಿದ ಸ್ಟಾರ್​.. ರಮೇಶ್ ಅರವಿಂದ್ ಹೇಳಿದ್ದೇನು..?

publive-image

ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆಗೆ 2.80 ಕೋಟಿ ರೂಪಾಯಿ ಹಣ ಖರ್ಚು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಆದರೇ, ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು ರಾಜ್ಯ ಸರ್ಕಾರದ ಬಳಿ ಇಲ್ಲದೇ, ದಾನಿಗಳನ್ನು ಹುಡುಕುತ್ತಿದೆ. ಇಂಥ ಸ್ಥಿತಿಯಲ್ಲಿ ಬೀದಿ ನಾಯಿಗಳಿಗೆ 2.80 ಕೋಟಿ ರೂಪಾಯಿ ಹಣ ಖರ್ಚು ಮಾಡಿ ಚಿಕನ್ ರೈಸ್ ನೀಡಬೇಕೇ ಎಂದು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಶ್ನಿಸಿದ್ದಾರೆ.  ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಓರ್ವ ವಿದ್ಯಾರ್ಥಿಗೆ ಬಿಸಿಯೂಟ ನೀಡಲು 12 ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಬೀದಿ ನಾಯಿಯೊಂದಕ್ಕೆ ಚಿಕನ್ ರೈಸ್ ನೀಡಲು 24 ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಅಂಕಿ ಅಂಶ ಸಮೇತ ಬೀದಿ ನಾಯಿ ಚಿಕನ್ ರೈಸ್ ಯೋಜನೆಯನ್ನು ಶಾಸಕ ಸಿ.ಕೆ.ರಾಮಮೂರ್ತಿ ತೀವ್ರವಾಗಿ ವಿರೋಧಿಸಿದ್ದಾರೆ.

publive-image

ಬ್ರ್ಯಾಂಡ್ ಬೆಂಗಳೂರು ಬದಲಾಗಿ ಬಿರಿಯಾನಿ ಬೆಂಗಳೂರು ಮಾಡಲು ಹೊರಟಿದ್ದೀರಿ ಎಂದು ಶಾಸಕ ಸಿ.ಕೆ.ರಾಮಮೂರ್ತಿ, ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆಗೆ ವ್ಯಂಗ್ಯವಾಡಿದ್ದಾರೆ. ಬೀದಿ ನಾಯಿಗೆ ಆಹಾರ ಹಾಕಲು 2 ಕೋಟಿ 80 ಲಕ್ಷ ರೂಪಾಯಿ ಖರ್ಚು ಮಾಡಲು ಬಿಬಿಎಂಪಿ ಮುಂದಾಗಿದೆ. ದುಡ್ಡು ಹೊಡೆಯಲು ಜನರ ತೆರಿಗೆ ಹಣ ಪೋಲ್ ಮಾಡ್ತಿದ್ದಾರೆ. ಸರ್ವೇ ಮಾಡಿದಾಗ 3 ರಿಂದ 4 ಲಕ್ಷ ನಾಯಿ ಇರುವ ಬಗ್ಗೆ ‌ಮಾಹಿತಿ ಇದೆ. ಆಹಾರ ನೀಡಬಾರದು ಎಂದು ಹೇಳ್ತಿಲ್ಲ. ಅದಕ್ಕೆ ದಾನಿಗಳು, ಎನ್ ಜಿಓ ಹಾಗೂ ಹೋಟೆಲ್ ನಿಂದ ಬೀದಿ ನಾಯಿಗಳಿಗೆ ಆಹಾರ ಸಿಗಲಿದೆ. ABC ಆಪರೇಷನ್ ಸಂಪೂರ್ಣ ಸ್ಥಗಿತವಾಗಿದೆ. ಇದಕ್ಕೆ ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಉಸ್ತುವಾರಿ ಡಿ.ಕೆ ಶಿವಕುಮಾರ್ ಗೆ ಉತ್ತರ ನೀಡಬೇಕು. ಬ್ರ್ಯಾಂಡ್ ಬೆಂಗಳೂರಿನ ಮೊದಲ ಮೆಟ್ಟಿಲುಗಳು ಅಂದರೆ ಬೀದಿ ನಾಯಿಗಳಿಗೆ ಬಿರಿಯಾನಿ ಹಾಕುವ ಯೋಜನೆ. ಬಡ ಮಕ್ಕಳಿಗೆ ಶೂ ಕೊಡಲು ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲ . ಡಿ.ಕೆ ಶಿವಕುಮಾರ್ ಗೆ ಕೇಳಿದ್ರೆ, ನನಗೆ ಇದರ ಬಗ್ಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ. ಈಗಾಗಲೇ ಬೀದಿ ನಾಯಿಗಳಿಗೆ ಬಿರಿಯಾನಿ ಹಾಕಲು ಟೆಂಡರ್ ಕರೆದು ಆಗಿದೆ . ಇಷ್ಟೆಲ್ಲಾ ಆದರೂ ಡಿ.ಕೆ ಶಿವಕುಮಾರ್, ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

publive-image

ಶಾಲಾ ಮಕ್ಕಳಿಗೆ ಶೂ ಕೊಡಲು ಆಗ್ತಿಲ್ಲ ಅಂತ ರಾಜ್ಯದ ಶಿಕ್ಷಣ ಸಚಿವರೇ ಹೇಳಿದ್ದಾರೆ. ಬಡ ಮಕ್ಕಳಿಗೆ ಶೂ ಕೊಡಲಾಗದವರು, ನಾಯಿಗೆ ಬಿರಿಯಾನಿ ಕೊಡುವ ಕೆಲಸ ಮಾಡ್ತಿದ್ದೀರಿ. ಮಹಾನಗರ ಪಾಲಿಕೆ ಕೆಲಸ ಬೆಂಗಳೂರು ಅಭಿವೃದ್ಧಿ ಮಾಡೋದು. ರಸ್ತೆ ಗುಂಡಿ ಬಿದ್ದಿದೆ, ಕಸ ಎತ್ತಿಲ್ಲ, ಅಪಘಾತ ಆಗಿ ಜನರು ಸಾಯ್ತಿದ್ದಾರೆ. ಇದೆಲ್ಲಾ ಕೆಲಸ ಮಾಡೋದು ಬಿಟ್ಟು, ಬೀದಿ ನಾಯಿಗಳಿಗೆ ಬಿರಿಯಾನಿ ಹಾಕ್ತೀರಾ? ಎಂದು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಶ್ನಿಸಿದ್ದಾರೆ. ಸಿಎಂ, ಡಿಸಿಎಂ ಇದಕ್ಕೆ‌ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಳಿದರೆ ಸಿಎಂ ಡಿಸಿಎಂ ಗೊತ್ತಿಲ್ಲ ಅನ್ನೋ ಹಾರಿಕೆ ಉತ್ತರ ಕೊಡ್ತಿದ್ದೀರಿ . ನಮ್ಮ ಸರ್ವೇ ಪ್ರಕಾರ ಬೆಂಗಳೂರಿನಲ್ಲಿ 8-10 ಲಕ್ಷ ಬೀದಿ ನಾಯಿಗಳಿವೆ. ಫುಟ್ ಪಾತ್ ನಲ್ಲಿ ಊಟ ಹಾಕಿ ಬಂದರೆ ಇಲಿಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಮತ್ತೆ ಇಲಿ ಜ್ವರ ಜಾಸ್ತಿ ಆಗುತ್ತದೆ. ಸಿಎಂ, ಡಿಸಿಎಂಗೆ ಇದರ ಬಗ್ಗೆ ಗಮನ ಇಲ್ಲ. ಅವರದ್ದು ಬರೀ ದೆಹಲಿ ಯಾತ್ರೆ ‌ನಡೆಯುತ್ತಿದೆ. ಬಿಜೆಪಿ ಗೆದ್ದ ಶಾಸಕರ ಕ್ಷೇತ್ರ ಓಲ್ಡ್ ಬೆಂಗಳೂರು, ಕಾಂಗ್ರೆಸ್ ಶಾಸಕರ ಕ್ಷೇತ್ರ ಬ್ರಾಂಡ್ ಬೆಂಗಳೂರು ಆಗುತ್ತಿವೆ. ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ . ಬಿಬಿಎಂಪಿ ತೆರಿಗೆ ಹಣವನ್ನು ಲೂಟಿ ಮಾಡುವ ಕೆಲಸ ಆಗುತ್ತಿದೆ. ನಾಯಿಗಳ ಎಬಿಸಿ ಆಪರೇಷನ್ ಕೇಂದ್ರಗಳು ಮುಚ್ಚಿದ್ದು ಮತ್ತೆ ತೆಗೆಯಬೇಕು.

publive-image

ಯಾವ ಪುಣ್ಯಾತ್ಮ ಚಿಕನ್ ಬಿರಿಯಾನಿ ಐಡಿಯಾ ಕೊಟ್ಟರು ಎಂದು ಬಹಿರಂಗಪಡಿಸಬೇಕು. ಟೆಂಡರ್ ರದ್ದುಪಡಿಸಲು ಸಿಎಂ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಕೊಡುತ್ತೇವೆ . ದಯವಿಟ್ಟು ಡಾಗ್ ಪಾರ್ಕ್ ಮಾಡಿ. ತುಮಕೂರು ನಾಯಿಗಳಿಗೆ ಅನ್ನ ಸಾಂಬಾರ್ ಇಲ್ಲ . ಮೈಸೂರು ನಾಯಿಗಳಿಗೆ ಎಲುಬು, ಚಿತ್ರಾನ್ನ ಇಲ್ಲ. ಬೆಂಗಳೂರು ನಾಯಿಗಳು ಪುಣ್ಯ ಮಾಡಿವೆ. ನಾಯಿಗಳಿಗೆ ವ್ಯಾಕ್ಸಿನ್, ಎಬಿಸಿ ಆಪರೇಷನ್, ಸಂತಾನ ಹರಣ ಚಿಕಿತ್ಸೆ ಇದು ಪಾಲಿಕೆ ಕೆಲಸ. ಬೀದಿ ನಾಯಿಗಳಿಂದ ಸಾರ್ವಜನಿಕರು, ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಸಮಸ್ಯೆ ಆಗಿದೆ. ಮಕ್ಕಳಿಗೆ ಬಿಸಿಯೂಟ ಕೊಡುವಾಗ ಒಂದು ಮಗುವಿಗೆ 12 ರೂ. ಖರ್ಚು ಸರ್ಕಾರ ಮಾಡುತ್ತಿದೆ. ಆದರೆ ನಾಯಿಗೆ 24 ರೂ. ಖರ್ಚು ನಿಗದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುಮಾರು ಮೂರು ಲಕ್ಷ ನಾಯಿಗಳಿವೆ  ಆದರೆ ಇವರು ಒಂದು ವಲಯದಲ್ಲಿ 400 ನಾಯಿಗಳಿಗೆ ಊಟ ಹಾಕುವುದಾಗಿ ಹೇಳಿದ್ದಾರೆ. ನಾಯಿ ನಾಯಿಗಳ ನಡುವೆ ಸಂಘರ್ಷ ತಂದಿಡುವ ಕೆಲಸ ಮಾಡಿದ್ದಾರೆ. ಈ ಯೋಜನೆ ಮಾಡಿದವರಿಗೆ ಪ್ರಶಸ್ತಿ ಕೊಡಬೇಕು. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಕೊಡಲು ದಾನಿಗಳನ್ನು ನೋಡುತ್ತಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ ನಾಯಿಗಳಿಗೆ ಊಟ ಹಾಕಲು ಹೊರಟಿದ್ದಾರೆ. ಆಗಿರುವ ಟೆಂಡರ್ ಅನ್ನು ರದ್ದು ಮಾಡಬೇಕು ಎಂದು ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment