/newsfirstlive-kannada/media/post_attachments/wp-content/uploads/2024/04/Pushpa-2-Rule.jpg)
ಬೆಂಗಳೂರು: ನಾಳೆ ಇಡೀ ಜಗತ್ತಿನಾದ್ಯಂತ ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ರಿಲೀಸ್​ ಆಗುತ್ತಿದೆ. ಬೆಂಗಳೂರು ಸೇರಿ ವಿವಿಧೆಡೆ ಪುಷ್ಪ-2 ಸಿನಿಮಾ ಮಿಡ್​ ನೈಟ್​ ಮತ್ತು ಅರ್ಲಿ ಮಾರ್ನಿಂಗ್​​ ಶೋಗಳು ಇರಲಿವೆ ಎನ್ನಲಾಗಿತ್ತು. ಇದಕ್ಕಾಗಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡುವುದಕ್ಕೂ ಚಿತ್ರಮಂದಿರಗಳು ಅವಕಾಶ ನೀಡಿದ್ದವು. ಆದರೀಗ, ಪುಷ್ಪ-2 ಸಿನಿಮಾ ತಂಡಕ್ಕೆ ರಾಜ್ಯ ಸರ್ಕಾರ ಶಾಕ್​ ನೀಡಿದೆ.
ಕರ್ನಾಟಕ ರಾಜ್ಯ ನಿರ್ಮಾಪಕರ ಸಂಘದ ವಿರೋಧದ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಯಾವುದೇ ಥಿಯೇಟರ್​ನಲ್ಲೂ ಬೆಳಗ್ಗೆ 6.30ಕ್ಕಿಂತ ಮುಂಚಿತವಾಗಿ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡಬಾರದು ಎಂದು ಆದೇಶಿಸಿದ್ದಾರೆ. ಈ ಮೂಲಕ ಮಿಡ್​ ನೈಟ್​ ಮತ್ತು ಅರ್ಲಿ ಮಾರ್ನಿಂಗ್​ ಶೋಗಳು ರದ್ದು ಮಾಡಿದ್ದಾರೆ.
ಖಡಕ್​ ವಾರ್ನಿಂಗ್​​
ಯಾರಾದ್ರೂ ಆದೇಶ ಮೀರಿ ಅನಧಿಕೃತವಾಗಿ ಸಿನಿಮಾ ಪ್ರದರ್ಶನ ಮಾಡಿದ್ರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಬೆಳಗ್ಗೆ 6.30ಕ್ಕಿಂತ ಮುಂಚಿತವಾಗಿ ಯಾವುದಾದ್ರೂ ಚಿತ್ರಮಂದಿರ ಸಿನಿಮಾ ಶೋ ಹಾಕಿದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೂ ಸೂಚನೆ ನೀಡಲಾಗಿದೆ.
ಪತ್ರದಲ್ಲೇನಿದೆ?
ನಿಗದಿತ ಸಮಯಕ್ಕಿಂತಲೂ ಮುಂಚೆ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ ಅಡಿ ಮೂವಿ ಬೆಳಗ್ಗೆ 6.30ರ ಪ್ರದರ್ಶನ ಆಗಬೇಕು. ಅವಧಿಗೂ ಮುನ್ನ ಪ್ರದರ್ಶನಕ್ಕೆ ಬುಕ್ ಮೈ ಶೋನಲ್ಲಿ ಟಿಕೆಟ್ ಮಾರಾಟ ನಿಯಮ ಬಾಹಿರ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ