ನಡುರೋಡಲ್ಲಿ RCB ಮ್ಯಾಚ್‌ ನೋಡುತ್ತಿದ್ದ ಚಾಲಕನಿಗೆ ₹1500 ದಂಡ! ಆಗಿದ್ದೇನು?

author-image
admin
Updated On
ನಡುರೋಡಲ್ಲಿ RCB ಮ್ಯಾಚ್‌ ನೋಡುತ್ತಿದ್ದ ಚಾಲಕನಿಗೆ ₹1500 ದಂಡ! ಆಗಿದ್ದೇನು?
Advertisment
  • ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಸೆರೆಯಾದ ವಿಡಿಯೋ ಇದು!
  • ನಿನ್ನೆ ಸಂಜೆ ಮೊಬೈಲ್‌ನಲ್ಲಿ RCB ಪಂದ್ಯ ವೀಕ್ಷಿಸಿದ್ದ ವಾಹನ ಚಾಲಕ
  • ವಾಹನ ಸವಾರನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿದ ಶಿವಾಜಿನಗರ ಪೊಲೀಸರು

ಬೆಂಗಳೂರು: ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಅಭಿಮಾನಿಗಳಿಗೆ ನಿರಾಸೆ ಆದ್ರೂ ಐಪಿಎಲ್‌ ಪಂದ್ಯ ನೋಡಲು ಮುಗಿ ಬಿದ್ದಿದ್ದರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಭರ್ಜರಿ ಗೆಲುವು ಸಾಧಿಸಿತು. ಆದರೆ ಬೆಂಗಳೂರಲ್ಲಿ ನಡೆದ RCB ಮ್ಯಾಚ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದರು.

ನಿನ್ನೆ ಸಂಜೆ ದ್ವಿಚಕ್ರ ವಾಹನ ಚಾಲಕರೊಬ್ಬರು ಮೊಬೈಲ್‌ನಲ್ಲಿ RCB ಪಂದ್ಯ ವೀಕ್ಷಿಸಿದ್ದಾರೆ. ಶಿವಾಜಿನಗರದ ಬ್ರಾಡ್ ವೇ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹಿಂದೆ ಗಾಡಿ ಓಡಿಸುತ್ತಿದ್ದ ವಾಹನ ಸವಾರರು ವಿಡಿಯೋ ಮಾಡಿದ್ದರು.
ಇತ್ತೀಚೆಗೆ ಬೈಕ್ ರೈಡ್ ವೇಳೆ ಮೊಬೈಲ್‌ನಲ್ಲಿ ಐಪಿಎಲ್ ಮ್ಯಾಚ್ ನೋಡೋದು ಹೆಚ್ಚಾಗುತ್ತಿದೆ. ಹೀಗಾಗಿ ಈ ವಿಡಿಯೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿತ್ತು.

publive-image

ಈ ವಿಡಿಯೋ ಆಧಾರದಲ್ಲಿ ಶಿವಾಜಿನಗರ ಪೊಲೀಸರು ವಾಹನ ಸವಾರನನ್ನು ಪತ್ತೆ ಹಚ್ಚಿ ಪೊಲೀಸ್ ಠಾಣೆಗೆ ಕರೆಸಿದ್ದಾರೆ. ವಿಡಿಯೋದ ಆಧಾರದಲ್ಲಿ ಚಾಲಕನಿಗೆ 1500 ರೂಪಾಯಿ ದಂಡ ಹಾಕಿ ತಿಳುವಳಿಕೆ ಹೇಳಿದ್ದಾರೆ.

ಇದನ್ನೂ ಓದಿ: ಕೊಹ್ಲಿಗೆ ಬೌಲ್ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು.. ಗಿಲ್​ರ ಈ ರಿಯಾಕ್ಷನ್ ನೋಡಿದ್ರೆ ನಿಮಗೂ ಚುರ್ ಎನ್ನುತ್ತೆ -VIDEO 

ಐಪಿಎಲ್ ಮ್ಯಾಚ್ ನೋಡೋದು ಅಭಿಮಾನಿಗಳಿಗೆ ತುಂಬಾ ಇಷ್ಟ. ಆದರೆ ರಸ್ತೆಯಲ್ಲಿ ಗಾಡಿ ಓಡಿಸುವಾಗ ಮ್ಯಾಚ್ ನೋಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ದಂಡ ಹಾಕಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment