‘ಬೆಂಗಳೂರು ನನಗೆ ಜೀವನ ಕೊಟ್ಟಿದೆ..’ ಕೈಮುಗಿದು ಕ್ಷಮೆ ಕೇಳಿದ ಹಿಂದಿವಾಲಾ.. ಕರಗಿದ ಧಿಮಾಕು..! VIDEO

author-image
Ganesh
Updated On
‘ಬೆಂಗಳೂರು ನನಗೆ ಜೀವನ ಕೊಟ್ಟಿದೆ..’ ಕೈಮುಗಿದು ಕ್ಷಮೆ ಕೇಳಿದ ಹಿಂದಿವಾಲಾ.. ಕರಗಿದ ಧಿಮಾಕು..! VIDEO
Advertisment
  • ಹಿಂದಿಯಲ್ಲಿ ಮಾತಾಡುವಂತೆ ಆವಾಜ್ ಹಾಕಿದ್ದ
  • ಈಗ ಕನ್ನಡಿಗರ ಬಳಿ ಕ್ಷಮೆ ಕೇಳಿದ ಹಿಂದಿವಾಲಾ
  • ಇಂದಿನ ವಿಡಿಯೋದಲ್ಲಿ ಏನೆಲ್ಲ ಮಾತಾಡಿದ್ದಾನೆ..?

ಕನ್ನಡಿಗರ ಹೃದಯ ಕೆರಳಿಸಿದ್ದ ವಲಸಿ ಹಿಂದಿವಾಲಾ ಕೊನೆಗೂ ಬೆಚ್ಚಿಬಿದ್ದಿದ್ದಾನೆ. ಬೆಂಗಳೂರಿನ ಡ್ರೈವರ್ ಒಬ್ಬರಿಗೆ ಹಿಂದಿಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ್ದ. ಇದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ, ಕ್ರಮಕ್ಕಾಗಿ ಒತ್ತಾಯಿಸಿದ್ದರು. ಇದೀಗ ಅವಾಜ್ ಹೊಡೆದಿದ್ದ ಅಸಾಮಿ ಕ್ಷಮೆ ಕೇಳಿದ್ದಾನೆ.

publive-image

ಇಂದು ಏನ್ ಹೇಳಿದ್ದಾನೆ..?

ಮೊದಲಿಗೆ ಕರ್ನಾಟಕದಲ್ಲಿರುವ ಎಲ್ಲಾ ಕನ್ನಡಿಗರಿಗೂ ಕ್ಷಮೆ ಕೇಳುತ್ತೇನೆ. ನಾನು ಕಳೆದ 9 ವರ್ಷಗಳಿಂದ ಬೆಂಗಳೂರಿಗನಾಗಿದ್ದೇನೆ. ಈ ನಗರದ ಜೊತೆ ನನಗೆ ಭಾವನಾತ್ಮಕ ಕ್ಷಣವಿದೆ. ಬೆಂಗಳೂರು ನನಗೆ ಜೀವನ ಕೊಟ್ಟಿದೆ. ಬೆಂಗಳೂರು ಮೇಲೆ ಗೌರವ ಇದೆ. ಇಲ್ಲಿ ನಾನು ಸಂಪಾದನೆ ಮಾಡುತ್ತಿದ್ದೇನೆ. ನನಗೆ ಬೆಂಗಳೂರು ಅಂದರೆ ತುಂಬಾನೇ ಇಷ್ಟ. ಕನ್ನಡ ಜನತೆ ಬಗ್ಗೆ ತಪ್ಪಾಗಿ ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆ. ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕ್ಷಮೆ ಕೇಳುತ್ತೇನೆ. ನಾನು ಹೇಳಿರುವ ಬಗ್ಗೆ ವಿಷಾದ ಇದೆ.

ಏನಾಗಿತ್ತು..?

ಬೆಂಗಳೂರು ಡ್ರೈವರ್ ಒಬ್ಬರ ಜೊತೆ ಇದೇ ವ್ಯಕ್ತಿ ಕಿರಿಕ್ ಮಾಡಿಕೊಂಡಿದ್ದ. ಇಬ್ಬರ ನಡುವೆ ವಾದ, ಪ್ರತಿವಾದ ನಡೆದಿತ್ತು. ಆಗ ಚಾಲಕ ಕನ್ನಡದಲ್ಲಿ ಮಾತನಾಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಧಿಮಾಕು ತೋರಿಸಿ, ಡ್ರೈವರ್​​ಗೆ ಹಿಂದಿಯಲ್ಲಿ ಮಾತನಾಡುವಂತೆ ಬೆದರಿಕೆ ಹಾಕಿದ್ದ. ಕನ್ನಡದಲ್ಲಾದ್ರೂ ಇರು, ಬೆಂಗಳೂರಲ್ಲಾದ್ರೂ ಇರು. ನೀನು ಹಿಂದಿಯಲ್ಲಿ ಮಾತನಾಡು. ಹಿಂದಿ, ಹಿಂದಿಯಲ್ಲಿ ಮಾತನಾಡು ಅಂತಾ ಧಮ್ಕಿ ಹಾಕಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಆತನ ವಿರುದ್ಧ ಕನ್ನಡಿಗರು ಕ್ರಮಕ್ಕಾಗಿ ಆಗ್ರಹಿಸಿದ್ದರು. ಇದೀಗ ಕನ್ನಡಿಗರ ಆಕ್ರೋಶಕ್ಕೆ ಬೆಚ್ಚಿಬಿದ್ದಿರುವ ಹಿಂದಿವಾಲಾ ಕ್ಷಮೆ ಕೇಳಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment