Advertisment

ಮೋದಿ ಬಜೆಟ್​ ಮೇಲೆ ದೊಡ್ಡ ನಿರೀಕ್ಷೆ.. ಬೆಂಗಳೂರು ಮಂದಿ ಬಯಸಿದ 12 ಬೇಡಿಕೆ ಇಲ್ಲಿದೆ..!

author-image
Ganesh
Updated On
ಮೋದಿ ಬಜೆಟ್​ ಮೇಲೆ ದೊಡ್ಡ ನಿರೀಕ್ಷೆ.. ಬೆಂಗಳೂರು ಮಂದಿ ಬಯಸಿದ 12 ಬೇಡಿಕೆ ಇಲ್ಲಿದೆ..!
Advertisment
  • ನಾಳೆಯ ಕೇಂದ್ರದ ಬಜೆಟ್​​ನತ್ತ ರಾಜ್ಯ ಸರ್ಕಾರದ ಚಿತ್ತ
  • ಬೆಂಗಳೂರು ಅಭಿವೃದ್ಧಿ, ಬೇಡಿಕೆಗಳ ನಿರೀಕ್ಷೆಯಲ್ಲಿ ರಾಜ್ಯ
  • ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಬೇಡಿಕೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಬಜೆಟ್ ಮಂಡನೆ ಮಾಡಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಚಿತ್ತ ಕೇಂದ್ರದ ಬಜೆಟ್​ ಮೇಲೆ ನೆಟ್ಟಿದೆ. ಬೆಂಗಳೂರು ಅಭಿವೃದ್ಧಿ, ವಿವಿಧ ಬೇಡಿಕೆಗಳ ನಿರೀಕ್ಷೆಯಲ್ಲಿ ಇಡೀ ಕರ್ನಾಟಕ ಇದೆ.

Advertisment

ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಬೇಡಿಕೆಯನ್ನಿಟ್ಟಿದೆ. ಬರೋಬ್ಬರಿ 90,000 ಕೋಟಿ ವೆಚ್ಚದ ಯೋಜನೆಗಳಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರ ಬೇಡಿಕೆಯನ್ನಿಟ್ಟಿದೆ. ಕೇಂದ್ರ ಹಣಕಾಸು ಇಲಾಖೆ ಯಾವೆಲ್ಲ ಬೇಡಿಕೆಗಳನ್ನು ಪೂರೈಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 2025 ಕೇಂದ್ರ ಬಜೆಟ್​: ಮೋದಿ ಸರ್ಕಾರದ ಮೇಲೆ ಹಿರಿಯ ನಾಗರಿಕರಿಗೆ 5 ಪ್ರಮುಖ ನಿರೀಕ್ಷೆಗಳು

ಬೆಂಗಳೂರಿಗೆ ಏನು ಬೇಡಿಕೆ?

  • ಬೆಂಗಳೂರಲ್ಲಿ ಟ್ರಾಫಿಕ್​​​ ನಿವಾರಣೆಗೆ ಟನಲ್ ರಸ್ತೆಗೆ ಅನುದಾನ
  • ಹೆಬ್ಬಾಳದ ಎಸ್ಟೀಮ್ ಮಾಲ್​ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್​​
  • ಉತ್ತರ-ದಕ್ಷಿಣ 18.5 ಕಿ.ಮೀ ಟನಲ್ ನಿರ್ಮಾಣಕ್ಕೆ ₹15 ಸಾವಿರ ಕೋಟಿ
  • ಕೆ.ಆರ್.ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ ಟನಲ್ ರಸ್ತೆ‘
  • 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ ವೆಚ್ಚ
  • ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ
  • ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರು ವಿಸ್ತರಣೆಗೆ ಗುರುತು
  • 17 ಮೇಲ್ಸೇತುವೆ, ಬಫರ್ ವಲಯ ನಿರ್ಮಾಣಕ್ಕೆ ಅನುದಾನದ ಮನವಿ
  • ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ಯೋಜನೆ
  • 8 ಪಥಗಳ 73.04 ಕಿ.ಮೀ ಉದ್ದದ ಬಿಸಿನೆಸ್ ಕಾರಿಡಾರ್ ಯೋಜನೆ
  • ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಮಾಡುವ ಯೋಜನೆ
  • ಹೆಚ್ಚುವರಿ ಬೇಡಿಕೆ ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಬೇಡಿಕೆ
Advertisment

ಇದನ್ನೂ ಓದಿ: ಇಂದಿನಿಂದ ಬಜೆಟ್ ಅಧಿವೇಶನ.. ಮೂರು ಹೊಸ ಕಾನೂನು ತರಲು ಮುಂದಾದ ಕೇಂದ್ರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment