ಕಾಲೇಜು ವಿದ್ಯಾರ್ಥಿಗಳಿಂದಲೇ ಕಿಡ್ನ್ಯಾಪ್​.. ಬೆತ್ತಲೆ ಮಾಡಿ, ಸಿಗರೇಟ್​ನಿಂದ ಚುಚ್ಚಿ, ಹಣ ರಾಬರಿ

author-image
AS Harshith
Updated On
ಕಾಲೇಜು ವಿದ್ಯಾರ್ಥಿಗಳಿಂದಲೇ ಕಿಡ್ನ್ಯಾಪ್​.. ಬೆತ್ತಲೆ ಮಾಡಿ, ಸಿಗರೇಟ್​ನಿಂದ ಚುಚ್ಚಿ, ಹಣ ರಾಬರಿ
Advertisment
  • ಮನೆ ನೋಡಲು ಹೋದವರನ್ನ ಮನೆಯೊಳಗೆ ಕೂಡಿ ಹಾಕಿ ರಾಬರಿ
  • ನೋ ಬ್ರೋಕರ್ ನಲ್ಲಿ ಮನೆ ಹುಡುಕಿಕೊಂಡು ಬಂದ ಏಳು ಜನರು
  • ಬಾಡಿಗೆ ಮನೆಗೆ ಒಳಗೆ ಹೋಗುತ್ತಿದ್ದಂತೆ ಕೈಕಾಲು ಕಟ್ಟಿ ಹಲ್ಲೆ

ಬೆಂಗಳೂರು: ಮನೆ ನೋಡಲು ಹೋದವರನ್ನ ಮನೆಯೊಳಗೆ ಕೂಡಿ ಹಾಕಿ ರಾಬರಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಸಿಗರೇಟ್ ನಿಂದ ಚುಚ್ಚಿ ಚಿತ್ರಹಿಂಸೆ ನೀಡಿ ಹಣ ರಾಬರಿ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದಲೇ ಕಿಡ್ನ್ಯಾಪ್ ಮಾಡಿ ದುಡ್ಡು ವಸೂಲಿ ಮಾಡಿದ್ದಾರೆ.

ಹುಡುಗರ ಗ್ಯಾಂಗ್​ ಕಾಲೇಜಿನಲ್ಲಿ ಎರಡು ಗುಂಪು ಕಟ್ಟಿಕೊಂಡಿದ್ದರು. ಎರಡೂ ಗುಂಪುಗಳ ನಡುವೆ ಕಾಲೇಜಿನಲ್ಲಿ ಹಲ್ಲೆ ನಡೆದಿತ್ತು. ಈ ಬಗ್ಗೆ ಮತ್ತೊಂದು ಗ್ಯಾಂಗ್ ದ್ವೇಷ ಇಟ್ಟುಕೊಂಡಿದ್ದರು. ನೋ ಬ್ರೋಕರ್ ನಲ್ಲಿ ಮನೆ ಹುಡುಕುವ ವೇಳೆ ಅಪಾರ್ಟ್​ಮೆಂಟ್ ಗೆ ಫಾಲೋ ಮಾಡಿಕೊಂಡು ಏಳು ಜನರು ಬಂದಿದ್ದಾರೆ. ಬಾಡಿಗೆ ಮನೆಯೊಳಗೆ ಹೋಗುತ್ತಿದ್ದಂತೆ ಅದೆ ಮನೆಯಲ್ಲಿ ಕೈಕಾಲು ಕಟ್ಟಿ ಹಲ್ಲೆ ಮಾಡಿದ್ದಾರೆ.

publive-image

ಇದನ್ನೂ ಓದಿ: ಜೈ ಶ್ರೀರಾಮ ಎಂದ ಯುವಕನ ಮೇಲೆ 25ಕ್ಕೂ ಹೆಚ್ಚು ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು

ಕೃಷ್ಣ ಬಾಜಪೇಯಿ ಎಂಬ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿದೆ. ಅಷ್ಟೆ ಅಲ್ಲದೆ ಬೆತ್ತಲೆ ಮಾಡಿ ವಿಡಿಯೋ ಮಾಡಿಕೊಂಡಿರುವ ಆರೋಪಿಗಳು. ಈ ಸಂಬಂಧ ಏಳು ಜನ ಆರೋಪಿಗಳನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment