18 ವರ್ಷಗಳ ಬಳಿಕ RCBಗೆ ಒಲಿದ ಕಪ್.. ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಡೀ ತಂಡದ ಜೊತೆ ವಿಜಯೋತ್ಸವ

author-image
Veena Gangani
Updated On
RCB ವಿಜಯೋತ್ಸವ.. ಬೆಂಗಳೂರಿನ ಈ ರಸ್ತೆಗಳಲ್ಲಿ ಇಂದು ಭಾರೀ ಟ್ರಾಫಿಕ್ ಜಾಮ್‌; ಮೆಟ್ರೋ ಬಳಸಲು ಸಲಹೆ!
Advertisment
  • ಐಪಿಎಲ್-2025 ಫೈನಲ್​ನಲ್ಲಿ ಆರ್​ಸಿಬಿ ಜಯಭೇರಿ
  • IPL ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಇಂದು ಬೆಂಗಳೂರಿಗೆ ಆಗಮಿಸಲಿರುವ ಆರ್​​ಸಿಬಿ ತಂಡ

ಬೆಂಗಳೂರು: ಬರೋಬ್ಬರಿ 18 ವರ್ಷಗಳ ಬಳಿಕ ಆರ್​ಸಿಬಿ ವಿಜಯ ಪತಾಕೆ ವಿಜಯ ಪತಾಕೆ ಹಾರಿಸಿದೆ. ಪ್ರತಿ ವರ್ಷವು ಅಭಿಮಾನಿಗಳು ಈ ಸಲ ಕಪ್ ನಮ್ದೇ ಅಂತ ಹೇಳುತ್ತಿದ್ದರು. ಆದರೆ ಈ ಬಾರಿ ಕೋಟ್ಯಾಂತರ ಅಭಿಮಾನಿಗಳು ಹೆಮ್ಮೆಯಿಂದ ಹೇಳುತ್ತಿದ್ದಾರೆ ಈ ಸಲ ಕಪ್ ನಮ್ದು ಅಂತ. ಹೌದು, ಕೊನೆಗೂ ಆರ್‌ಸಿಬಿ ಕಪ್‌ ಗೆದ್ದಿದೆ. ಆರ್​ಸಿಬಿ ಮ್ಯಾಚ್​ ಗೆಲ್ಲುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಭಲೇ.. ಭೇಷ್..! ತಮಿಳುನಾಡು ಸಿಎಂ MK ಸ್ಟಾಲಿನ್ ಬೆಂಗಳೂರು ತಂಡಕ್ಕೆ, ಕೊಹ್ಲಿ ಬಗ್ಗೆ ಏನಂದ್ರು?

publive-image

ಇದೀಗ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಲು ಇಡೀ ಆರ್​ಸಿಬಿ ತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ಹೀಗಾಗಿ ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೇಲೆ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಸಿಬ್ಬಂದಿಗಳು ಓಪನ್ ಸ್ಟೇಜ್ ಮೂಲಕ ವೇದಿಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಸರ್ಕಾರದಿಂದ ಸನ್ಮಾನ ಮಾಡಲು ರೆಡಿಯಾಗ್ತಿದೆ.

publive-image

ಇಂದು ಮಧ್ಯಾಹ್ನ 1.30ಕ್ಕೆ ಆರ್​ಸಿಬಿ ತಂಡ ಬೆಂಗಳೂರಿಗೆ ಆಗಮಿಸಲಿದೆ. ಅಹಮದಾಬಾದ್​ನಿಂದ ವಿಶೇಷ ವಿಮಾನದಲ್ಲಿ ಬರುತ್ತಿರೋ ತಂಡ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಆರ್​ಸಿಬಿ ತಂಡ ಭೇಟಿ ನೀಡಲಿದೆ. ಇನ್ನೂ, ಸಿಎಂ ಸಿದ್ದರಾಮಯ್ಯನವರು ಇಂದು ಆರ್​ಸಿಬಿ ಆಟಗಾರರಿಗೆ ಸನ್ಮಾನ ಮಾಡಲಿದ್ದಾರೆ.

publive-image
ಹೀಗಾಗಿ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಿದೆ. ಆರ್​ಸಿಬಿ ತಂಡದಿಂದ 5 ರಿಂದ 6ಗಂಟೆವರೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ. ಪಾಸ್ ಅಥವಾ ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಆದಷ್ಟೂ ಅಭಿಮಾನಿಗಳು ನಮ್ಮ ಮೆಟ್ರೋಗೆ ಬನ್ನಿ. ಏಕೆಂದರೆ ಪಾರ್ಕಿಂಗ್ ಸಮಸ್ಯೆ ಆಗುವ ಸಾಧ್ಯತಯೆ ಇದ್ದು, ಹೀಗಾಗಿ ಮೆಟ್ರೋ ಬಳಸುವಂತೆ ಪೊಲೀಸ್ ಅಧಿಕಾರಿ ಸೂಚನೆ ನೀಡಿದ್ದಾರೆ.

publive-image

ಅಷ್ಟೇ ಅಲ್ಲದೇ ಈ ಬಗ್ಗೆ ಮಾತಾಡಿದ ಬೆಂಗಳೂರಿನಲ್ಲಿ DPR ಕಾರ್ಯದರ್ಶಿ ಸತ್ಯವತಿ, ವಿಧಾನಸೌಧದಲ್ಲಿ ಕೇವಲ ಸನ್ಮಾನ ಅಷ್ಟೇ ನಡೆಯುತ್ತದೆ. ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಬೇಕು. ಎದುರುಗಡೆ ಹೈಕೋರ್ಟ್ ಇದೆ, ಅಲ್ಲದೆ ಇದು ಸೂಕ್ಷ್ಮ ಪ್ರದೇಶವಿದೆ. ಹಾಗಾಗಿ ಅಭಿಮಾನಿಗಳಿಗೆ ವಿಧಾನಸೌಧದಲ್ಲಿ ಪ್ರವೇಶ ಇಲ್ಲ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment