Advertisment

ಆಭರಣ ಪ್ರಿಯರಿಗೆ ಶಾಕ್​! ಚಿನ್ನದ ಬೆಲೆಯಲ್ಲಿ 0.20ರಷ್ಟು ಏರಿಕೆ

author-image
AS Harshith
Updated On
ಹಬ್ಬದ ಸೀಸನ್​​ನಲ್ಲಿ ಚಿನ್ನ ಖರೀದಿ ಎಷ್ಟು ಸೇಫ್​​? ನೀವು ಓದಲೇಬೇಕಾದ ಸ್ಟೋರಿ!
Advertisment
  • ಬಂಗಾರ ಬೆಲೆ ದಿಢೀರ್​ ಏರಲು ನಿಜವಾದ ಕಾರಣ?
  • 10ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಹೇಗಿದೆ ಮಾರ್ಕೆಟ್​?
  • ಬೆಳ್ಳಿ ಸ್ಥಿತಿಗತಿ ಹೇಗಿದೆ? ಖರೀದಿಸಲು ಸೂಕ್ತವೇ? ಇಲ್ಲಿದೆ ಮಾಹಿತಿ

ಆಭರಣ ಬೆಲೆ ದಿಢೀರ್​ ಏರಿಕೆಯಾಗಿದ್ದು, ಗ್ರಾಹಕರಿಗೆ ಬಹುದೊಡ್ಡ ಶಾಕ್​ ನೀಡಿದೆ. ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್ ಆಫ್ ಇಂಡಿಯಾ ಲಿಮಿಟೆಡ್​​ನಲ್ಲಿ ಚಿನ್ನದ ಬೆಲೆಗಳು ಅಭೂತಪೂರ್ವ ಮೈಲಿಗಲ್ಲನ್ನು ತಲುಪಿವೆ.

Advertisment

ಮೊದಲ ಬಾರಿಗೆ 75 ಸಾವಿರ ರೂಪಾಯಿಯಷ್ಟು ಬಂಗಾರ ಏರಿಕೆ ಕಂಡಿದ್ದು, ಸೆಪ್ಟೆಂಬರ್​ನಲ್ಲಿ 4.74%ಲಾಭವನ್ನು ಗುರುತಿಸಿದೆ. ಅತ್ತ ಚಿನ್ನ ಖರೀದಿದಾರರಿಗೆ ಬೆಲೆ ಏರಿಕೆಯಿಂದ ಖರೀದಿಸಲಾಗದೆ ಕಬ್ಬಿಣದ ಕಡಲೆಕಾಯಿಯಂತಾಗಿದೆ.

ಇದನ್ನೂ ಓದಿ: ದರ್ಶನ್​ ಹಣದ ವಹಿವಾಟಿನ ಹಿಂದೆ ಬಿದ್ದ IT ಅಧಿಕಾರಿಗಳು.. ಕೊಲೆಗೆ ಅಷ್ಟೊಂದು ದುಡ್ಡು ಕೊಟ್ಟಿದ್ಯಾರು?

ಬುಧವಾರದಂದು ಎಂಸಿಎಕ್ಸ್​ನ ಆರಂಭಿಕ ವಹಿವಾಟಿನಲ್ಲಿ ಚಿನ್ನ ಶೇ. 0.20ರಷ್ಟು ಏರಿಕೆ ಕಂಡಿದೆ. ಪ್ರತಿ 10 ಗ್ರಾಂಗೆ 75,150ಕ್ಕೆ ತಲುಪಿದೆ. ಆದರೆ ಇತ್ತ ಬೆಳ್ಳಿ ಬೆಲೆ ಮಾತ್ರ ಕುಸಿದಿದೆ. ಪ್ರತಿ ಕೆಜಿಗೆ 92,230 ರೂಪಾಯಿಯಾಗಿದೆ.

Advertisment

ಬೆಲೆ ಏರಿಕೆಗೆ ಕಾರಣ?

ಭಾರತದಲ್ಲಿ ಚಿನ್ನದ ಬೆಲೆ ದಿಢೀರ್ ಏರಿಕೆ ಕಾಣಲು ಹಲವು ಕಾರಣಗಳಿವೆ. ಅದರಲ್ಲಿ ಯುಎಸ್​​ ಡಾಲರ್​ ದುರ್ಬಲತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಚೀನಾದಲ್ಲಿ ಬಡ್ಡಿದರ ಕಡಿತವು ಪರಿಣಾಮ ಬೀರಿದೆ.

ಇದನ್ನೂ ಓದಿ: ಮಹಾಲಕ್ಷ್ಮಿ ಮನೆ ಗೋಡೆ ಮೇಲೆ ಮೂವರ ಫಿಂಗರ್ ಪ್ರಿಂಟ್​​ ಪತ್ತೆ.. ಹೆಚ್ಚಾಯ್ತು ಅನುಮಾನ

ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ?

24 ಕ್ಯಾರೆಟ್​ ಚಿನ್ನದ ​ಬೆಲೆ:

1 ಗ್ರಾಂ ಚಿನ್ನದ ಬೆಲೆ ₹ 7638
10 ಗ್ರಾಂ ಚಿನ್ನದ ಬೆಲೆ ₹76385

22 ಕ್ಯಾರೆಟ್​ ಚಿನ್ನದ ​ಬೆಲೆ:

1 ಗ್ರಾಂ ಚಿನ್ನದ ಬೆಲೆ ₹ 7002
10 ಗ್ರಾಂ ಚಿನ್ನದ ಬೆಲೆ ₹ 70025

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment