ಬೆಂಗಳೂರಲ್ಲಿ ಕೋಟಿ, ಕೋಟಿ ವಂಚಿಸಿದ ಕಿಲಾಡಿ ದಂಪತಿ ಬಂಧನ; ಖತರ್ನಾಕ್ ಪ್ಲಾನ್ ಏನು ಗೊತ್ತಾ?

author-image
admin
Updated On
ಬೆಂಗಳೂರಲ್ಲಿ ಕೋಟಿ, ಕೋಟಿ ವಂಚಿಸಿದ ಕಿಲಾಡಿ ದಂಪತಿ ಬಂಧನ; ಖತರ್ನಾಕ್ ಪ್ಲಾನ್ ಏನು ಗೊತ್ತಾ?
Advertisment
  • ಸಿಂಗಾಪುರ, ಶ್ರೀಲಂಕಾ ಸೇರಿ ಹಲವು ಕಡೆ ಜಾಲಿ ಟ್ರಿಪ್ ಹೋಗಿದ್ದರು
  • ಬೆಂಗಳೂರಿನ ತಿಲಕ್ ನಗರದಲ್ಲಿ ವಾಸಿಸುತ್ತಿದ್ದ ಕಿಲಾಡಿ ಜೋಡಿ
  • ಬರೋಬ್ಬರಿ 53 ಜನರಿಗೆ ಕೋಟಿ, ಕೋಟಿ ಪಂಗನಾಮ ಹಾಕಿದ ದಂಪತಿ

ಹಾರ್ಸ್ ರೈಡಿಂಗ್ ಜಾಕಿಗಳನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕುತ್ತಿದ್ದ ಕಿಲಾಡಿ ಜೋಡಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ಸೌತ್ ಈಸ್ಟ್ ಸೈಬರ್ ಕ್ರೈಂ ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದು, ಮೋಸದ ಜಾಲದ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಗಂಡನ ಹೆಸರು ಸಕ್ಲೇನ್ ಸುಲ್ತಾನ್, ಹೆಂಡ್ತಿ ಹೆಸರು ನಿಖಾತ್ ಸುಲ್ತಾನ. ಬೆಂಗಳೂರಿನ ತಿಲಕ್ ನಗರದಲ್ಲಿ ವಾಸಿಸುತ್ತಿದ್ದರು. ಈ ಖತರ್ನಾಕ್‌ ದಂಪತಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವೀಸಾ ಮಾಡಿಕೊಡ್ತೀವಿ ಅಂತ ಜಾಹೀರಾತು ಕೊಡುತ್ತಿದ್ದರು. ಕುದುರೆ ಓಡಿಸುವ ಜಾಕಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ವಂಚನೆ ಜಾಲಕ್ಕೆ ಬೀಳಿಸುತ್ತಿದ್ದರು.

ಈ ದಂಪತಿ ಸುಮಾರು 53 ಜನರಿಗೆ 2 ಕೋಟಿಗೂ ಅಧಿಕ ಹಣವನ್ನ ಮೋಸ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2 ಬೈಕ್, 2 ಕಾರು 66 ಲಕ್ಷ ರೂಪಾಯಿ ನಗದು ಸೇರಿ 80 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
ಇವರಿಬ್ಬರು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಸುಲ್ತಾನ್ ಇಂಟರ್ ನ್ಯಾಷನಲ್‌ ಪೇಜ್‌ನಲ್ಲಿ ಜಾಹೀರಾತು ಕೊಡುತ್ತಿದ್ದರು. ಇವರ ಜಾಹೀರಾತು ನೋಡಿ ಕಾಲ್ ಮಾಡೋರಿಗೆ ಬಣ್ಣದ ಮಾತುಗಳನ್ನಾಗಿ ಬಲೆಗೆ ಬೀಳಿಸಿಕೊಳ್ತಿದ್ರು.

ಪತ್ನಿ ನಿಖಾತ್ ಸುಲ್ತಾನ್ ಮೊದಲು ಮಾತನಾಡುತ್ತಾ ಇದ್ದಳು. ವಿದೇಶದಲ್ಲಿ ಹಲವು ಟರ್ಫ್ ಕ್ಲಬ್‌ಗಳಲ್ಲಿ ನಮಗೆ ಸಂಪರ್ಕವಿದೆ. ಅಲ್ಲಿ ಕೆಲಸ ಕೊಡಿಸ್ತೀವಿ. ಲಕ್ಷ, ಲಕ್ಷ ಸಂಬಳ ಸಿಗುತ್ತೆ ಅಂತ ಕಿಲಾಡಿ ಜೋಡಿ ನಂಬಿಸುತ್ತಿತ್ತು. ನಿಖಾತ್ ಸುಲ್ತಾನ್‌ಗೆ ಪತಿ ಸಕ್ಲೇನ್ ಸುಲ್ತಾನ್ ಸಾಥ್ ನೀಡುತ್ತಿದ್ದ.

ಇದನ್ನೂ ಓದಿ: ಜಸ್ಟ್‌ 13.50 ಸೆಕೆಂಡ್.. ಮೆಮೊರಿ ಚಾಂಪಿಯನ್​ಶಿಪ್ ಗೆದ್ದ ಭಾರತೀಯ ವಿದ್ಯಾರ್ಥಿ; ಇವನ ನೆನಪಿನ ಶಕ್ತಿ ಅದ್ಭುತ! 

ಟರ್ಫ್ ಕ್ಲಬ್‌ಗಳಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ ಮೇಲೆ ವೀಸಾ ಮಾಡಿಸಲು ಇತರೆ ಖರ್ಚಿಗೆ ಹಣ ಬೇಕು ಎಂದು ಕೇಳಿಕೊಳ್ತಿದ್ರು. ಮೊದಲು ಇಬ್ಬರಿಗೆ ಕೆಲಸ ಕೊಡಿಸಿ ನಂಬಿಕೆ ಗಳಿಸಿಕೊಂಡಿದ್ದ ಈ ಕಿಲಾಡಿ ಜೋಡಿ ಒಬ್ಬೊಬ್ಬರಿಂದ 8 ಲಕ್ಷ ಹಣ ಪಡೆದುಕೊಳ್ತಿದ್ದರು.

ಇಬ್ಬರಿಗೆ ಕೆಲಸ ಕೊಡಿಸಿದ ಬಗ್ಗೆ ಜಾಹೀರಾತು ನೀಡಿದ ಇವರು ಬೇರೆಯವರನ್ನು ಸೆಳೆಯುತ್ತಿದ್ದರು. ಹೀಗೆ ಬಣ್ಣದ ಮಾತನಾಡಿರುವ ಆರೋಪಿಗಳು ಬರೋಬ್ಬರಿ 51 ಜನರಿಗೆ ವಂಚನೆ ಮಾಡಿದ್ದಾರೆ. ಒಟ್ಟು 2 ಕೋಟಿ 64 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಕಿಲಾಡಿ ಜೋಡಿ, ಕಳೆದ ಒಂದೂವರೆ ವರ್ಷಗಳಿಂದ ಸಖತ್ ಎಂಜಾಯ್ ಮಾಡುತ್ತಿದ್ದರು. ಆರೋಪಿಗಳು ಸಿಂಗಾಪುರ, ಶ್ರೀಲಂಕಾ ಸೇರಿ ಹಲವಾರು ಕಡೆ ಜಾಲಿ ಟ್ರಿಪ್ ಕೂಡ ಮಾಡಿದ್ದರು. ಈ ಕಿಲಾಡಿ ಜೋಡಿ ಮೇಲೆ ದೂರು ದಾಖಲಾಗ್ತಿದ್ದಂತೆ ಬಲೆ ಬೀಸಿದ ಪೊಲೀಸರು ಒಂದು ವಾರದೊಳಗೆ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment