/newsfirstlive-kannada/media/post_attachments/wp-content/uploads/2025/01/Gavi-Gangadhareshwara-Deekshita-1.jpg)
ಬೆಂಗಳೂರು: ಮಕರ ಸಂಕ್ರಾಂತಿ ಸಂಕ್ರಮಣದ ದಿನ ಆ ಪವಾಡಕ್ಕೆ ಬೆಂಗಳೂರಿನ ಜನ ಕಾಯ್ತಿದ್ರು.. ಸಾಕ್ಷಾತ್ ದಿನಕರ ಸೂರ್ಯ ಶಿವನಿಗೆ ಅಭಿಷೇಕ ಮಾಡ್ತಾನೆ. ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬಿದ್ದ ಕೂಡಲೇ ಜನ ಕೈ ಎತ್ತಿ ಮುಗೀತಿದ್ರು. ಆ ಕ್ಷಣವನ್ನ ಕಣ್ತುಂಬಿಕೊಂಡ್ರೆ ಸಾಕು ಶುಭವಾಗುತ್ತೆ ಅಂತಾ ಕಾದಿದ್ರು. ಆದ್ರೆ, ಈ ಸಂಕ್ರಮದಂದು ಜನಕ್ಕೆ ಅಕ್ಷರಶಃ ಆತಂಕ ಶುರುವಾಗಿದೆ.
ಇವತ್ತು ದಕ್ಷಿಣ ಕಾಶಿ ಅಂತಾನೇ ಕರೆಯಲ್ಪಡೋ ಬೆಂಗಳೂರಿನ ಗವಿಗಂಗಾಧರೇಶ್ವರನ್ನ ಸೂರ್ಯ ಕಿರಣ ಸ್ಪರ್ಶಿಸಲೇ ಇಲ್ಲ. ಆ ಮೂರು ನಿಮಿಷಗಳ ಮುಹೂರ್ತದಲ್ಲಿ ರವಿ ಉದಯಿಸಲೇ ಇಲ್ಲ.. ಇದು ಬಹುದೊಡ್ಡ ಗಂಡಾಂತರಕ್ಕೆ ಮುನ್ಸೂಚನೆಯೇ ಖುದ್ದು ದೇಗುಲದ ಪ್ರಧಾನ ಅರ್ಚಕ ಡಾ.ಸೋಮಸುಂದರ ದೀಕ್ಷಿತರು ಹೇಳಿದ್ದಾರೆ.
ಪ್ರತೀ ವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗ್ತಿತ್ತು. ಸಾಕ್ಷಾತ್ ಸೂರ್ಯದೇವ ಶಿವನ ಪಾದಕ್ಕೆರಗಿ ಆಶೀರ್ವಾದ ಹಾಗೂ ಅನುಮತಿ ಕೋರಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸಾಗುತ್ತಾನೆ. ಅದಕ್ಕಾಗಿಯೇ ಈ ವರ್ಷ ಶುಭ ಮುಹೂರ್ತವೂ ಇತ್ತು.
ಸೂರ್ಯರಶ್ಮಿ ಸ್ಪರ್ಶನಕ್ಕೆ ಕಾದಿದ್ದ ಜನ.. ಆ 3 ನಿಮಿಷ ಆಗಿದ್ದೇನು?
5:14 ನಿಮಿಷದಿಂದ 5:19ರವರೆಗೂ ಬಾರದ ಸೂರ್ಯ!
ಸಂಜೆ 5 ಗಂಟೆ 14 ನಿಮಿಷದಿಂದ 5 ಗಂಟೆ 19 ನಿಮಿಷದ ಮಧ್ಯೆ ಸೂರ್ಯ ದೇವ ಕಾಣಿಸಿಕೊಳ್ಳುತ್ತಾನೆ. ಗವಿ ಗಂಗಾಧರೇಶ್ವರನಿಗೆ ಕಿರಣ ಕುಸುಮಾಂಜಲಿ ಸಮರ್ಪಿಸುತ್ತಾನೆ. ಆ ದೈವಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು ಅಂತಲೇ ಭಕ್ತರ ದಂಡು ಸೇರಿತ್ತು. ಆದರೇ ಈ ವರ್ಷ ಭಕ್ತರ ನಿರೀಕ್ಷೆಯೇ ಸುಳ್ಳಾಯ್ತು. ಆ ದಿನಕರ ಚಂದ್ರಶೇಖರನನ್ನು ಸ್ಪರ್ಶಿಸೋದಕ್ಕೆ ಬರಲೇ ಇಲ್ಲ.
ಇದನ್ನೂ ಓದಿ: ಬೆಂಗಳೂರಿನ ಭಕ್ತರಿಗೆ ನಿರಾಸೆ.. ಇತಿಹಾಸದಲ್ಲೇ 3ನೇ ಬಾರಿ ಗವಿ ಗಂಗಾಧರೇಶ್ವರನ ಸ್ಪರ್ಶಿಸಲಿಲ್ಲ ಸೂರ್ಯ ರಶ್ಮಿ!
ಸೂರ್ಯ ರಶ್ಮಿ ಗಂಗಾಧರೇಶ್ವರನನ್ನ ಸ್ಪರ್ಶಿಸಲೇ ಇಲ್ಲವೇಕೆ?
ಆ ಕೆಲ ನಿಮಿಷಗಳಲ್ಲೂ ಸೂರ್ಯ ಬಾರಲಿಲ್ಲ.. ಏನಾಯ್ತು!?
ಮಕರ ಸಂಕ್ರಮಣದಂದು ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸೋ ದೈವಿಕ ಕ್ಷಣ ಮಿಸ್ ಆಗಿದ್ದು ಭಕ್ತರಲ್ಲಿ ಬಹುದೊಡ್ಡ ಭಯವನ್ನೇ ಸೃಷ್ಟಿಸಿದೆ. ಪ್ರತೀ ವರ್ಷವೂ ಸಂಕ್ರಮಣ ಸಂದರ್ಭ ಸೂರ್ಯ ರಶ್ಮಿ ಶಿವಲಿಂಗವನ್ನು ಕೆಲ ನಿಮಿಷಗಳ ಕಾಲ ತಾಕುತ್ತಿದ್ದ. ಆ ಪುಣ್ಯ ಕ್ಷಣಗಳನ್ನ ಕಣ್ತುಂಬಿಕೊಂಡರೇ ಶುಭವಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೇ, ಈ ವರ್ಷ ಸಂಕ್ರಮಣದ ಶುಭ ಮುಹೂರ್ತವಿದ್ದ ಆ ಕೆಲವು ನಿಮಿಷಗಳಲ್ಲೂ ಸಹ ಸೂರ್ಯ ಬಾರಲೇ ಇಲ್ಲ. ಹಾಗಾಗಿಯೇ ಭಕ್ತರು ಬಹುದೊಡ್ಡ ಆತಂಕವನ್ನು ಹೊರ ಹಾಕುತ್ತಿದ್ದಾರೆ.
ಈ ಹಿಂದೆಯೂ ಇದೇ ರೀತಿ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳಲೇ ಇಲ್ಲ.. ಆ ಸಂದರ್ಭ ಗವಿ ಗಂಗಾಧರೇಶ್ವರ ಸನ್ನಿಧಿಯ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತರು ಮುನ್ನೆಚ್ಚರಿಕೆಯನ್ನ ನೀಡಿದ್ದರು.
2021ರಲ್ಲೂ ಸೂರ್ಯ ಕಾಣಿಸಲಿಲ್ಲ.. ಕೊರೊನಾ ಬೆಚ್ಚಿಬೀಳಿಸಿತ್ತು!
2021ರ ಮಕರ ಸಂಕ್ರಮಣದ ಸಂದರ್ಭವೂ ಸಹ ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನನ್ನ ಸ್ಪರ್ಶಿಸಲೇ ಇಲ್ಲ. ಎಷ್ಟೋ ಹೊತ್ತು ಕಾದರೂ ಸಹ ಸೂರ್ಯ ಕಾಣಿಸಲಿಲ್ಲ. ಆ ಕ್ಷಣವೇ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತರು ಭಕ್ತರಿಗೆ ಸಂದೇಶ ನೀಡಿದ್ರು. ಆದಷ್ಟು ಎಚ್ಚರದಿಂದಿರಿ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದೆ ಅಂತ ಭವಿಷ್ಯ ನುಡಿದಿದ್ರು. ದೀಕ್ಷಿತರು ಹೇಳಿಂದತೆಯೇ ಆಯ್ತು. ಕೊರೊನಾ ಕಾಣಿಸಿಕೊಂಡು ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾವಿಗೀಡಾದ್ರು.
70 ವರ್ಷದಲ್ಲಿ ಸೂರ್ಯ ದೀಕ್ಷಿತರನ್ನ ಬೆಚ್ಚಿಬೀಳಿಸಿದ್ದು ಎಷ್ಟು ಸಲ?
ಪ್ರತೀ ಮಕರ ಸಂಕ್ರಮಣದಂದು ಶಿವಲಿಂಗದ ಮೇಲೆ ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿ ಬೀಳುತ್ತೋ? ಅಷ್ಟು ನಿಮಿಷಗಳನ್ನು ಎಣಿಸಿಕೊಂಡು ಶುಭ ಅಶುಭಗಳ ಲೆಕ್ಕವನ್ನ ಮಾಡಲಾಗುತ್ತದೆ. ಅಂತೆಯೇ ಪ್ರತೀ ವರ್ಷವೂ ಸಹ ಸೂರ್ಯದೇವ ಗವಿಗಂಗಾಧರೇಶ್ವರನ ನೆತ್ತಿಯ ಮೇಲೆ ಶರಣಾಗುವ ಮೂಲಕ ಆ ವರ್ಷದ ಒಳಿತು ಕೆಡಕುಗಳ ಸುಳಿವು ನೀಡುತ್ತಿದ್ದ. ಗವಿ ಗಂಗಾಧರೇಶ್ವರನ ಸನ್ನಿಧಿಯ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ ದೀಕ್ಷಿತರು ಸುದೀರ್ಘ 70 ವರ್ಷಗಳಿಂದ ಈ ದೈವಿಕ ಕ್ಷಣಗಳನ್ನ ಸೂಕ್ಷ್ಮವಾಗಿ ನೋಡುತ್ತಲೇ ಬಂದಿದ್ದಾರೆ. ಈ ವರ್ಷದಂತೆಯೇ ಒಂದೆರಡು ಸಲ ಸೂರ್ಯ ಕಾಣಿಸದೇ ಹೋಗಿದ್ದ ಅನ್ನೋ ವಿಚಾರ ಹೇಳುತ್ತಲೇ ಆ ವರ್ಷಗಳಲ್ಲಿ ಏನೇನಾಯ್ತು ಅನ್ನೋದನ್ನೂ ಹಂಚಿಕೊಂಡಿದ್ದಾರೆ.
2021ರಲ್ಲಿ ಕೊರೊನಾ.. 2025ಕ್ಕೆ ಜಲಗಂಡಾಂತರ!
ಪ್ರಕೃತಿ ವಿಕೋಪದ ಭವಿಷ್ಯ ಹೇಳಿದ್ದೇಕೆ ದೀಕ್ಷಿತರು?
ಶಿವನ ಅಣತಿಯೇ ಇಲ್ಲದೇ ಹುಲ್ಲು ಕಡ್ಡಿಯೂ ಅಲುಗಾಡೋದಿಲ್ಲ. ಸಾಕ್ಷಾತ್ ಸೂರ್ಯ ಚಂದ್ರರನ್ನೇ ಶಿರದಲ್ಲಿಟ್ಟುಕೊಂಡ ಚಂದ್ರಶೇಖರನ ಆಜ್ಞೆ, ಆದೇಶಗಳಿಲ್ಲದೇ ಏನೂ ನಡೆಯೋದಿಲ್ಲ ಅಂತ ಹೇಳುತ್ತಲೇ ಇದೊಂದು ಅದೊಂದು ಭವಿಷ್ಯವಾಣಿಯನ್ನೂ ಹೇಳುತ್ತಿದ್ದಾರೆ. ಆ ಭವಿಷ್ಯವಾಣಿಯೇ ಜಲಗಂಡಾಂತರ. ಪ್ರಕೃತಿ ವಿಕೋಪ.. ಈ ಮಾತುಗಳು ಇದೀಗ ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿವೆ.
ಜಲದ ಸಮಸ್ಯೆ, ಪ್ರಕೃತಿ ವಿಕೋಪಗಳು ಎದುರಾಗುತ್ತವೆ ಅನ್ನೋ ಇದೇ ಭವಿಷ್ಯವಾಣಿಯೇ ಬೆಚ್ಚಿಬೀಳಿಸ್ತಿದೆ. ಆದರೇ. ಈ ಹಿಂದೆ ಕೂಡ ಸೋಮಸುಂದರ ದೀಕ್ಷಿತರು ನುಡಿದ ಭವಿಷ್ಯದಂತೆಯೇ ಕೊರೊನಾ ಸಾಕಷ್ಟು ಸಾವು ನೋವುಗಳನ್ನು ಸೃಷ್ಟಿಸಿತ್ತು. ಆದ್ರೀಗ, ದೀಕ್ಷಿತರು ಜಲಗಂಡಾಂತರದ ಸುಳಿವು ನೀಡ್ತಿದ್ದಾರೆ. ಇತಿಹಾಸದಲ್ಲಿ ಇದು ಮೂರನೇ ಬಾರಿ ಹೀಗಾಗುತ್ತಿರುವುದು ಎನ್ನಲಾಗಿದೆ. ಮಕರ ಸಂಕ್ರಾಂತಿ ದಿನದಂದು ಇದುವರೆಗೂ ಮೂರು ಬಾರಿ ಸೂರ್ಯನ ಕಿರಣ ಲಿಂಗದ ಮೇಲೆ ಹಾದು ಹೋಗಲಿಲ್ಲ. ಇದು ಭಕ್ತರನ್ನು ಬೇಸರ ದೂಡಿದೆ. ದೀಕ್ಷಿತರ 2021ರ ಭವಿಷ್ಯದಂತೆ ಕೊರೋನಾ ಮಹಾಮಾರಿ ಅಪ್ಪಳಿಸಿ ಅಪಾರ ಸಾವು ನೋವುಗಳು ಸಂಭವಿಸಿದ್ದವು. ಈ ಬಾರಿಯೂ ಸಹ ಸೂರ್ಯರಶ್ಮಿ ಸ್ಪರ್ಶಿಸದ ಹಿನ್ನೆಲೆಯಲ್ಲಿ ಮುಂದೆ ಗಂಡಾಂತರ ಕಾದಿದ್ಯಾ ಎನ್ನುವ ಆತಂಕ ಶುರುವಾಗಿದೆ.
ಪ್ರತಿ ನಿತ್ಯ ಅಭಿಷೇಕ ಮಾಡುವ ನಮಗೆ ಬದಲಾವಣೆಗಳು ಗೋಚರವಾಗುತ್ತದೆ. ಈ ಬಾರಿ ಸೂರ್ಯನ ಕಿರಣಗಳು ಅಗೋಚರವಾಗಿತ್ತು ಎಂದಿದ್ದಾರೆ. ಪ್ರಕೃತಿ ವಿಕೋಪ ಆಗುವುದು ಬೇಡ. ಸೂರ್ಯ ಕಿರಣಗಳು ಈಶ್ವರನ ಪೂಜೆ ಮಾಡಿದೆ. ಲಿಂಗದ ಮೇಲೆ ಎಷ್ಟು ಹೊತ್ತು ಸೂರ್ಯ ಇರ್ತಾನೋ ಅದರ ಮೇಲೆ ನಾವು ಭವಿಷ್ಯ ಹೇಳುತ್ತೇವೆ. ಆದರೆ ಈ ಬಾರಿ ನಮಗೆ ಕಂಡಿಲ್ಲ. ಜಲದ ಸಂಕಟಗಳು ನಡೆಯುವ ಸಾಧ್ಯತೆ ಇದೆ ಅಂತ ಸೋಮಶೇಖರ ದೀಕ್ಷಿತ್ ಹೇಳಿದ್ದಾರೆ. 2021ರಲ್ಲಿ ಇದೇ ರೀತಿ ಆಗಿತ್ತು. ಇದೀಗ 2ನೇ ಬಾರಿ ಈ ರೀತಿ ವಿದ್ಯಮಾನ ನಡೆಯುತ್ತಿದೆ ಎಂದು ಸೋಮಶೇಖರ್ ದೀಕ್ಷಿತ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ