/newsfirstlive-kannada/media/post_attachments/wp-content/uploads/2025/05/Dinesh-gundurao-on-covid.jpg)
ಬೆಂಗಳೂರು: ಹೆಮ್ಮಾರಿ ಕೊರೊನಾ ಮತ್ತೆ ದೇಶಾದ್ಯಂತ ಆವರಿಸಲು ಆರಂಭಿಸಿದೆ. ರಾಜ್ಯದಲ್ಲೂ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆರೋಗ್ಯ ಇಲಾಖೆ ನಾಳೆಯಿಂದಲೇ ಬೆಂಗಳೂರು ನಗರದಲ್ಲಿ ಕೊವಿಡ್ ಟೆಸ್ಟ್ ಮಾಡುವ ಲ್ಯಾಬ್‌ಗಳನ್ನು ಆರಂಭಿಸಲು ನಿರ್ಧಾರ ಮಾಡಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿರುವ ಕೊವಿಡ್ ಪ್ರಕರಣ ಅಷ್ಟೇನು ಗಂಭೀರ ಇಲ್ಲ. ಯಾರೂ ಆತಂಕ, ಭಯ ಪಡುವುದು ಬೇಡ. ಕೊವಿಡ್ ತಾಂತ್ರಿಕ ಸಮಿತಿ ಸಭೆ ಮಾಡಿದೆ. ಈಗಾಗಲೇ ರಾಜ್ಯದಲ್ಲಿ 35 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಲ್ಲಿ 32 ಪ್ರಕರಣಗಳು ಇವೆ.
ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೊವಿಡ್ ಬಂದವರಿಗೆ ಮೈಲ್ಡ್ ಸಿಂಮ್ಟಮ್ಸ್ ಇದೆ. ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ. ಉಸಿರಾಟದ ಸಮಸ್ಯೆ ಇರುವವರು ಕೊವಿಡ್ ಟೆಸ್ಟ್ ಮಾಡಿಸಬೇಕು. ಪ್ರೋಟೋಕಾಲ್ ಪ್ರಕಾರ ನಡೆದುಕೊಳ್ಳಬೇಕು. ನಾವು ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಬಂತು ಕೊರೊನಾ.. ಈ ಮೂರು ಸಾಧನಗಳು ನಿಮ್ಮ ಮನೆಯಲ್ಲಿ ಇರಲೇಬೇಕು..!
ಏನೋ ಬಂದಿದೆ ಅಂತ ಯಾರು ಭಯ ಪಡುವುದು ಬೇಡ. ಬಾಣಂತಿಯರು, ಗರ್ಭಿಣಿಯರು ಜನ ಹೆಚ್ಚು ಇರುವ ಕಡೆ ಮಾಸ್ಕ್ ಧರಿಸಬೇಕು. ಅನಾವಶ್ಯಕ ಗೊಂದಲ ಸದ್ಯಕ್ಕೆ ಬೇಡ. ಮಾಸ್ಕ್ ಎಲ್ಲರಿಗೂ ಕಡ್ಡಾಯವಲ್ಲ. ಮಾಸ್ಕ್ ಧರಿಸಿದರೆ ನಮಗೆ ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಧಿಕಾರಿಗಳ ಜೊತೆ ಆರೋಗ್ಯ ಸಚಿವರ ಮೀಟಿಂಗ್!
ಕೊವಿಡ್ ಕೇಸ್ ಹೆಚ್ಚಾದ ಹಿನ್ನೆಲೆ ನಿನ್ನೆಯೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಇಂದು ಸಂಜೆ ಅಥವಾ ರಾತ್ರಿ ಒಳಗೆ RTPCR ಟೆಸ್ಟಿಂಗ್ ಜಾಗದ ಬಗ್ಗೆ ಅಧಿಕೃತ ಮಾಹಿತಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಎಲ್ಲೆಲ್ಲಿ ಟೆಸ್ಟಿಂಗ್ ನಡೆಸಬೇಕು? ಯಾವ ಆಸ್ಪತ್ರೆ? ಯಾವ್ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋ ಬಗ್ಗೆ ಅಧಿಕಾರಿಗಳ ಜೊತೆ ಆರೋಗ್ಯ ಸಚಿವರು ಮಹತ್ವದ ಸಭೆ ನಡೆಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ