/newsfirstlive-kannada/media/post_attachments/wp-content/uploads/2024/11/CONSUMER-COURT-1.jpg)
ಬೆಂಗಳೂರು : ಮನೆಯಲ್ಲಿ ವಯಸ್ಸಿಗೆ ಬಂದ ಹುಡುಗ ಅಥವಾ ಹುಡುಗಿ ಇದ್ದರೆ, ಮದುವೆ ವಿಷಯ ಚರ್ಚೆ ಆಗೇ ಆಗುತ್ತೆ. ಇದಕ್ಕೆ ಅಂತ ಒಬ್ಬ ತಂದೆ, ತನ್ನ ಮಗನಿಗೆ ಮದುವೆ ಮಾಡಿಸೋಕೆ ವಧು ಹುಡುಕಿಕೊಡೋದಕ್ಕೆ ವಿಫಲವಾದ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಕೋರ್ಟ್, 60 ರೂಪಾಯಿ ಸಾವಿರ ದಂಡವನ್ನು ವಿಧಿಸಿದ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮ್ಯಾಟ್ರಿಮೋನಿ ಪೋರ್ಟಲ್‌ಗೆ ಈ ಮೊತ್ತದ ದಂಡವನ್ನು ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಹಾಕಿ ಆದೇಶ ಮಾಡಿದೆ. MS ನಗರದ ವಿಜಯಕುಮಾರ್ ಕೆ.ಎಸ್ ಅನ್ನೋರು ತಮ್ಮ ಮಗ ಬಾಲಾಜಿಗೆ ಹುಡುಗಿ ಹುಡುಕೋದ್ರಲ್ಲಿ ಹುಡುಕಾಟ ಮಾಡ್ತಿದ್ದರು. ಕಲ್ಯಾಣ್ ನಗರದಲ್ಲಿ ಕಚೇರಿಯನ್ನು ಹೊಂದಿರೋ ದಿಲ್ಕಿಲ್ ಮ್ಯಾಟ್ರಿಮೋನಿ ಪೋರ್ಟಲ್ ಅನ್ನು ಕಾಂಟ್ಯಾಕ್ಟ್ ಮಾಡಿದ್ರು. ಮಾರ್ಚ್ 17ನೇ ತಾರೀಖು, ವಿಜಯ ಕುಮಾರ್ ಮ್ಯಾಟ್ರಿಮೊನಿಗೆ ಅವಶ್ಯವಿರೋ ಡಾಕ್ಯುಮೆಂಟ್ಸ್ ಹಾಗೂ ಫೋಟೋಸ್ಗಳನ್ನ ಕೊಟ್ಟಿದ್ದ್ದರು. ವಧುವನ್ನು ಹುಡುಕಾಡೋದಕ್ಕೆ 30 ಸಾವಿರ ರೂಪಾಯಿ ಪೇಮೆಂಟ್ ಮಾಡಬೇಕು ಅಂತ ದಿಲ್ಕಿಲ್ ಮ್ಯಾಟ್ರಿಮೋನಿ ಡಿಮ್ಯಾಂಡ್ನಂತೆ ವಿಜಯಕುಮಾರ್ ಅಡ್ವಾನ್ಸ್ ಆಗಿ ಪೇಮೆಂಟ್ ಮಾಡಿದ್ರು. 45 ದಿನಗಳಲ್ಲಿ ಬಾಲಾಜಿಗೆ ವಧುವನ್ನು ಹುಡುಕುವುದಾಗಿ ದಿಲ್ಕಿಲ್ ಮ್ಯಾಟ್ರಿಮೋನಿ ಭರವಸೆ ಕೂಡ ಕೊಟ್ಟಿತ್ತು. ಆದರೆ ದಿಲ್ಕಿಲ್ ಮ್ಯಾಟ್ರಿಮೋನಿ ಹೇಳಿದ್ದ ಸಮಯಕ್ಕೆ ವಧುವನ್ನು ಹುಡುಕೋದಕ್ಕೆ ಆಗದೇ ವಿಫಲವಾಗಿದೆ ಅಂತ ವಿಜಯ್ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:ಮ್ಯಾಟ್ರಿಮೋನಿಯಲ್ಲಿ ಹುಡುಗಿ ಹುಡುಕುತ್ತಿರುವವರೇ ಎಚ್ಚರ.. ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!
ಅದ್ರ ಜೊತೆಗೆ, 45 ದಿನ ಆದ್ಮೇಲೂ ನನ್ನನ್ನ ಮ್ಯಾಟ್ರಿಮೊನಿ ಆಫೀಸ್ಗೆ ಅಲೆದಾಡಿಸ್ತಾ ಇದ್ದರು ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ನೊಂದ ವಿಜಯ್ಕುಮಾರ್, ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಆಗ ವಿಚಾರಣೆ ಮಾಡಿದ ನ್ಯಾಯಾಲಯ ದಿಲ್ಕಿಲ್ ಮ್ಯಾಟ್ರಿಮೊನಿಗೆ ದಂಡ ಹಾಕಿದೆ.
ಮಗನಿಗೆ 45 ದಿನಗಳ ಒಳಗೆ ವಧು ಹುಡುಕೋಕೆ ಮ್ಯಾಟ್ರಿಮೊನಿಗೆ ಬರೋಬ್ಬರಿ 30 ಸಾವಿರ ರೂಪಾಯಿ ಪೇಮೆಂಟ್ ಕೂಡ ಮಾಡಿದ್ರು. ಆದ್ರೇ ಹುಡುಗಿ ಹುಡುಕೋಕೆ ಆಗದೇ ವಿಫಲವಾದ ಮ್ಯಾಟ್ರಿಮೊನಿ ಕಂಪನಿಗೆ ಡಬಲ್ ಫೈನ್ ಅಂದ್ರೇ 60 ಸಾವಿರ ರೂಪಾಯಿ ದಂಡವನ್ನ ಕೋರ್ಟ್ ಹಾಕಿದೆ.
ಇದನ್ನೂ ಓದಿ:‘ಬೆಳದಿಂಗಳ ಬಾಲೆ’ ಸಂಧ್ಯಾ ದುರಂತ ಅಂತ್ಯ; ದುಡ್ಡಿರೋರು ಯಾರನ್ನ ಬೇಕಾದ್ರೂ ಸಾಯಿಸಬಹುದಾ? ಆಗಿದ್ದೇನು?
ಮದ್ವೆಯಾಗೋಕೆ ಸಂಗಾತಿ ಹುಡುಕಿಕೊಡ್ತೀವಿ ಅಂತಾರೆ. ಪೇಮೆಂಟ್ ಕೂಡ ತೆಗೆದುಕೊಳ್ತಾರೆ. ಆದ್ರೇ ದುಡ್ಡು ತೆಗೆದುಕೊಂಡ್ರೇ ಮುಗೀತು, ನೋಡ್ತಿದ್ದೀವಿ ಅಂತ ಹೇಳ್ತಾರೆ. ಕೋರ್ಟ್ ಸರಿಯಾದ ಪಾಠ ಕಲಿಸಿದೆ. ಆದ್ರೂ ಇನ್ನು, ಜಾಸ್ತಿನೇ ದಂಡ ಹಾಕಬೇಕಿತ್ತು ಅಂತ ಈ ಸುದ್ದಿ ನೋಡಿ ಸೋಶಿಯಲ್ ಮೀಡಿಯಾದ ಜನ ತಮ್ಮ ಅಭಿಪ್ರಾಯ ಹೇಳ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ