/newsfirstlive-kannada/media/post_attachments/wp-content/uploads/2025/07/Ferrari-1.jpg)
ರಸ್ತೆ ತೆರಿಗೆ ಪಾವತಿಸದೇ ಬೆಂಗಳೂರಿನ ಬೀದಿಗಳಲ್ಲಿ ಓಡಾಡುತ್ತಿದ್ದ ಐಷಾರಾಮಿ ಸೂಪರ್‌ಕಾರು ಒಂದನ್ನ ಆರ್‌ಟಿಓ ಅಧಿಕಾರಿಗಳು (RTO Officers) ಪತ್ತೆ ಹಚ್ಚಿ, ಅದರ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾರಿನ ಮಾಲೀಕರು ಬರೋಬ್ಬರಿ 1.58 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರೋದು ಪತ್ತೆಯಾಗಿದೆ.
7.5 ಕೋಟಿ ಆರಂಭಿಕ ಬೆಲೆ ಹೊಂದಿರುವ ಕೆಂಪು ಬಣ್ಣದ ಫೆರಾರಿ SF90 ಸ್ಟ್ರಾಡೇಲ್, ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಬೀದಿಗಳಲ್ಲಿ ಸುತ್ತುತ್ತಿತ್ತು. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿದ ಕಾರು ಇದಾಗಿದೆ. ಮಹಾರಾಷ್ಟ್ರದಲ್ಲಿ 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿ 2023ರ ಸೆಪ್ಟೆಂಬರ್‌ನಿಂದಲೂ ರಾಜ್ಯದಲ್ಲಿ ಅನಧಿಕೃತವಾಗಿ ಓಡಾಟ ನಡೆಸುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಪತ್ನಿ ವಿಜಯಲಕ್ಷ್ಮೀ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದ ನಟ ದರ್ಶನ್.. ಏನು ವಿಶೇಷ ಗೊತ್ತಾ..?
ಕಾರಿನ ಅನಧಿಕೃತ ಓಡಾಟದ ಬಗ್ಗೆ ಟ್ರಾಫಿಕ್ ಪೊಲೀಸರು ಆರ್‌ಟಿಓಗೆ ಮಾಹಿತಿ ನೀಡಿದ್ದರು. ಜೂನ್ 2 ರಂದು ಬೆಂಗಳೂರಿನ ಲಾಲ್ ಬಾಗ್ ಬಳಿ ಕಾರನ್ನು ಆರ್‌ಟಿಓ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು. ಆಗ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಿಯಮ ಪಾಲಿಸದಿದ್ದರೆ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ತ್ವರಿತವಾಗಿ ಕಾರ್ಯನಿರ್ವಹಿಸಿದ ಮಾಲೀಕರು 1,41,59,041 ರೂಪಾಯಿಗಳ ಸಂಪೂರ್ಣ ಬಾಕಿ ಮತ್ತು ದಂಡವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಏಕ-ವಾಹನ ತೆರಿಗೆ ವಸೂಲಿಗಳಲ್ಲಿ ಇದು ಒಂದಾಗಿದೆ. ತೆರಿಗೆ ಪಾವತಿಗಳಿಲ್ಲದೆ ಕಾರ್ಯನಿರ್ವಹಿಸುವ ಐಷಾರಾಮಿ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ. ಫೆಬ್ರವರಿಯಲ್ಲಿ ತೆರಿಗೆ ವಂಚನೆಗಾಗಿ ಸಾರಿಗೆ ಇಲಾಖೆಯು ಫೆರಾರಿ, ಪೋರ್ಷೆ, ಬಿಎಂಡಬ್ಲ್ಯು, ಆಡಿ, ಆಸ್ಟನ್ ಮಾರ್ಟಿನ್ ಮತ್ತು ರೇಂಜ್ ರೋವರ್‌ಗಳು ಸೇರಿದಂತೆ 30 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಕೇರಳದಿಂದ ಇಂಗ್ಲೆಂಡ್ ಏರ್ಲಿಫ್ಟ್ – ಅಸಲಿಗೆ ಆಗಿದ್ದೇನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ